ಫ್ಲಿಪ್ ಕಾರ್ಟ್ ಹೊಸ ವ್ಯವಹಾರ ಆರಂಭಿಸಲಿದೆ. ಅದು ಈಗಾಗಲೇ ಇರುವ ವ್ಯವಹಾರದ ಒಂದು ಭಾಗವಾಗಿ. ಸ್ಥಳೀಯ ಮಳಿಗೆಗಳು ಹಾಗೂ ತನ್ನದೇ ಸ್ವಂತ ಸಣ್ಣ ಕೇಂದ್ರಗಳಿಂದ 90 ನಿಮಿಷದಲ್ಲಿ, ಹೌದು ತೊಂಬತ್ತೇ ನಿಮಿಷದಲ್ಲಿ ಉತ್ಪನ್ನಗಳನ್ನು ಡೆಲಿವರಿ ಮಾಡಲಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
ದಿನಸಿ ಪದಾರ್ಥಗಳೊಂದಿಗೆ ಫ್ಲಿಪ್ ಕಾರ್ಟ್ ಈ ವ್ಯವಹಾರವನ್ನು ಶುರು ಮಾಡಲಿದೆ. ಇದೆಂಥ ಸಂದರ್ಭ ಅಂದರೆ, ಒಂದು ಕಡೆ ರಿಲಯನ್ಸ್ ಮಾಲೀಕತ್ವದ ಜಿಯೋಮಾರ್ಟ್, ಮತ್ತೊಂದು ಕಡೆ ಅಮೆಜಾನ್ ಕೂಡ ರೀಟೇಲ್ ವ್ಯವಹಾರಕ್ಕೆ ಕಾಲಿಡುತ್ತದೆ. ಇಂಥ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಫ್ಲಿಪ್ ಕಾರ್ಟ್ ನಿರ್ಧಾರ ಸಮಯೋಚಿತವಾಗಿದೆ.
ಇನ್ನೊಂದು ತಿಂಗಳಲ್ಲಿ ಈ ಸೇವೆ ಆರಂಭ ಆಗಬಹುದು. ಆದರೆ 90 ನಿಮಿಷದೊಳಗೆ ಉತ್ಪನ್ನಗಳನ್ನು ಡೆಲಿವರಿ ಮಾಡಬೇಕು ಎಂಬ ಆಲೋಚನೆ ಫ್ಲಿಪ್ ಕಾರ್ಟ್ ಗೆ ಬಹಳ ಹಿಂದಿನಿಂದಲೂ ಇತ್ತು ಎಂದು ಈ ಬಗ್ಗೆ ಮಾಹಿತಿ ಇರುವವರು ಹೇಳಿದ್ದಾರೆ. ಇನ್ನು ಶಾಡೋಫಾಕ್ಸ್ ನಲ್ಲಿ ಕಳೆದ ವರ್ಷ 60 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿರುವ ಫ್ಲಿಪ್ ಕಾರ್ಟ್, ಹೊಸ ಸೇವೆಯ ಸರಕು ಸಾಗಣೆಗೆ ಅದನ್ನು ಬಳಸಿಕೊಳ್ಳಲಿದೆ.

ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಆಫ್ ಲೈನ್ ವ್ಯವಹಾರಗಳಲ್ಲಿ ಬಹುಪಾಲು ಕೊರೊನಾ ನಂತರ ಆನ್ ಲೈನ್ ಕಡೆಗೆ ತಿರುಗಿದ್ದಾರೆ. ಏಕೆಂದರೆ, ದೀರ್ಘಾವಧಿಯಲ್ಲಿ ಇದರ ಬೇಡಿಕೆ ಹೆಚ್ಚಾಗಿರಲಿದೆ ಎಂಬುದು ನಿರೀಕ್ಷೆಯಾಗಿದೆ. ಫ್ಲಿಪ್ ಕಾರ್ಟ್ ಮೊದಲಿಗೆ ಬೆಂಗಳೂರಿನಲ್ಲಿ ಸೇವೆ ಆರಂಭಿಸಲಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಬಿಗ್ ಬಿಲಿಯನ್ ಡೇ ನಡೆಯುವ ತನಕ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮುಂದುವರಿಯಲಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications