ತಮ್ಮ ಟ್ರಾವೆಲ್ ಏಜೆನ್ಸಿ ವ್ಯವಹಾರದಲ್ಲಿ ತಮ್ಮ ಹೂಡಿಕೆಯ ಮೇಲೆ ಲಾಭದಾಯಕ ಆದಾಯದ ಭರವಸೆಯೊಂದಿಗೆ ಆಮಿಷವೊಡ್ಡುವ ಮೂಲಕ ಕನಿಷ್ಠ ಒಂಬತ್ತು ಜನರನ್ನು 1 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿದ ಆರೋಪಿಗಳ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿದ್ದಾರೆ.
ಸೈಯದ್ ರಿಯಾನ್ ಮತ್ತು ರಿಜ್ವಾನಾ ಅವರು ಗೊರಗುಂಟೆಪಾಳ್ಯ ನಿವಾಸಿಯೊಬ್ಬರಿಗೆ ಸೆಪ್ಟೆಂಬರ್‌ನಿಂದ ಜನವರಿವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 23.9 ಲಕ್ಷ ರೂಪಾಯಿ ವಂಚಿಸಿದ್ದಾರೆ. ನಂತರ ಅವರು ನಗರದಿಂದ ಪರಾರಿಯಾಗಿದ್ದಾರೆ.

ಆರ್‌ಎಂಸಿ ಯಾರ್ಡ್ ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
cyber crime: 48 ಲಕ್ಷ ಕಳೆದುಕೊಂಡ ಬೆಂಗಳೂರಿನ ಹಿರಿಯ ಪತ್ರಕರ್ತೆ
ದಂಪತಿಗಳು ಮೈಸೂರು ರಸ್ತೆಯಲ್ಲಿ ಪೋಸ್ಟ್‌ಪೇಯ್ಡ್ ಟೂರ್ ಪ್ಯಾಕೇಜ್‌ಗಳನ್ನು ನೀಡುವ ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಮ್ಮ ಟ್ರಾವೆಲ್ ಏಜೆನ್ಸಿಯನ್ನು ಮುಂದಿಟ್ಟುಕೊಂಡು ಅವರು ಒಂಬತ್ತು ಜನರಿಗೆ ವಂಚಿಸಿದ್ದಾರೆ ಎಂದು ಶಂಕಿಸಲಾಗಿದೆ.
ಆರಂಭದಲ್ಲಿ ತಮ್ಮ ಸ್ನೇಹಿತರ ವಲಯದ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದ ದಂಪತಿಗಳು, ಹೆಚ್ಚಿನ ಲಾಭದ ಭರವಸೆ ನೀಡಿ ತಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಲು ಅವರನ್ನು ಆಹ್ವಾನಿಸುತ್ತಾರೆ. ಹೂಡಿಕೆಯನ್ನು ಭದ್ರಪಡಿಸಿದ ನಂತರ, ದಂಪತಿಗಳು ಮತ್ತೆ ತಲೆಮರೆಸಿಕೊಳ್ಳುತ್ತಾರೆ.
ವಂಚಿಸಲು ಜನರನ್ನು ಆಕರ್ಷಿಸುವುದು!
ದಂಪತಿಗಳು ತಮ್ಮ ವ್ಯವಹಾರ ಮಾದರಿಯನ್ನು ವಿವರಿಸಿ ಸಂತ್ರಸ್ತರಿಗೆ ಆಮಿಷ ಒಡ್ಡಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ. ಅವರು ಸಂತ್ರಸ್ತರಿಗೆ ತಾವು ಪೋಸ್ಟ್‌ಪೇಯ್ಡ್ ಇಂಟರ್‌ಸಿಟಿ ಮತ್ತು ಇಂಟರ್‌ಸ್ಟೇಟ್ ಪ್ಯಾಕೇಜ್‌ಗಳನ್ನು ಸುಗಮಗೊಳಿಸುವುದಾಗಿ ಹೇಳುತ್ತಿದ್ದರು. ಇವರಲ್ಲಿ ಪ್ರವಾಸ ಪ್ಯಾಕೇಜ್ ಪಡೆಯುವ ಸಾಕಷ್ಟು ಗ್ರಾಹಕರು ಇದ್ದಾರೆ ಎಂದು ವರದಿ ಹೇಳಿದೆ.
ದಂಪತಿಗಳು ನಂತರ ಅವರು ಹೂಡಿಕೆಯ ಕೊರತೆಯಿದೆ ಎಂದು ಹೇಳುತ್ತಾರೆ. ಆದರೂ ಕೂಡಾ ಲಾಭ ಮಾತ್ರ ಉತ್ತಮವಾಗಿ ಪಡೆಯುತ್ತಾರೆ. ಗ್ರಾಹಕರು ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದಾಗ ದಂಪತಿಗಳು ಲಾಭವನ್ನು ಕೇಳಲು ಪ್ರಾರಂಭಿಸುವವರೆಗೆ ಅವರಿಂದ ಹಣವನ್ನು ಸ್ವೀಕರಿಸುತ್ತಾರೆ.
"ಈ ದಂಪತಿಗಳನ್ನು ನೆರೆಯ ರಾಜ್ಯದಲ್ಲಿ ಪತ್ತೆಹಚ್ಚಲಾಗಿದೆ. ಆದರೆ ಇನ್ನೂ ಕೂಡಾ ಬಂಧನ ಮಾಡಲಾಗಿಲ್ಲ," ಎಂದು ಅಧಿಕಾತಿ ತಿಳಿಸಿದರು. ನಗರದ ಬ್ಯಾಡರಹಳ್ಳಿ, ನಾಯಂಡಹಳ್ಳಿ, ಕಾಮಾಕ್ಷಿಪಾಳ್ಯ ಮತ್ತಿತರ ಕಡೆಯಿಂದ ಇನ್ನೂ ಎಂಟು ಮಂದಿ ಈ ವಂಚಕರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.


Click it and Unblock the Notifications