ಏರಿಕೆ ವಿಚಾರದಲ್ಲಿ ಪೆಟ್ರೋಲ್ - ಡೀಸೆಲ್ ಪ್ರತಿ ದಿನವೂ ಹೊಸ ದಾಖಲೆ ಬರೆದಿದೆ. ಭಾನುವಾರದಂದು (ಜೂನ್ 21, 2020) ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹಾಗೂ ಡೀಸೆಲ್ 60 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ಕಳೆದ ಹದಿನೈದು ದಿನದಲ್ಲಿ ಡೀಸೆಲ್ ಲೀಟರ್ ಗೆ 8.88 ರು. ಮತ್ತು ಪೆಟ್ರೋಲ್ 7.97 ರುಪಾಯಿ ಏರಿಕೆ ಕಂಡಂತಾಗಿದೆ.
ದೇಶದಾದ್ಯಂತ ತೈಲ ಬೆಲೆಯಲ್ಲಿನ ಶೇಕಡಾ 64 ಪರ್ಸೆಂಟ್ ಅಥವಾ ಲೀಟರ್ ಗೆ ರು. 50.69 ತೆರಿಗೆ ರೂಪದಲ್ಲೇ ಹಾಕಲಾಗುತ್ತದೆ. ಪೆಟ್ರೋಲ್ ಬೆಲೆಯಲ್ಲಿ 32.98 ರುಪಾಯಿ ಕೇಂದ್ರ ಅಬಕಾರಿ ಸುಂಕ ಮತ್ತು 17.71 ರುಪಾಯಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹಾಕಲಾಗುತ್ತದೆ.
ಇನ್ನು ಡೀಸೆಲ್ ಚಿಲ್ಲರೆ ಮಾರಾಟ ದರದಲ್ಲಿ 63 ಪರ್ಸೆಂಟ್ ಗೂ ಹೆಚ್ಚು ತೆರಿಗೆ ರೂಪದಲ್ಲಿ ಬೀಳುತ್ತದೆ. ಒಂದು ಲೀಟರ್ ಡೀಸೆಲ್ ಗೆ 49.43 ರುಪಾಯಿ ತೆರಿಗೆ ಬೀಳುತ್ತದೆ. ಅದರಲ್ಲಿ ಕೇಂದ್ರ ಅಬಕಾರಿ ಸುಂಕ 31.83 ರುಪಾಯಿ ಇದ್ದರೆ, ವ್ಯಾಟ್ 17.60 ರುಪಾಯಿ ಆಗುತ್ತದೆ.

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
ನವದೆಹಲಿ: ಪೆಟ್ರೋಲ್ 79.23- ಡೀಸೆಲ್ 78.27
ಗುರ್ ಗಾಂವ್: ಪೆಟ್ರೋಲ್ 77.48- ಡೀಸೆಲ್ 70.44
ಮುಂಬೈ: ಪೆಟ್ರೋಲ್ 86.04- ಡೀಸೆಲ್ 76.69
ಚೆನ್ನೈ: ಪೆಟ್ರೋಲ್ 82.58- ಡೀಸೆಲ್ 75.80
ಹೈದರಾಬಾದ್: ಪೆಟ್ರೋಲ್ 82.25- ಡೀಸೆಲ್ 76.49
ಬೆಂಗಳೂರು: ಪೆಟ್ರೋಲ್ 81.81- ಡೀಸೆಲ್ 74.43


Click it and Unblock the Notifications