ನಿವೃತ್ತಿ ಫಂಡ್ ನಿಧಿ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಕಳೆದ ಕೆಲವು ತಿಂಗಳುಗಳಿಂದ ಹೊಸ ಸೇರ್ಪಡೆ ಹೆಚ್ಚಳವಾಗುತ್ತಿದೆ. ಜನವರಿ 2023ರಲ್ಲಿ ಇಪಿಎಫ್‌ಒಗೆ 14.86 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸೋಮವಾರ ಮಾಹಿತಿ ನೀಡಿದೆ. ಜನವರಿಯಲ್ಲಿ 3.54 ಲಕ್ಷ ಮಂದಿ ಇಪಿಎಫ್‌ಒನಿಂದ ನಿರ್ಗಮಿಸಿದ್ದಾರೆ, ಕಳೆದ ನಾಲ್ಕು ತಿಂಗಳುಗಳಲ್ಲಿಯೇ ಇದು ಅತೀ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
14.86 ಲಕ್ಷ ಚಂದಾದಾರರ ಪೈಕಿ 7.77 ಲಕ್ಷ ಹೊಸ ಚಂದಾದಾರರು ಆಗಿದ್ದಾರೆ. ಅಂದರೆ ಮೊದಲ ಬಾರಿಗೆ ಇಪಿಎಫ್‌ಒ ಖಾತೆಯನ್ನು ತೆರೆದಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಸೋಮವಾರ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಅಂದಾಜು 10.62 ಲಕ್ಷ ಸದಸ್ಯರು ಇಪಿಎಫ್‌ಒ ಸದಸ್ಯರಾಗಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಸದಸ್ಯರುಗಳು ತಮ್ಮ ಕೆಲಸವನ್ನು ತೊರೆದು ಇಪಿಎಫ್‌ಒ ಸೌಲಭ್ಯವಿಲ್ಲದ ಸಂಸ್ಥೆಗೆ ಸೇರ್ಪಡೆಯಾಗಿದ್ದು, ಈಗ ಹೊಸ ಸಂಸ್ಥೆಗೆ ಸೇರಿದಾಗ ಮತ್ತೆ ಇಪಿಎಫ್‌ಒ ಸದಸ್ಯರಾಗಿದ್ದಾರೆ.

ಇನ್ನು ನಾವು ಲಿಂಗಾವಾರು ಇಪಿಎಫ್‌ಒ ಸೇರ್ಪಡೆಯ ಲೆಕ್ಕಾಚಾರವನ್ನು ನೋಡಿದಾಗ ಜನವರಿ 2023ರಲ್ಲಿ ಒಟ್ಟು ಇಪಿಎಫ್‌ಒ ಸದಸ್ಯರಾಗಿ ಸೇರ್ಪಡೆಯಾದವರ ಪೈಕಿ 2.87 ಲಕ್ಷ ಮಹಿಳಾ ಸದಸ್ಯರು ಆಗಿದ್ದಾರೆ. ಈ ಪೈಕಿ 1.97 ಲಕ್ಷ ಮಂದಿ ಮಹಿಳಾ ಸದಸ್ಯರು ಹೊಸದಾಗಿ ಇಪಿಎಫ್‌ಒಗೆ ಸೇರ್ಪಡೆ ಆಗಿದ್ದಾರೆ. ಅಂದರೆ ಈ ಪೈಕಿ ಶೇಕಡ 68.61ರಷ್ಟು ಮಂದಿ ಮೊದಲ ಬಾರಿಗೆ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಯಾವ ರಾಜ್ಯದಲ್ಲಿ ಅಧಿಕ ಇಪಿಎಫ್‌ಒ ಸದಸ್ಯರು
ರಾಜ್ಯವಾರು ಪಟ್ಟಿಯನ್ನು ನಾವು ನೋಡಿದಾಗ ಜನವರಿ 2023ರಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ದೆಹಲಿಯಲ್ಲಿ ಅಧಿಕ ಇಪಿಎಫ್‌ಒ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇಷ್ಟು ರಾಜ್ಯಗಳಲ್ಲೇ ಒಟ್ಟಾಗಿ ಸೇರಿ ಶೇಕಡ 58.85ರಷ್ಟು ಮಂದಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಜನವರಿಯಲ್ಲಿ ಶೇಕಡ 22.73ರಷ್ಟು ಮಂದಿ ಇಪಿಎಫ್‌ಒ ಸೇರ್ಪಡೆಯಾಗಿದ್ದಾರೆ. ಕರ್ನಾಟಕದಲ್ಲಿ ಈ ತಿಂಗಳು ಶೇಕಡ 10.58ರಷ್ಟು ಮಂದಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ.
ನಾವು ಉದ್ಯಮ-ವಾರು ವೇತನದಾರರ ದತ್ತಾಂಶದ ವರ್ಗೀಕರಣ ಮಾಡಿದಾಗ 'ತಜ್ಞ ಸೇವೆಗಳು' (ಮಾನವಶಕ್ತಿ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು, ವಿವಿಧ ಚಟುವಟಿಕೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ) ತಿಂಗಳ ಒಟ್ಟು ಸದಸ್ಯರ ಸೇರ್ಪಡೆಯ ಶೇಕಡ 40.64 ರಷ್ಟಿದೆ ಎಂದು ಸೂಚಿಸುತ್ತದೆ. ಉದ್ಯಮವಾರು ದತ್ತಾಂಶವನ್ನು ಹಿಂದಿನ ತಿಂಗಳಿಗೆ ಹೋಲಿಸಿದರೆ, ಕೈಗಾರಿಕೆಗಳಲ್ಲಿ ಹೆಚ್ಚಿನ ದಾಖಲಾತಿ ಉಂಟಾಗಿದೆ. 'ಆಟೋಮೊಬೈಲ್ ಸರ್ವೀಸಿಂಗ್', 'ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಹೊರತುಪಡಿಸಿ ಇತರ ಬ್ಯಾಂಕ್‌ಗಳು, 'ರೆಸ್ಟೋರೆಂಟ್', 'ಟೀ ಪ್ಲಾಂಟೇಶನ್' ಇತ್ಯಾದಿಗಳಲ್ಲಿ ಇಪಿಎಫ್‌ಒ ಸೇರ್ಪಡೆ ಅಧಿಕವಾಗಿದೆ.
ಮಾರ್ಚ್ ಅಂತ್ಯದಲ್ಲಿ ಇಪಿಎಫ್‌ಒ ಸಭೆ
ವರ್ಕರ್ಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್‌ನ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸೆಂಟ್ರಲ್ ಬೋರ್ಡ್ ಟ್ರಸ್ಟಿಗಳ ಸಭೆಯು ಮಾರ್ಚ್ 25, ಮಾರ್ಚ್ 26ರಂದು ನಡೆಯಲಿದೆ. ಈ ಸಭೆಯಲ್ಲಿ 2022-2023 ವರ್ಷದ ಪಿಎಫ್ ಡೆಪಾಸಿಟ್‌ನ ಬಡ್ಡಿದರವನ್ನು ನಿರ್ಧಾರ ಮಾಡಲಿದೆ. ಪ್ರಸ್ತುತ ಹಣಕಾಸು ವರ್ಷದ ಬಡ್ಡಿದರವನ್ನು ಇಪಿಎಫ್‌ಒ ನಿರ್ಧಾರ ಮಾಡಿದಂತೆ ಇರಲಿದೆ. ಗಳಿಕೆಯನ್ನು ಇದುವೇ ನಿರ್ಧಾರ ಮಾಡಲಿದೆ. ಈ ಬಡ್ಡಿದರವು ಶೇಕಡ 8ರಷ್ಟು ಆಗಿರಲಿದೆ.
ಸಂಶೋಧನೆಯ ಪ್ರಕಾರ ನಿವೃತ್ತಿ ಸಂಸ್ಥೆಯು ಹೂಡಿಕೆಗೆ ರಿಟರ್ನ್ ಅನ್ನು ನೀಡುತ್ತದೆ. ಅಧ್ಯಯನದ ಪ್ರಕಾರ, ಕೋವಿಡ್‌ನಿಂದಾಗಿ ಇಪಿಎಫ್ ಮೊತ್ತದ ವಿತ್‌ಡ್ರಾ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ನಿವೃತ್ತಿ ಸಂಸ್ಥೆಯ ಹೂಡಿಕೆ ಆದಾಯವು ಈ ವರ್ಷ ಪ್ರಬಲವಾಗಿದೆ. ವರದಿಯಲ್ಲಿ ಉಲ್ಲೇಖ ಮಾಡಿರುವಂತೆ ಇಕ್ವಿಟಿ ಹೂಡಿಕೆಗಳ ಮೇಲಿನ ಆಧಾರದ ಮೇಲೆ ಇಪಿಎಫ್‌ಒ ಅಸ್ತಿತ್ವದಲ್ಲಿರುವ ಬಡ್ಡಿದರವನ್ನು ಶೇಕಡ 8.1ಕ್ಕೆ ನಿಗದಿಪಡಿಸಬಹುದು ಅಥವಾ ಶೇಕಡ 8ಕ್ಕೆ ಇಳಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications