For Quick Alerts
ALLOW NOTIFICATIONS  
For Daily Alerts

ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ 7782 ಕೋಟಿ ರುಪಾಯಿ ನಿವ್ವಳ ನಷ್ಟ

|

ನವದೆಹಲಿ, ಜೂನ್ 26: ದೇಶದ ಅತಿದೊಡ್ಡ ತೈಲ ನಿಗಮವಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 7,782 ಕೋಟಿ ರುಪಾಯಿ ಒಟ್ಟು ನಿವ್ವಳ ನಷ್ಟವನ್ನು ಅನುಭವಿಸಿದೆ.

ಇದು ಕಳೆದ ನಾಲ್ಕು ವರ್ಷದಲ್ಲೇ ಅತಿ ಹೆಚ್ಚಿನ ನಿವ್ವಳ ನಷ್ಟ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 6,004 ಕೋಟಿ ರುಪಾಯಿ ನಿವ್ವಳ ನಷ್ಟ ಅನುಭವಿಸಿತ್ತು.

ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿದು ಬಿದ್ದ ತೈಲ ಆಮದುಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿದು ಬಿದ್ದ ತೈಲ ಆಮದು

ಮತ್ತೊಂದೆಡೆ, ಕಂಪನಿಯ ಆದಾಯವು ಈ ವರ್ಷದಲ್ಲಿ 1,42,371 ಕೋಟಿ ರೂ.ಗೆ ಇಳಿದಿದೆ. ಕೊರೊನಾ ಲಾಕ್‌ಡೌನ್ ಮತ್ತು ತೈಲ ಮಾರುಕಟ್ಟೆಯ ಸನ್ನಿವೇಶಗಳಲ್ಲಿನ ಬದಲಾವಣೆಗಳಿಂದಾಗಿ ತೈಲ ಬೆಲೆಗಳಲ್ಲಿ ಗಮನಾರ್ಹ ಕುಸಿತ ಕಂಡುಬಂದಿತ್ತು. ಇದು ನಿವ್ವಳ ನಷ್ಟ ಹೆಚ್ಚಾಗಲು ಕಾರಣವಾಯಿತು ಎಂದು ಐಓಎಲ್ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ 7782 ಕೋಟಿ ರು ನಿವ್ವಳ ನಷ್ಟ

ದೀರ್ಘಾವಧಿಯ ಅವಧಿಯನ್ನು ಪರಿಗಣಿಸಿದ ಪರಿಣಾಮವಾಗಿ, ದಾಸ್ತಾನುಗಳ ಮೌಲ್ಯಮಾಪನವನ್ನು 11,304 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಐಓಎಲ್ ತಿಳಿಸಿದೆ. ಕ್ಯೂ 4 ಫಲಿತಾಂಶ ಪ್ರಕಟಣೆಯ ನಂತರ ಕಂಪನಿಯ ಷೇರುಗಳು ಶೇಕಡಾ 2.63 ರಷ್ಟು ಕುಸಿದಿವೆ.

Read more about: oil ತೈಲ ನಷ್ಟ
English summary

Coronavirus Effect: Indian Oil Corporation Reports First Quarterly Loss In 4 years

Coronavirus Effect: Indian Oil Corporation Reports First Quarterly Loss In 4 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X