ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಒಟ್ಟು ಇಂಡಸ್ಟ್ರೀಯ ಬೆಳವಣಿಗೂ ಈ ಬಾಕ್ಸ್ ಆಫೀಸ್‌ನ ಲೆಕ್ಕಾಚಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಬಾಕ್ಸ್ ಆಫೀಸ್ ಸಂಗ್ರಹದ ಮೇಲೆಯೇ ಒಂದು ಸಿನಿಮಾವು ಎಷ್ಟು ಯಶಸ್ವಿಯಾಗಿದೆ ಎಂಬ ನಿರ್ಧಾರವನ್ನು ಕೂಡಾ ಮಾಡಲಾಗುತ್ತದೆ. ಈ ನಡುವೆ 2023ರ ಜನವರಿಯಿಂದ ಜೂನ್‌ವರೆಗಿನ ಬಾಕ್ಸ್ ಆಫೀಸ್ ಸಂಗ್ರಹ ಪ್ರಮಾಣ ಶೇಕಡ 15ರಷ್ಟು ಕುಸಿತ ಕಂಡಿದೆ. ಕನ್ನಡ ಇಂಡಸ್ಟ್ರೀ ಭಾರೀ ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಭಾರತದ ಬಾಕ್ಸ್ ಆಫೀಸ್ ಸಂಗ್ರಹದ ಬಗ್ಗೆ ಓರ್‌ಮಾಕ್ಸ್ ವರದಿ ಬಿಡುಗಡೆಯಾಗಿದೆ. ಪ್ರತಿ ತಿಂಗಳು ಕೂಡಾ ಬಾಕ್ಸ್ ಆಫೀಸ್ ಬೆಳವಣಿಗೆಯ ವರದಿಯನ್ನು ಪ್ರಕಟ ಮಾಡಲಾಗುತ್ತದೆ. 2023ರಲ್ಲಿ ಈಗಾಗಲೇ ಅರ್ಧ ವರ್ಷವಾಗಿದೆ. ಈ ನಿಟ್ಟಿನಲ್ಲಿ ಈಗ ಆರು ತಿಂಗಳ ಅವಧಿಯ ಬಾಕ್ಸ್ ಆಫೀಸ್ ಸಂಗ್ರಹದ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯವಾದ ಕೊಡುಗೆಯನ್ನು ಪಠಾಣ್ ಸಿನಿಮಾ ನೀಡಿದೆ. ಒಟ್ಟು ಬಾಕ್ಸ್ ಆಫೀಸ್ ಸಂಗ್ರಹದಲ್ಲಿ ಶೇಕಡ 13ರಷ್ಟು ಕೊಡುಗೆ ಪಠಾಣ್ ಸಿನಿಮಾದ್ದಾಗಿದೆ. ಟಾಪ್ 10 ಸಿನಿಮಾಗಳ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಜನವರಿ- ಜೂನ್ 2023
ಜೂನ್ 2023ರಲ್ಲಿ ಬಾಕ್ಸ್ ಆಫೀಸ್ 1000 ಕೋಟಿ ಗಡುವನ್ನು ದಾಟಿದೆ. ಪ್ರಮುಖವಾಗಿ ಬಹುಭಾಷಾ ಸಿನಿಮಾ ಆಧಿಪುರುಷ, ಝರಾ ಹಕ್ತೆ ಝರಾ ಬಚ್ಕೇ (ಹಿಂದಿ), ಕ್ಯಾರಿ ಆನ್ ಜಟ್ಟಾ 3 (ಪಂಜಾಬಿ), ಬೈಪಾನ್ ಭಾರೀ ದೇವಾ (ಮರಾಠಿ), ಮಾಮನ್ನನ್ (ತಮಿಳು) ಸಿನಿಮಾವು ಜೂನ್‌ನಲ್ಲಿ ಬಾಕ್ಸ್‌ಆಫೀಸ್‌ಗೆ ಅಧಿಕ ಕೊಡುಗೆಯನ್ನು ನೀಡಿದೆ. 2023ರಲ್ಲಿ ಬಾಕ್ಸ್ ಆಫೀಸ್ ಸಂಗ್ರಹ ವಿಚಾರದಲ್ಲಿ ಜನವರಿ ಬಳಿಕದ ಉತ್ತಮ ಸಂಗ್ರಹ ಸ್ಥಾನದಲ್ಲಿ ಜೂನ್ ನಿಲ್ಲುತ್ತದೆ.
ಜನವರಿಯಿಂದ ಜೂನ್ ತಿಂಗಳ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹವು 4,868 ಕೋಟಿ ರೂಪಾಯಿ ಆಗಿದೆ. ಆದರೆ ನಾವು 2022ಕ್ಕೆ ಹೋಲಿಕೆ ಮಾಡಿದಾಗ ಈ ಆರು ತಿಂಗಳ ಸಂಗ್ರಹವು ಶೇಕಡ 15ರಷ್ಟು ಕುಸಿತವಾಗಿದೆ. ಈಗೀನ ಲೆಕ್ಕಾಚಾರದ ಪ್ರಕಾರ 2023ರ ಕೊನೆಯಲ್ಲಿ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹವು 9,736 ಕೋಟಿ ರೂಪಾಯಿ ಆಗಿರುವ ಸಾಧ್ಯತೆಯಿದೆ. 2022ರಲ್ಲಿ 10,637 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಶೇಕಡ 8ರಷ್ಟು ಕಡಿಮೆ ಸಂಗ್ರಹವಾಗುವ ಸಾಧ್ಯತೆಯಿದೆ.
ಆದರೆ 2023ರ ಇನ್ನುಳಿದ ಆರು ತಿಂಗಳ ಅವಧಿಯಲ್ಲಿ ಹಲವಾರು ಅದ್ಭುತ ಸಿನಿಮಾಗಳು ತೆರೆಕಾಣಲಿದೆ. ಜವಾನ್, ಸಲಾರ್, ಟೈಗರ್ 3 ಮೊದಲಾದವು ತೆರೆಕಾಣಲಿದೆ. ಆದ್ದರಿಂದಾಗಿ ಬಾಕ್ಸ್ ಆಫೀಸ್ 2022ಕ್ಕಿಂತ ಅಧಿಕ ಏರುವ ಸಾಧ್ಯತೆಯೂ ಕೂಡಾ ಇದೆ. ಬಾಕ್ಸ್ ಆಫೀಸ್ 2019ರಲ್ಲಿ ಸಾರ್ವಕಾಲಿಕವಾಗಿ ಏರಿಕೆ ಕಂಡಿದ್ದು 10,948 ಕೋಟಿ ರೂಪಾಯಿ ಆಗಿದೆ. ಈ ವರ್ಷ ಈ ದಾಖಲೆಯನ್ನು ಮುರಿಯಲಾಗುತ್ತದೆಯೇ ಕಾದುನೋಡಬೇಕಿದೆ.
ಟಾಪ್ 10 ಸಿನಿಮಾಗಳು
ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾವು 2023ರಲ್ಲಿ ಅತೀ ಅಧಿಕವಾಗಿ ಬಾಕ್ಸ್ ಆಫೀಸ್‌ಗೆ ಕೊಡುಗೆಯನ್ನು ನೀಡಿದ ಸಿನಿಮಾವಾಗಿದೆ. ಈ ಅರ್ಧ ವರ್ಷದ ಒಟ್ಟು ಸಂಗ್ರಹದಲ್ಲಿ ಶೇಕಡ 13ರಷ್ಟು ಪಠಾಣ್ ಸಿನಿಮಾದ ಕೊಡುಗೆಯಾಗಿದೆ. ಭಾರೀ ವಿವಾದಕ್ಕೆ ಕಾರಣವಾಗಿ ಆಧಿಪುರುಷ ಸಿನಿಮಾವು ಪಠಾಣ್ ಬಳಿಕ ಎರಡನೇ ಸ್ಥಾನದಲ್ಲಿದೆ. ಫಾಸ್ಟ್ ಎಕ್ಸ್ ಎಂಬ ಏಕೈಕ ಹಾಲಿವುಡ್ ಸಿನಿಮಾ ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿದೆ.
1. ಪಠಾಣ್
2. ಆಧಿಪುರುಷ್
3. ಕೇರಳ ಸ್ಟೋರಿ
4. ವಾರಿಸು
5. ಪೊನ್ನಿಯಿನ್ ಸೆಲ್ವಾನ್ -ಪಿಎಸ್2
6. ವಾಲ್ಟೇರ್ ವೀರಯ್ಯ
7. ತೂ ಜೂಟಿ ಮೈ ಮಕ್ಕಾರ್
8. ಫಾಕ್ಸ್ ಎಕ್ಸ್
9. ತುನಿವು
10. ಕಿಸಿ ಕಾ ಭಾಯ್ ಕಿಸಿ ಕಿ ಜಾನ್


Click it and Unblock the Notifications