ಟ್ವಿಟ್ಟರ್ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರಲು ಬಳಸುವ ಅತೀ ಉನ್ನತ ವೇದಿಕೆ ಇದಾಗಿದೆ. ಸಾಮಾನ್ಯವಾಗಿಯೇ ಸೆಲೆಬ್ರೆಟಿಗಳು ಯಾವುದೇ ವಿಚಾರವನ್ನು ಹಂಚಿಕೊಳ್ಳಲು ಈ ವೇದಿಕೆಯನ್ನೇ ಬಳಕೆ ಮಾಡುತ್ತಾರೆ. ಆದರೆ ಟ್ವಿಟ್ಟರ್‌ನ ಬ್ಲ್ಯೂಟಿಕ್ ನಿಯಮದಿಂದಾಗಿ ಸೆಲೆಬ್ರೆಟಿಗಳ ಮೇಲೆ ಪ್ರಭಾವ ಉಂಟಾಗುತ್ತಿದೆ.
ಹೆಚ್ಚಿನ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು ಮತ್ತು ಕೈಗಾರಿಕೋದ್ಯಮಿಗಳು ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ನಿಮಗೆ ಮಾಹಿತಿ ಇರುವಂತೆ ಎಲಾನ್ ಮಸ್ಕ್ ಕಳೆದ ತಿಂಗಳು ಟ್ವಿಟ್ಟರ್‌ನಲ್ಲಿ ಸಾಂಪ್ರದಾಯಿಕ ನೀಲಿ ಟಿಕ್ ಅನ್ನು ತೆಗೆದುಹಾಕಿದ್ದಾರೆ. ಈಗ ಬ್ಲ್ಯೂಟಿಕ್ ಬೇಕಾದರೆ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ಏನಿದು ಬ್ಲ್ಯೂಟಿಕ್ ತಿಳಿಯಿರಿ
ಪ್ರಮುಖವಾಗಿ ಯಾವ ಟ್ವಿಟ್ಟರ್ ಖಾತೆ ಅಧಿಕೃತ ಮತ್ತು ಯಾವ ಖಾತೆ ಅಧಿಕೃತವಲ್ಲ ಎಂಬುವುದನ್ನು ಟ್ವಿಟ್ಟರ್ ಬಳಕೆದಾರರು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಬ್ಲ್ಯೂಟಿಕ್ ಅನ್ನು ಆರಂಭ ಮಾಡಲಾಗಿದೆ. ಯಾವುದಾದಾರೂ ಟ್ವಿಟ್ಟರ್ ಖಾತೆಯನ್ನು ನಿರ್ಧರಿಸುವಲ್ಲಿ ಬಳಕೆದಾರರಿಗೆ ಸಹಾಯ ಮಾಡಲು 2009 ರಲ್ಲಿ ಟ್ವಿಟರ್‌ನಿಂದ ಬ್ಲ್ಯೂಟಿಕ್ ಅನ್ನು ಆರಂಭ ಮಾಡಲಾಗಿದೆ.
ಟ್ವಿಟ್ಟರ್‌ನಲ್ಲಿ ಬ್ಲ್ಯೂಟಿಕ್ ಇದ್ದಲ್ಲಿ ಆ ಖಾತೆಯು ಕಾನೂನುಬದ್ಧವಾಗಿ ಅಧಿಕೃತ ಖಾತೆ ಎಂದಾಗಿದೆ. ಬೇರೆ ವ್ಯಕ್ತಿಗಳು ಈ ಖಾತೆಯನ್ನು ಬಳಕೆ ಮಾಡುತ್ತಿಲ್ಲ ಎಂಬುವುದು ಖಚಿತ ಪಡಿಸಲು ಬ್ಲ್ಯೂ ಟಿಕ್ ನೀಡಲಾಗುತ್ತದೆ. ಬಳಕೆದಾರರಿಗೆ ಸಹಾಯ ಮಾಡಲು 2009 ರಲ್ಲಿ ಟ್ವಿಟರ್‌ನಿಂದ ನೀಲಿ ಟಿಕ್ ಅನ್ನು ಮೊದಲ ಬಾರಿಗೆ ಆರಂಭ ಮಾಡಲಾಗಿದೆ. ಈ ಹಿಂದೆ ಟ್ವಿಟ್ಟರ್ ಈ ಟಿಕ್‌ಗೆ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಹೊಸ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ, ಹಲವಾರು ಭಾರತೀಯ ಸೆಲೆಬ್ರಿಟಿಗಳಿಗೆ ತೊಂದರೆ ಉಂಟಾಗಿದೆ ಎಂದು ದೂರು ನೀಡುತ್ತಿದ್ದಾರೆ.
ಟ್ವಿಟ್ಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ, ಟ್ವಿಟ್ಟರ್‌ನ ಇತ್ತೀಚಿನ ದೃಡೀಕರಣ ನೀತಿಯನ್ನು ಅಪ್‌ಡೇಟ್ ಮಾಡಿದ ಬಳಿಕ ಹಲವಾರು ಸೆಲೆಬ್ರಿಟಿಗಳು ತಮ್ಮ ಟ್ವಿಟ್ಟರ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚಿಸಲು ಅವರನ್ನು ಸಂಪರ್ಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರತನ್ ಟಾಟಾ, ಅಮಿತಾಭ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಜೋನಾಸ್, ಎ.ಆರ್ ರೆಹಮಾನ್, ವೀರ್ ದಾಸ್ ಮತ್ತು ರಾಮ್ ಚರಣ್‌ರಂತಹ ಸೆಲೆಬ್ರೆಟಿಗಳ ಮೇಲೆ ಇತ್ತೀಚೆಗೆ ವೆರಿಫಿಕೇಷನ್ ನೀತಿ ಬದಲಾವಣೆ ಮಾಡಲಾಗಿರುವುದರಿಂದ ಉಂಟಾದ ತೊಂದರೆಗಳ ಬಗ್ಗೆ ನಾನು ಎಲಾನ್ ಮಸ್ಕ್‌ಗೆ ಪತ್ರವನ್ನು ಬರೆದು ದೂರಲಾಗಿದೆ ಎಂದು ಟ್ವಿಟ್ಟರ್‌ನ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ತಿಳಿಸಿದ್ದಾರೆ. ಈ ನೂತನ ನೀತಿಯಿಂದಾಗಿ ಆನ್‌ಲೈನ್‌ನಲ್ಲಿ ಈ ವ್ಯಕ್ತಿಗಳ ಖ್ಯಾತಿಯ ಮೇಲೆ ಪ್ರತಿಕೂಲ ಪ್ರಭಾವ ಉಂಟು ಮಾಡಿದೆ ಎಂದು ಕೂಡಾ ಮನೀಶ್ ಮಹೇಶ್ವರಿ ಹೇಳಿದ್ದಾರೆ.
ಟ್ವಿಟ್ಟರ್ ಅನ್ನು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಸಂಸ್ಥೆಯ ನಿಯಮದಲ್ಲಿ, ರಚನೆಯಲ್ಲಿ, ಕಾರ್ಯವೈಖರಿಯಲ್ಲಿ, ಫೀಚರ್‌ಗಳನ್ನು ಬದಲಾವಣೆಯನ್ನು ಮಾಡಲಾಗಿದೆ. ಏಪ್ರಿಲ್ 1ರಿಂದ ಟ್ವಿಟ್ಟರ್ ಖಾತೆಯ ಬ್ಲ್ಯೂ ವೆರಿಫಿಕೇಷನ್ ತೆಗೆದು ಹಾಕಲಾಗಿದೆ. ಯಾರು ಪಾವತಿಯನ್ನು ಮಾಡುತ್ತಾರೆ ಅವರಿಗೆ ಮಾತ್ರ ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್ ನೀಡಲಾಗುತ್ತದೆ. ಇದು ಹಲವಾರು ಸೆಲೆಬ್ರೆಟಿಗಳ ಮೇಲೆ ಪ್ರಭಾವ ಬೀರಿದೆ.


Click it and Unblock the Notifications