ಈ ವಿಚಾರವನ್ನು ನಂಬಲು ಕಷ್ಟವಾದ್ರೂ, ನಂಬಲೇಬೇಕಾದ ಪರಿಸ್ಥಿತಿ ಇದೆ. 2018ರಲ್ಲಿ ಪ್ರತಿ ಒಂದು ಗಂಟೆಗೆ ಒಬ್ಬ ನಿರುದ್ಯೋಗಿಯು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎನ್‌ಸಿಆರ್‌ಬಿ ವರದಿ ಮಾಡಿದೆ.
2018ರಲ್ಲಿ ದೇಶದಲ್ಲಿ ಒಟ್ಟಾರೆ 1,34,516 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 92,914 ಪುರುಷರು ಮತ್ತು 42,391 ಮಹಿಳೆಯರಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (NCRB) ವರದಿಯಲ್ಲಿ ತಿಳಿದುಬಂದಿದೆ.
2018ರಲ್ಲಿ 12,936 ನಿರುದ್ಯೋಗಿಗಳ ಆತ್ಮಹತ್ಯೆ
ಗೃಹ ಸಚಿವಾಲಯದ ಅಧೀನದಲ್ಲಿರುವ NCRB ಕಳೆದ ವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2018ರಲ್ಲಿ ಒಟ್ಟು 12,936 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಒಟ್ಟು ಆತ್ಮಹತ್ಯೆಗಳಲ್ಲಿ 9.6 ಪರ್ಸೆಂಟ್ ರಷ್ಟಿದೆ ಎಂದು ಹೇಳಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 18 ವರ್ಷಕ್ಕಿಂತ ಕಡಿಮೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
18 ರಿಂದ 30 ವಯಸ್ಸಿನ 1,240 ಯುವಕರು ಆತ್ಮಹತ್ಯೆ
ಒಟ್ಟು ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳಲ್ಲಿ 18 ರಿಂದ 30ವರ್ಷ ವಯಸ್ಸಿನವರು ಕೂಡ ಹೆಚ್ಚಿದ್ದಾರೆ. ಈ ವಯೋಮಿತಿಯಲ್ಲಿ 1,240 ಪುರುಷರು ಆತ್ಮಹತ್ಯೆಗೆ ಶರಣಾಗಿದ್ದು, 180 ಮಹಿಳೆಯರು ಸೇರಿದ್ದಾರೆ. ಇನ್ನು 30 ರಿಂದ 45 ವಯಸ್ಸಿನವರಲ್ಲಿ 868 ಪುರುಷರು ಮತ್ತು 95 ಮಹಿಳೆಯರು ಸೇರಿದ್ದಾರೆ. 45 ರಿಂದ 60 ವಯಸ್ಸಿನೊಳಗಿರುವ 237 ಪುರುಷರು ಮತ್ತು 21 ಮಹಿಳೆಯರು , 60 ವರ್ಷ ಮೇಲ್ಪಟ್ಟ 2,431 ಪುರುಷರು ಮತ್ತು 310 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2018ರಲ್ಲಿ ಒಟ್ಟಾರೆ ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳಲ್ಲಿ 10,687 ಪುರುಷರು ಮತ್ತು 2,249 ಮಹಿಳೆಯರಿದ್ದಾರೆ.
ಕೇರಳ-ತಮಿಳುನಾಡಿನಲ್ಲೇ ನಿರುದ್ಯೋಗಿಗಳ ಆತ್ಮಹತ್ಯೆ ಹೆಚ್ಚು
ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಒಟ್ಟಾರೆ ನಿರುದ್ಯೋಗಿಗಳ ಆತ್ಮಹತ್ಯೆಯಲ್ಲಿ 12.3 ಪರ್ಸೆಂಟ್‌ನಷ್ಟು (12,936 ರಲ್ಲಿ 1,586) ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ 12.2 ಪರ್ಸೆಂಟ್( 1,579), ಮಹಾರಾಷ್ಟ್ರದಲ್ಲಿ 9.7 ಪರ್ಸೆಂಟ್ (1,260), ಕರ್ನಾಟಕದಲ್ಲಿ 8.5 ಪರ್ಸೆಂಟ್ (1,094) , ಉತ್ತರ ಪ್ರದೇಶದಲ್ಲಿ 7 ಪರ್ಸೆಂಟ್ (902) ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಸಿಆರ್‌ಬಿ ಪ್ರಕಾರ ಜನಗಣತಿ ರಹಿತ ವರ್ಷಗಳಲ್ಲಿ ಯೋಜಿತ ಜನಸಂಖ್ಯೆಯನ್ನು ಬಳಸಿಕೊಂಡು ಆತ್ಮಹತ್ಯೆಗಳ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. 2011ರ ಜನಸಂಖ್ಯೆಯನ್ನು ಬಳಸಲಾಗಿದೆ.
2018ರಲ್ಲಿ ಆತ್ಮಹತ್ಯೆ ಪ್ರಮಾಣ 3.6 ಪರ್ಸೆಂಟ್ ಏರಿಕೆ
NCRB ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ 1,34,516 ಜನರು 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, 2017ಕ್ಕೆ ಹೋಲಿಸಿದರೆ ಇದರ ಪ್ರಮಾಣದಲ್ಲಿ 3.6 ಪರ್ಸೆಂಟ್ ಏರಿಕೆಗೊಂಡಿದೆ. ಒಟ್ಟಾರೆ ಆತ್ಮಹತ್ಯೆ ಮಾಡಿಕೊಂಡಿದ್ದವರಲ್ಲಿ 1.3 ಪರ್ಸೆಂಟ್ (1,707) ಜನರು ಸರ್ಕಾರಿ ಉದ್ಯೋಗಿಗಳಾಗಿದ್ದು, 6.1 ಪರ್ಸೆಂಟ್(8,246) ಜನರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಕ್ಷೇತ್ರದ 10,349 ಜನರು ಆತ್ಮಹತ್ಯೆ
2018ರಲ್ಲಿ ಆತ್ಮಹತ್ಯೆಗೆ ಶರಣಾದವರಲ್ಲಿ ಕೃಷಿ ಕ್ಷೇತ್ರಕ್ಕೆ ಸೇರಿದವರು 10,349 ರಷ್ಟಿದೆ. ಇದರಲ್ಲಿ 5,763 ರೈತರು ಇದ್ದು, ಕೃಷಿಕರು ಮತ್ತು ಕೃಷಿ ಕಾರ್ಮಿಕರು 4,586 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಒಟ್ಟಾರೆ ಆತ್ಮಹತ್ಯೆ ಪ್ರಕರಣಗಳಲ್ಲಿ 7.7 ಪರ್ಸೆಂಟ್‌ನಷ್ಟಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications