ಬಿಟ್ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಆಗಸ್ಟ್ 03ರ ಬೆಲೆ ತಿಳಿದುಕೊಳ್ಳಿ
ಕ್ರಿಪ್ಟೋಕರೆನ್ಸಿ ಸದ್ಯ ಸಾಕಷ್ಟು ಚರ್ಚೆ ಆಗುವ ವಿಷಯವಾಗಿದ್ದು, ಈಗಾಗಲೇ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಬಿಟ್ಕಾಯಿನ್ನಂತಹ ಕ್ರಿಪ್ಟೋಕರೆನ್ಸಿಗಳ ಮೇಲಿನ ನಿರ್ಬಂಧ ಹೆಚ್ಚಿದ್ದರೂ, ಅದರ ಬೇಡಿಕೆ ಮಾತ್ರ ಸಂಪೂರ್ಣ ಕಡಿಮೆಯಾಗಿಲ್ಲ.
ಭಾರತದಲ್ಲಿ ಆರ್ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಸಾಕಷ್ಟು ಏರಿಳಿತಗೊಂಡಿದ್ದರೂ ಹಣದ ಹೂಡಿಕೆ ಹೆಚ್ಚಾಗಿದೆ.
ಹಾಗಿದ್ದರೆ ಬಿಟ್ಕಾಯಿನ್ ಕ್ರಿಪ್ಟೋ ಕರೆನ್ಸಿ, ಡೋಜ್ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್ಆರ್ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಮಾಹಿತಿ ತಿಳಿಯಲು ಈ ಕೆಳಗೆ ಓದಿ.
ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ
ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 38,740.68 ಡಾಲರ್ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 2.52ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಬಿಟ್ ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 727.33 ಬಿಲಿಯನ್ ಡಾಲರ್ನಷ್ಟು ಆಗಿದೆ.
ಕಳೆದ 24 ಗಂಟೆಗಳಲ್ಲಿ, ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 40,459.91 ಡಾಲರ್ ಮತ್ತು ಕಡಿಮೆ ಬೆಲೆ 38,541.59 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 32.65 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 64,829.14 ಡಾಲರ್ನಷ್ಟು ಆಗಿದೆ.
ಜುಲೈನಲ್ಲಿ ಮಾರುತಿ, ಟಾಟಾ, ಹ್ಯುಂಡೈ ಕಾರುಗಳ ಭರ್ಜರಿ ಮಾರಾಟ
ಏನಿದು ಬಿಟ್ಕಾಯಿನ್?
ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
e-RUPI ಎಂದರೇನು? ಹೇಗೆ ಕಾರ್ಯ ನಿರ್ವಹಿಸಲಿದೆ?
ಎಥೆರಿಯಮ್ ಕ್ರಿಪ್ಟೋ ಕರೆನ್ಸಿ
ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 2,541.08 ಡಾಲರ್ನಷ್ಟು ವಹಿವಾಟು ನಡೆಸುತ್ತಿದ್ದು, ಇದು ಪ್ರಸ್ತುತ ಶೇಕಡಾ 0.47ರಷ್ಟು ಕಡಿಮೆಯಾಗಿದೆ. ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 297.17 ಬಿಲಿಯನ್ ಡಾಲರ್ನಷ್ಟು ಆಗಿದೆ.
ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 2,667.06 ಡಾಲರ್ ಮತ್ತು ಕಡಿಮೆ ಬೆಲೆ 2,519.20 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಎಥೆರಿಯಮ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 241.25 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,382.73 ಡಾಲರ್ನಷ್ಟಿದೆ.
ಎಕ್ಸ್ಆರ್ಪಿ ಕ್ರಿಪ್ಟೋ ಕರೆನ್ಸಿ
ಕ್ರಿಪ್ಟೋ ಕರೆನ್ಸಿ ಪ್ರಸ್ತುತ 0.713353 ಡಾಲರ್ನಷ್ಟು ವಹಿವಾಟು ನಡೆಸುತ್ತಿದ್ದು, ಇದು ಪ್ರಸ್ತುತ ಶೇಕಡಾ 2.88 ಷ್ಟು ಇಳಿಕೆಯಾಗಿದೆ. ಈ ಮೂಲಕ XRP ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 73.64 ಬಿಲಿಯನ್ ಡಾಲರ್ ಆಗಿದೆ.
ಕಳೆದ 24 ಗಂಟೆಗಳಲ್ಲಿ, ಎಕ್ಸ್ಆರ್ಪಿ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 0.774016 ಡಾಲರ್ ಮತ್ತು ಕಡಿಮೆ ಬೆಲೆ 0.710747 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಎಕ್ಸ್ಆರ್ಪಿ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 222.15 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಕ್ಸ್ಆರ್ಪಿ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.40 ಡಾಲರ್ನಷ್ಟಿದೆ.
ಡೋಜ್ಕಾಯಿನ್
ಡೋಜ್ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 0.1201444 ಡಾಲರ್ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 1.53ರಷ್ಟು ಕಡಿಮೆಯಾಗಿದೆ. ಈ ಮೂಲಕ ಡೋಜ್ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 26.30 ಬಿಲಿಯನ್ ಡಾಲರ್ ಆಗಿದೆ.
ಕಳೆದ 24 ಗಂಟೆಗಳಲ್ಲಿ ಡೋಜ್ಕಾಯಿನ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 0.209982 ಡಾಲರ್ ಮತ್ತು ಕಡಿಮೆ ಬೆಲೆ 0.199934 ಡಾಲರ್ ಆಗಿತ್ತು. ರಿಟರ್ನ್ಸ್ಗೆ ಸಂಬಂಧಿಸಿದಂತೆ, ಡೋಜ್ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 4,122.10 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಡೋಜ್ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 0.740796 ಡಾಲರ್ನಷ್ಟಿದೆ.