RBIನಿಂದ ಮಹತ್ವದ ಆದೇಶ; ಏ. 7ನೇ ತಾರೀಕಿನಿಂದ ಜಾರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಶುಕ್ರವಾರದಂದು ಬಾಂಡ್ ಹಾಗೂ ವಿದೇಶಿ ವಿನಿಮಯ ಮಾರ್ಕೆಟ್ ಕಾರ್ಯ ನಿರ್ವಹಿಸುವ ಅವಧಿಯನ್ನು ನಾಲ್ಕು ಗಂಟೆ ಕಡಿತಗೊಳಿಸಿದೆ. ಕೊರೊನಾ ಕಾರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಮಾಡಿರುವಾಗ ಕಾರ್ಯನಿರ್ವಹಣೆಗೆ ಹಾಗೂ ಸಾಗಣೆ ಸಮಸ್ಯೆ ತಲೆದೋರಬಹುದು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ಏಪಿಲ್ 7ನೇ ತಾರೀಕಿನಿಂದ 17ರ ತನಕ ಇದೇ ಸಮಯವು ಅನ್ವಯ ಆಗುತ್ತದೆ. ಈ ಕೆಳಕಂಡ ಮಾರ್ಕೆಟ್ ಗಳ ಕಾರ್ಯ ನಿರ್ವಹಿಸುವ ಅವಧಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ತನಕ ಇರುತ್ತದೆ.

RBIನಿಂದ ಮಹತ್ವದ ಆದೇಶ; ಏ. 7ನೇ ತಾರೀಕಿನಿಂದ ಜಾರಿ

* ಕಾಲ್/ನೋಟಿಸ್/ಟರ್ಮ್ ಮನಿ

* ಸರ್ಕಾರದ ಸೆಕ್ಯೂರಿಟಿಗಳಲ್ಲಿ ಮಾರ್ಕೆಟ್ ರೆಪೊ

* ಸರ್ಕಾರದ ಸೆಕ್ಯೂರಿಟಿಗಳಲ್ಲಿ ಟ್ರೈ- ಪಾರ್ಟಿ ರೆಪೊ

* ಕಮರ್ಷಿಯಲ್ ಪೇಪರ್ ಮತ್ತು ಸರ್ಟಿಫಿಕೇಟ್ ಆಫ್ ಡೆಪಾಸಿಟ್

* ಕಾರ್ಪೊರೇಟ್ ಬಾಂಡ್ಸ್ ಗಳಲ್ಲಿನ ರೆಪೊ

* ಸರ್ಕಾರದ ಸೆಕ್ಯೂರಿಟಿಗಳು (ಕೇಂದ್ರ ಸರ್ಕಾರದ ಸೆಕ್ಯೂರಿಟಿಗಳು, ರಾಜ್ಯ ಅಭಿವೃದ್ಧಿ ಸಾಲ ಹಾಗೂ ಟ್ರೆಷರಿ ಬಿಲ್ ಗಳು)

* ವಿದೇಶಿ ಕರೆನ್ಸಿ (FCY) ಭಾರತದ ರುಪಾಯಿ (INR)

* ಫಾರೆಕ್ಸ್ ಡೆರಿವೇಟಿವ್ಸ್ ಸೇರಿದಂತೆ ಇತರ ವ್ಯವಹಾರ (ಅಧಿಕೃತ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವ್ಯವಹಾರ ನಡೆಸುವುದನ್ನು ಹೊರತುಪಡಿಸಿ)

* ರುಪಾಯಿ ಬಡ್ಡಿ ದರ ಡೆರಿವೇಟಿವ್ಸ್ (ಅಧಿಕೃತ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವ್ಯವಹಾರ ನಡೆಸುವುದನ್ನು ಹೊರತುಪಡಿಸಿ)

ಆದರೆ, ಎಲ್ಲ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಮಾಮೂಲಿನಂತೆ ದೊರೆಯುತ್ತವೆ. RTGS, NEFT ಎಲ್ಲವೂ ಮುಂದುವರಿಯಲಿದೆ. "ಫೈನಾನ್ಷಿಯಲ್ ಮಾರ್ಕೆಟ್ ನಲ್ಲಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿಯೇ ಕಾರ್ಯ ನಿರ್ವಹಿಸುವ ಅವಧಿಯನ್ನು ಕಡಿತಗೊಳಿಸಲಾಗಿದೆ" ಎಂದು ಆರ್ ಬಿಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+