ವಿದೇಶೀಯರಿಗೆ ಎಚ್- 1ಬಿ ವೀಸಾ ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ಈ ವರ್ಷದ ಕೊನೆ ತನಕ ಅಮಾನತು ಮಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆದೇಶಕ್ಕೆ ಸಹಿ ಹಾಕಿದ್ದಾರೆ. ವಲಸಿಗರಿಗೆ ಯು.ಎಸ್.ನೊಳಗೆ ಪ್ರವೇಶ ನಿರ್ಬಂಧಿಸುವ ಉದ್ದೇಶದಿಂದ ಹೊಸದಾಗಿ H1B ಹಾಗೂ H4 ವೀಸಾಗಳನ್ನು ಸ್ಥಗಿತ ಮಾಡಿದ್ದಾರೆ.
ಇವುಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಿಬ್ಬಂದಿ ಮತ್ತು ಅವರ ಕುಟುಂಬ ಬಳಸುತ್ತಿತ್ತು. ಇದರ ಜತೆಗೆ ಕಂಪೆನಿಯೊಳಗಿನ ವರ್ಗಾವಣೆಗೆ ಬಳಸುತ್ತಿದ್ದ L ವೀಸಾಗಳು ಹಾಗೂ ಉದ್ಯೋಗ ಮತ್ತು ವಿದೇಶದಲ್ಲಿ ವ್ಯಾಸಂಗದ ಕಾರಣಕ್ಕೆ ಬಹುತೇಕ J ವೀಸಾಗಳನ್ನು ಈ ವರ್ಷದ ಕೊನೆ ತನಕ ಅಮಾನತು ಮಾಡಿ ಆದೇಶಿಸಿದ್ದಾರೆ.
ಟ್ರಂಪ್ ಹೊಸ ಆದೇಶದ ಪ್ರಮುಖಾಂಶಗಳು:
ನಿರುದ್ಯೋಗ ಹೆಚ್ಚಳ, ಬೇಡಿಕೆ ಕುಸಿತ
ಯುನೈಟೆಡ್ ಸ್ಟೇಟ್ಸ್ ಕಾರ್ಮಿಕ ಮಾರುಕಟ್ಟೆ ಮೇಲೆ ವಿದೇಶೀ ಕಾರ್ಮಿಕರಿಂದ ಆಗುವ ಪ್ರಭಾವ ಏನು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅದರಲ್ಲೂ ಈಗಿನ ಅಪರೂಪದ ಸನ್ನಿವೇಶದಲ್ಲಿ ದೇಶೀಯವಾಗಿ ನಿರುದ್ಯೋಗ ಹೆಚ್ಚಾಗಿ, ಕಾರ್ಮಿಕರಿಗೆ ಬೇಡಿಕೆ ಕುಸಿತವಾಗಿದೆ.
ಡಿಸೆಂಬರ್ 31ಕ್ಕೆ ಆದೇಶ ಕೊನೆ
ಡಿಸೆಂಬರ್ 31, 2020ಕ್ಕೆ ಈಗಿನ ಆದೇಶ ಕೊನೆ ಆಗಬಹುದು. ಒಂದು ವೇಳೆ ಅಗತ್ಯ ಕಂಡುಬಂದಲ್ಲಿ ಮತ್ತಷ್ಟು ಸಮಯ ಮುಂದುವರಿಯಬಹುದು. 24, 2020ರಿಂದ ಮೂವತ್ತು ದಿನದೊಳಗೆ, ಆ ನಂತರ ಪ್ರತಿ 60 ದಿನಕ್ಕೆ ಆದೇಶ ಜಾರಿಯಲ್ಲಿ ಮುಂದುವರಿಯುತ್ತದೆ. ಸಂಬಂಧಪಟ್ಟ ಕಾರ್ಯದರ್ಶಿಗಳು ಆಯಾ ಇಲಾಖೆಯ ಸಂಪರ್ಕದಲ್ಲಿ ಇದ್ದು, ಶಿಫಾರಸಿನಲ್ಲಿ ಬದಲಾವಣೆಗಳು ಇದ್ದಲ್ಲಿ ಮಾಡುತ್ತಾರೆ.
ಉದ್ಯೋಗಕ್ಕೆ ಹೊಡೆತ
ಹೆಚ್ಚುವರಿಯಾಗಿ ಕಾರ್ಮಿಕರಿಗೆ ನೀಡುತ್ತಿದ್ದ H-1B, H-2B, J ವೀಸಾ ಹಾಗೂ ವಲಸಿಗರಲ್ಲದವರಿಗೆ L ವೀಸಾಗಳನ್ನು ನೀಡಲಾಗುತ್ತಿದೆ. ಇದರಿಂದ ಕೊರೊನಾದಂಥ ಕಾಯಿಲೆ ಸನ್ನಿವೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿ, ಅಮೆರಿಕನ್ನರಿಗೆ ಉದ್ಯೋಗಾವಕಾಶಗಳಿಗೆ ಸಮಸ್ಯೆ ಆಗುತ್ತಿದೆ.
ಆರ್ಥಿಕ ಕುಸಿತ ಚೇತರಿಕೆಗೆ ಇನ್ನಷ್ಟು ಸಮಯ
ಐತಿಹಾಸಿಕವಾಗಿ ನೋಡಿದಾಗ ಆರ್ಥಿಕತೆಯ ಶಾಕ್ ನಿಂದ ಚೇತರಿಸಿಕೊಳ್ಳುವಾಗ ಉತ್ಪಾದನೆಯಲ್ಲಿ ಕುಸಿತವಾಗುತ್ತದೆ. ಆರ್ಥಿಕ ಚಟುವಟಿಕೆ ವೃದ್ಧಿ ಆಗುವ ತನಕ ಉದ್ಯೋಗ ಅವಕಾಶಗಳು ದೊರೆಯುವುದು ಕಷ್ಟ. ಈ ಹಿಂದೆ ಆರ್ಥಿಕತೆ ಹೇಗಿತ್ತೋ ಅದೇ ಸ್ಥಿತಿಗೆ ವಾಪಸ್ ಬರಲು ಅಮೆರಿಕಕ್ಕೆ ಹಲವು ತಿಂಗಳು ಬೇಕಾಗುತ್ತದೆ. ಇನ್ನಷ್ಟು ತಿಂಗಳು ಸ್ಥಿರವಾದ ಕಾರ್ಮಿಕ ಬೇಡಿಕೆ ಸೃಷ್ಟಿಯಾಗಲು ಅಗತ್ಯವಿದೆ.
ಈಗಿನ ಆದೇಶ ಯಾರಿಗೆ ಅನ್ವಯ ಆಗುತ್ತದೆ?
* ಈ ಆದೇಶ ಹೊರಡಿಸಿದ ದಿನಕ್ಕೆ ಯುನೈಟೆಡ್ ಸ್ಟೇಟ್ಸ್ ನಿಂದ ಹೊರಗೆ ಇರುವವರಿಗೆ.
* ಆದೇಶ ಹೊರಡಿಸಿದ ದಿನಕ್ಕೆ ಅನ್ವಯ ಆಗುವಂತೆ ಯಾರ ಬಳಿ ನಾನ್ ಮೈಗ್ರೆಂಟ್ ವೀಸಾ ಇರುವುದಿಲ್ಲವೋ ಅಂಥವರಿಗೆ.
* ಆದೇಶ ಹೊರಡಿಸಿದ ದಿನಾಂಕಜ್ಜೆ ವೀಸಾ ಹೊರತುಪಡಿಸಿ ಮತ್ಯಾವುದೇ ಪ್ರಯಾಣ ದಾಖಲೆಗಳು ಇರುವುದಿಲ್ಲವೋ ಅಂಥವರಿಗೆ ಅನ್ವಯಿಸುತ್ತದೆ.
ಅಮಾನತು ಯಾರಿಗೆ ಅನ್ವಯಿಸಲ್ಲ?
* ಯುನೈಟೆಡ್ ಸ್ಟೇಟ್ಸ್ ನಲ್ಲಿ ಕಾನೂನುಬದ್ಧವಾಗಿ ಶಾಶ್ವತ ನಿವಾಸಿಗಳಾಗಿ ಇರುವವರು.
* ಯಾರೇ ಹೊರಗಿನವರ ಸಂಗಾತಿ, ಮಕ್ಕಳು ಸೆಕ್ಷನ್ 101(b)(1) INA (8 U.S.C. 1101 (b)(1) ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಾಗರಿಕರಾಗಿರಬೇಕು.
* ಯಾರೇ ಹೊರಗಿನವರು ಯುನೈಟೆಡ್ ಸ್ಟೇಟ್ಸ್ ಆಹಾರ ಪೂರೈಕೆ ಜಾಲಕ್ಕೆ ಅಗತ್ಯ ಸೇವೆ ಒದಗಿಸಲು ಅಥವಾ ತಾತ್ಕಾಲಿಕ ಕಾರ್ಮಿಕರಾಗಿ ಪ್ರವೇಶ ಬಯಸುವವರಿಗೆ.
* ರಾಷ್ಟ್ರೀಯ ಹಿತಾಸಕ್ತಿ ಎಂದು ಸಂಬಂಧಪಟ್ಟ ಇಲಾಖೆಯಿಂದ ನಿರ್ಧಾರ ಮಾಡಲಾದ ಹೊರಗಿನ ವ್ಯಕ್ತಿಗಳಿಗೆ.


Click it and Unblock the Notifications