For Quick Alerts
ALLOW NOTIFICATIONS  
For Daily Alerts

ಇಡಿ ನೋಟಿಸ್: ಮದ್ರಾಸ್‌ ಹೈಕೋರ್ಟ್‌ ಮೊರೆ ಹೋದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಸಚಿನ್‌ ಬನ್ಸಾಲ್

By Puttappa Koli
|

ಬೆಂಗಳೂರು, ಸೆಪ್ಟೆಂಬರ್ 4: ವಿದೇಶಿ ನೇರ ಹೂಡಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ತಮಗೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಭಾರತದ ಇ- ಕಾಮರ್ಸ್ ದೈತ್ಯ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಸಚಿನ್‌ ಬನ್ಸಾಲ್ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

2009-14ರ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ನೀತಿಯನ್ನು ಉಲ್ಲಂಘಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್ ವಿರುದ್ಧ ಆರೋಪವನ್ನು ಮಾಡಲಾಗಿದೆ. ಇದರಿಂದ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999ರ ಸೆಕ್ಷನ್ 16ರ ಅಡಿ ಫ್ಲಿಪ್‌ಕಾರ್ಟ್ ವಿರುದ್ಧ ನ್ಯಾಯಿಕ ವಿಚಾರಣೆಯನ್ನು ಆರಂಭಿಸಿ ನೋಟಿಸ್ ನೀಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಇಡಿ ನೋಟಿಸ್: ಮದ್ರಾಸ್‌ ಹೈಕೋರ್ಟ್‌ ಮೊರೆ ಹೋದ ಸಚಿನ್‌ ಬನ್ಸಾಲ್

ಫ್ಲಿಫ್‌ಕಾರ್ಟ್ ವಿದೇಶಿ ನೇರ ಹೂಡಿಕೆ ನೀತಿ- 2010ರ ಅನುಪಾಲನೆಯನ್ನು ಮಾಡಿಲ್ಲ ಎನ್ನುವುದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ. ಪ್ರಕರಣವು 2012-13ರಷ್ಟು ಹಳೆಯದಾಗಿದ್ದು, ಈ ಕುರಿತು ನೋಟಿಸ್ ಅನ್ನು ಆ.5, 2021ರಂದು ನೀಡಲಾಗಿದೆ ಎಂದಿರುವ ಬನ್ಸಾಲ್ ಈ ಸುದೀರ್ಘ ವಿಳಂಬವನ್ನು ಪ್ರಶ್ನಿಸಿದ್ದಾರೆ.

ಜಾರಿ ನಿರ್ದೇಶನಾಲಯದ (ಇಡಿ) 10,600 ಕೋಟಿ ರೂ.ಗಳ ಫೆಮಾ (ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ) ಉಲ್ಲಂಘನೆ ನೋಟಿಸ್ ನೀಡಿರುವುದನ್ನು ಸಚಿನ್ ಬನ್ಸಾಲ್ ಶುಕ್ರವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

2009-14ರ ಅವಧಿಯಲ್ಲಿ ಕೆಲವು ಫ್ಲಿಪ್‌ಕಾರ್ಟ್ ಗ್ರೂಪ್ ಕಂಪನಿಗಳ ಷೇರುಗಳನ್ನು ವಿದೇಶಿ ಹೂಡಿಕೆದಾರರಿಗೆ ನೀಡುವುದಕ್ಕೆ ಸಂಬಂಧಿಸಿದಂತೆ 2010ರ ಏಕೀಕೃತ ಎಫ್‌ಡಿಐ ನೀತಿಯಲ್ಲಿ ಷರತ್ತುಗಳನ್ನು ಪಾಲಿಸಿಲ್ಲ ಎಂದು ಸಚಿನ್ ಬನ್ಸಾಲ್ ಮತ್ತು ಇತರರ ವಿರುದ್ಧ ನೋಟಿಸ್ ನೀಡಲಾಗಿದೆ.

ನ್ಯಾಯಮೂರ್ತಿ ಆರ್. ಮಹದೇವನ್ ಕಳೆದ 12 ವರ್ಷಗಳಿಂದ ಆಪಾದಿತ ಉಲ್ಲಂಘನೆಯ ಮೇಲೆ ಏಕೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಕೇಳಿದ್ದಾರೆ. ಮೂರು ವಾರಗಳಲ್ಲಿ ಇಡಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

English summary

Flipkart Co-Founder Sachin Bansal Moves Madras High Court Against ED Notice

Flipkart Co-Founder Sachin Bansal moved the Madras High Court on Friday challenging a Rs 10,600 crore FEMA (Foreign Exchange Management Act) violation notice by the enforcement directorate (ED).
Story first published: Saturday, September 4, 2021, 13:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X