ದೇಶೀಯ ವಿಮಾನಯಾನ ಸೇವೆಯನ್ನು ಆರಂಭಿಸಲು ನಾಗರಿಕ ವಿಮಾನ ಯಾನ ಸಚಿವಾಲಯ ನಡೆಸುತ್ತಿರುವ ಸಿದ್ಧತೆ ಬಗ್ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈಚೆಗೆ ಮಾಧ್ಯಮವೊಂದರ ಜತೆ ಮಾತನಾಡಿದ್ದರು. ಒಂದು ವೇಳೆ ಮತ್ತೆ ಆರಂಭವಾದರೂ ಆರೋಗ್ಯದ ಕಾರಣಕ್ಕೆ ಪ್ರಯಾಣದ ವೇಳೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲವೂ ಈ ಹಿಂದಿನಂತೆ ಇರುವುದಿಲ್ಲ ಎಂಬ ಸುಳಿವು ಕೂಡ ಸಿಕ್ಕಿತ್ತು.
ಕೊರೊನಾದ ಕಾರಣಕ್ಕೆ ಮಾರ್ಚ್ 24ನೇ ತಾರೀಕಿನಿಂದ ರದ್ದಾಗಿರುವ ವಿಮಾನ ಯಾನ ಸೇವೆ ಶೀಘ್ರದಲ್ಲಿ ಪುನರಾರಂಭ ಆಗುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಾಗಲೀ ಅಥವಾ ವಿಮಾನದಲ್ಲಾಗಲೀ ಕಾರ್ಯ ನಿರ್ವಹಿಸುವ ವಿಧಾನದಲ್ಲಿ ಬದಲಾವಣೆ ಆಗಲಿದೆ ಎಂದು ಕೂಡ ಅವರು ಹೇಳಿದ್ದಾರೆ.
ಬ್ಯಾಗೇಜ್ ಮಿತಿಯನ್ನು ಕಡಿತ ಸೇರಿ ವಿವಿಧ ಕ್ರಮ
ವಿಮಾನ ನಿಲ್ದಾಣದಲ್ಲಿ ಜನ ಸಂದಣಿ ತಪ್ಪಿಸಲು ಮನೆಗಳಲ್ಲೇ ಬೋರ್ಡಿಂಗ್ ಪಾಸ್ ಅನ್ನು ಪ್ರಿಂಟ್ ಮಾಡಿಕೊಂಡು ತನ್ನಿ ಎನ್ನಬಹುದು. ವಿಮಾನ ಹೊರಡುವ ಸಮಯಕ್ಕಿಂತ ಬಹಳ ಬೇಗ ಬರುವುದಕ್ಕೆ ಸೂಚನೆ ನೀಡಬಹುದು. ಬ್ಯಾಗೇಜ್ ಮಿತಿಯನ್ನು ಕಡಿತಗೊಳಿಸುವುದು ಸೇರಿದಂತೆ ಇತರ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಎಂದು ಸಚಿವರು ಹೇಳಿದ್ದಾರೆ.
ಮೇ 15ರ ಮುಂಚೆಯೇ ಆರಂಭಕ್ಕೆ ಸಿದ್ಧತೆ
ಕ್ರಮ ಹಾಗೂ ನಿಯಮಗಳ ಬಗ್ಗೆ ವಿಮಾನ ಯಾನ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಬೇಕಿದೆ. ಅಷ್ಟೇ ಅಲ್ಲ, ದೇಶೀ ವಿಮಾನ ಯಾನ ಕಾರ್ಯಾಚರಣೆ ಯಾವಾಗಿಂದ ಪುನರಾರಂಭ ಮಾಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೇ 17ರ ತನಕ ಲಾಕ್ ಡೌನ್ ವಿಸ್ತರಣೆ ಆಗಿದ್ದರೂ ಮೇ 15ರ ಮುಂಚೆಯೇ ದೇಶೀ ವಿಮಾನ ಪ್ರಯಾಣ ಆರಂಭಕ್ಕೆ ಸಿದ್ಧತೆ ನಡೆದಿದೆ. ಈಗಲೇ ದಿನಾಂಕವನ್ನು ತಿಳಿಸಲ್ಲ ಆಗಲ್ಲ. ಏಕೆಂದರೆ ವಿವಿಧ ದೇಶಗಳಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರಗಳ ಸಹಕಾರ ಬೇಕು
ಇನ್ನೂ ಮುಂದುವರಿದು, ದೇಶೀಯವಾಗಿ ವಿಮಾನ ಯಾನ ಆರಂಭಿಸಲು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯ. ಎಲ್ಲ ಮೂಲಸೌಕರ್ಯ ಸಮರ್ಪಕವಾಗಿದೆ ಎಂಬ ಖಾತ್ರಿ ಸಿಗಬೇಕು. ಇನ್ನು ದೇಶದಲ್ಲಿ ಹಸಿರು ವಲಯದ ಮಧ್ಯೆ ಶೀಘ್ರವೇ ವಿಮಾನ ಯಾನ ಸೇವೆ ಆರಂಭವಾಗಲಿದೆ ಎಂದು ಸಹ ತಿಳಿಸಿದ್ದಾರೆ. ಸದ್ಯಕ್ಕೆ ವಾಣಿಜ್ಯ ವಿಮಾನ ಕಾರ್ಯಚಟುವಟಿಕೆಗಳು ಮೇ 17ರ ತನಕ ಅಮಾನತಿನಲ್ಲಿದೆ.


Click it and Unblock the Notifications