Dogecoin Price Hike: ಟ್ವಿಟ್ಟರ್ ಲೋಗೋ ಬದಲಾವಣೆ: ಡಾಗಿಕಾಯಿನ್ ಕ್ರಿಪ್ಟೊ ಬೆಲೆ ಶೇ.30ರಷ್ಟು ಏರಿಕೆ

ಟ್ವಿಟ್ಟರ್‌ನ ಲೋಗೋವನ್ನು ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಬದಲಾವಣೆ ಮಾಡಿದ್ದಾರೆ. ಈ ಹಿಂದೆ ಹಕ್ಕಿಯ ಗುರುತಾಗಿದ್ದ ಟ್ವಿಟ್ಟರ್‌ನ ಲೋಗೋವನ್ನು ಈಗ ನಾಯಿಯಾಗಿ ಬದಲಾಯಿಸಲಾಗಿದೆ. ಇದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲವನ್ನು ಉಂಟು ಮಾಡಿದೆ. ಟ್ವಿಟ್ಟರ್ ತನ್ನ ಲೋಗೋವನ್ನು ಬದಲಾವಣೆ ಮಾಡಿದ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿಯಾದ ಡಾಗಿಕಾಯಿನ್ ದರವು ಶೇಕಡ 30ರಷ್ಟು ಏರಿಕೆಯಾಗಿದೆ. ಅದಕ್ಕೆ ಮುಖ್ಯ ಕಾರಣ ಟ್ವಿಟ್ಟರ್ ಲೋಗೋ ಒಂದು ಡಿಜಿಟಲ್ ಕರೆನ್ಸಿ (ಕ್ರಿಪ್ಟೋಕರೆನ್ಸಿ) ಲೋಗೋವಾಗಿರುವುದು.

ಹೌದು, 2013 ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಬಿಲ್ಲಿ ಮಾರ್ಕಸ್ ಮತ್ತು ಜಾಕ್ಸನ್ ಪಾಲ್ಮರ್‌ ಕ್ರಿಪ್ಟೋಕರೆನ್ಸಿಯಲ್ಲಿನ ಊಹಾಪೋಹಗಳ ನಡುವೆ ರಚಿಸಲಾದ ಡಾಗ್ ಚಿತ್ರವು ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ. ಈಗ ಎಲಾನ್ ಮಸ್ಕ್ ಈ ಕ್ರಿಪ್ಟೋವನ್ನು ಪ್ರೊಮೋಟ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಕೂಡಾ ಆಗುತ್ತಿದೆ. ನಾವು ಟ್ವಿಟ್ಟರ್ ಅನ್ನು ತೆರೆದಾಗ ನಮಗೆ ಎಡಭಾಗದಲ್ಲಿ ಈ ಹಿಂದೆ ಹಕ್ಕಿಯ ಲೋಗೋ ಕಾಣುತ್ತಿತ್ತು. ಆದರೆ ಈಗ ಶಿಬಾ ಇನು ಕಾರ್ಟೂನ್ ಕಾಣುತ್ತದೆ.

 ಟ್ವಿಟ್ಟರ್ ಲೋಗೋ ಬದಲಾವಣೆ: ಡಾಗಿಕಾಯಿನ್ ಕ್ರಿಪ್ಟೊ ಬೆಲೆ ಏರಿಕೆ

ಸೋಮವಾರ ವಹಿವಾಟಿನಲ್ಲಿ ಡಾಗಿಕಾಯಿನ್ ಸುಮಾರು ಶೇಕಡ 10.2ರಷ್ಟು ಏರಿಕೆಯಾಗಿ 7.7 ಸೆಂಟ್ಸ್‌ಗೆ ತಲುಪಿದೆ. ಪ್ರಸ್ತುತ ಶೇಕಡ 26ರಷ್ಟು ಏರಿಕೆಯಾಗಿ 9.8 ಸೆಂಟ್ಸ್‌ಗೆ ತಲುಪಿದೆ. ಈ ಹಿಂದೆ ಡಾಗಿಕಾಯಿನ್‌ಗೆ ಎಲಾನ್ ಮಸ್ಕ್ ಬೆಂಬಲ ಸೂಚಿಸಿದ್ದರು. ಅದರ ಕಾನೂನು ಹೋರಾಟದಲ್ಲಿಯೂ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಇನ್ನು ಈ ಲೋಗೋ ಬದಲಾವಣೆಯು ಸದ್ಯಕ್ಕೆ ವೆಬ್‌ನಲ್ಲಿ ಮಾತ್ರ ಲಭ್ಯವಿದೆ. ಮೊಬೈಲ್‌ನಲ್ಲಿ ಈ ಹೊಸ ಲೋಗೋ ಕಾಣುತ್ತಿಲ್ಲ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್‌ ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅದಾದ ನಂತರ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಟ್ವಿಟ್ಟರ್ ತನ್ನ ವೆರಿಫಿಕೇಷನ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿದ ದಿನಗಳ ನಂತರ ಲೋಗೋದಲ್ಲಿನ ಬದಲಾವಣೆಯು ಮಾಡಲಾಗಿದೆ.

ಡಾಗಿಕಾಯಿನ್ ಖರೀದಿಸಿ ಎಂದಿದ್ದ ಟೆಸ್ಲಾ

ಈ ಹಿಂದೆ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಸಂಸ್ಥೆಯು ಸರಕು ಖರೀದಿಗೆ ಇನ್ನು ಮುಂದೆ ಗ್ರಾಹಕರು ಡಾಗಿಕಾಯಿನ್ ಬಳಕೆ ಮಾಡಬಹುದು ಎಂದು ಹೇಳಿದೆ. ಈ ಬಗ್ಗೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಟೆಸ್ಲಾ ಕಂಪನಿಯ ಆನ್‌ಲೈನ್ ಸ್ಟೋರ್‌ನಲ್ಲಿ ಪಾವತಿ ವಿಧಾನ ಇರುವಲ್ಲಿ ಡಾಗಿಕಾಯಿನ್ ಬಳಸಬಹುದು ಎಂದು ಹೇಳಿದ್ದರು. ಆದರೆ ಟೆಸ್ಲಾ ಕಾರು ಖರೀದಿಗೆ ಇದನ್ನು ಬಳಸುವಂತಿಲ್ಲ ಎಂದು ಹೇಳಿದೆ. ಆದರೆ ಟೆಸ್ಲಾ ಸ್ಟೋರ್‌ನಲ್ಲಿರುವ ಇರುವ ಉಡುಪು, ಇತರೆ ವಸ್ತುಗಳ ಖರೀದಿಗೆ ಡಾಗಿಕಾಯಿನ್ ಬಳಸಬಹುದು ಎಂದು ಎಲಾನ್ ಮಸ್ಕ್ ಹೇಳಿದ್ದರು.

ಎಲಾನ್ ಮಸ್ಕ್ ಟ್ವಿಟ್ಟರ್ ಲೋಗೋವನ್ನು ಬದಲಾವಣೆ ಮಾಡಿದ ಮೇಲೆ ಹಲವಾರು ಮೀಮ್ಸ್‌ಗಳು ಹರಿದಾಡುತ್ತಿದೆ. ಕೆಲವರು ಸಂತಸ ವ್ಯಕ್ತಪಡಿಸಿದರೆ, ಕೆಲವರು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟರ್ ಲೋಗೋ ಬದಲಾವಣೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಈ ಹಿಂದೆ ಟ್ವಿಟ್ಟರ್ ಲೋಗೋ ಹಾಗೂ ಫೇಸ್‌ಬುಕ್‌ ಲೋಗೋ ನಾನು ಬೆಸ್ಟ್ ಲೋಗೋ, ನಾನು ಬೆಸ್ಟ್ ಲೋಗೋ ಎಂದು ಜಗಳವಾಡುತ್ತಿತ್ತು, ಆದರೆ ಈಗ ನಾಯಿಯೊಂದು ಬಂದು ಎರಡನ್ನು ಓಡಿಸಿದೆ ಎಂಬಂತೆ ನೆಟ್ಟಿಗರು ಮೀಮ್ಸ್ ಹಂಚಿಕೊಂಡಿದ್ದಾರೆ. ಇನ್ನು ಹಕ್ಕಿಯ ಲೋಗೋದಲ್ಲಿ ಬಣ್ಣ ಬದಲಾವಣೆ ಮಾಡಿ ನಾಯಿಯ ಮುಖವನ್ನು ಇಟ್ಟು ಟ್ವಿಟ್ಟರ್ ಲೋಗೋ ಬದಲಾಗಿದೆ ಎಂದು ಕೂಡಾ ಮೀಮ್ಸ್ ಹಂಚಿಕೊಳ್ಳಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+