ನವದೆಹಲಿ, ಅ. 23: ಡಾಲರ್ ಬಲವೃದ್ಧಿ ಹೆಚ್ಚುತ್ತಿರುವಂತೆಯೇ ಭಾರತದಿಂದ ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆಗಳು ಹೊರಹೋಗುವುದು ಹೆಚ್ಚಾಗಿದೆ. ಈ ಅಕ್ಟೋಬರ್ ತಿಂಗಳಲ್ಲಿ ಮೂರು ವಾರದಲ್ಲೇ ಎಫ್‌ಪಿಐಗಳು ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಸುಮಾರು 6 ಸಾವಿರ ಕೋಟಿ ರೂಪಾಯಿ ಹಣ ಹಿಂಪಡೆದಿದ್ದಾರೆ. ಅಕ್ಟೋಬರ್ 1ರಿಂದ 21ರವರೆಗೆ ಎಫ್‌ಪಿಐನಿಂದ 5992 ಕೋಟಿ ರೂ ಹೂಡಿಕೆ ವಾಪಸ್ಸಾಗಿದೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ತುಸು ಕಡಿಮೆ ಇದೆ. ಈ ವರ್ಷ ಇದೂವರೆಗೂ ಎಫ್‌ಪಿಐ ಹಿಂಪಡೆದ ಬಂಡವಾಳದ ಮೊತ್ತ 1.75 ಲಕ್ಷ ಕೋಟಿ ರೂ ಎಂದು ಮಾಹಿತಿ ತಿಳಿದುಬಂದಿದೆ.
ಈ ವರ್ಷ ಎಫ್‌ಪಿಐಗಳು ಹೂಡಿಕೆ ಹಿಂಪಡೆಯಲು ಕಾರಣಗಳು ಕೆಲವುಂಟು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಒಂದು ಕಾರಣ. ಮತ್ತೊಂದು, ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಿರುವುದರಿಂದ ಅಲ್ಲಿಯ ಸರ್ಕಾರಿ ಟ್ರೆಷರಿ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಗಿಂತ ಟ್ರೆಷರಿ ಬಾಂಡ್‌ಗಳು ಹೂಡಿಕೆದಾರರಿಗೆ ಆಕರ್ಷಕ ಎನಿಸಿವೆ.
ಎಫ್‌ಪಿಐ ಓಟಕ್ಕೆ ಬ್ರೇಕ್?
ಬಹುತೇಕ ಈ ಹಣವನ್ನು ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆದಾರರು ಅಮೆರಿಕದ ಮಾರುಕಟ್ಟೆಗೆ ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಪ್ರಕ್ರಿಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆಯಾದರೂ ಕೆಲ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಹೆಚ್ಚು ಪ್ರಮಾಣದ ಬಂಡವಾಳ ಹೊರಹೋಗುವ ಸಾಧ್ಯತೆ ಕಡಿಮೆ. ಯಾಕೆಂದರೆ, ಕಳೆದ ಕೆಲ ದಿನಗಳಿಂದ ವಿದೇಶೀ ಹೂಡಿಕೆದಾರರು ಭಾರತದಿಂದ ಷೇರುಪೇಟೆಯಿಂದ ಹೂಡಿಕೆ ಹಿಂಪಡೆಯುವ ಪ್ರಮಾಣ ಬಹಳ ಕಡಿಮೆ ಆಗಿದೆ.
"ಮುಂದಿನ ದಿನಗಳಲ್ಲಿ ಎಫ್‌ಪಿಐಗಳು ತೀರಾ ಹೆಚ್ಚು ಮಾರಾಟಕ್ಕೆ ಮುಂದಾಗುವುದು ಅನುಮಾನ. ಆದರೆ, ಡಾಲರ್ ಬಲ ತಗ್ಗಲು ಆರಂಭವಾದ ಬಳಿಕವಷ್ಟೇ ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ಅವರು ಖರೀದಿಗೆ ಮುಂದಾಗಬಹುದು. ಆದರೆ, ಅಮೆರಿಕದ ಹಣದುಬ್ಬರ ಸ್ಥಿತಿ ಮತ್ತು ಫೆಡರಲ್ ಬ್ಯಾಂಕ್‌ನ ಹಣಕಾಸು ನೀತಿಯ ಮೇಲೆ ಇವೆಲ್ಲಾ ಅವಲಂಬಿತವಾಗಿವೆ" ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ಧಾರೆ.
ಸಂದಿಗ್ಧತೆಯಲ್ಲಿ ವಿದೇಶೀ ಹೂಡಿಕೆದಾರರು
ಕುತೂಹಲವೆಂದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಮತ್ತು ರೀಟೇಲ್ ಇನ್ವೆಸ್ಟರ್‌ಗಳು ಸಾಕಷ್ಟು ಖರೀದಿ ಪ್ರಕ್ರಿಯೆಯಲ್ಲಿರುವುದರಿಂದ ಎಫ್‌ಪಿಐ ನಷ್ಟ ಅಷ್ಟಾಗಿ ಗಂಭೀರವಾಗಿ ಕಾಣುತ್ತಿಲ್ಲ.
ಈಗ ಸ್ಥಿತಿ ಹೇಗಿದೆ ಎಂದರೆ ಫಾರೀನ್ ಪೋರ್ಟ್‌ಫೋಲಿಯೋ ಹೂಡಿಕೆದಾರರು ತಾವು ಮಾರಾಟ ಮಾಡಿದ ಷೇರುಗಳನ್ನು ಮತ್ತೆ ಖರೀದಿಸಬೇಕೆಂದರೆ ಅಧಿಕ ಬೆಲೆ ತೆರಬೇಕಾಗುತ್ತದೆ. ಈ ವಾಸ್ತವ ಸ್ಥಿತಿ ಅರಿವಾಗುತ್ತಿರುವಂತೆಯೇ ಎಫ್‌ಪಿಐಗಳು ತಮ್ಮ ಷೇರು ಮಾರಾಟದ ಭರಾಟೆಯನ್ನು ತಗ್ಗಿಸಿದ್ದಾರೆ. ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಚೀಫ್ ಇನ್ವೆಸ್ಟ್‌ಮೆಂಟ್ ಸ್ಟ್ರಾಟಿಜಿಸ್ಟ್ ವಿ ಕೆ ವಿಜಯಕುಮಾರ್ ಕೂಡ ಇದೇ ಅಭಿಪ್ರಾಯ ಅನುಮೋದಿಸುತ್ತಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಎಫ್‌ಪಿಐನಿಂದ ಹಿಂಪಡೆಯಲಾದ ಬಂಡವಾಳ 7,600 ಕೋಟಿ ರೂ ಆಗಿತ್ತು. ಅಕ್ಟೋಬರ್‌ನ ಮೊದಲೆರಡು ವಾರದಲ್ಲಿ ವಿದೇಶೀ ಹೂಡಿಕೆದಾರರಿಂದ ಷೇರು ಮಾರಾಟ ಜೋರಾಗಿಯೇ ಇತ್ತು. ಆದರೆ, ಕಳೆದ ಕೆಲ ದಿನಗಳಿಂದ ಇದು ತಗ್ಗಿದೆ.
ಆಗಸ್ಟ್‌ನಲ್ಲಿ ಹೆಚ್ಚು ಹೂಡಿಕೆ
ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದ ಭಾರತೀಯ ಈಕ್ವಿಟಿ ಮಾರುಕಟ್ಟೆಯಿಂದ ಎಫ್‌ಪಿಐಗಳು ಹೂಡಿಕೆ ಹಿಂಪಡೆಯುವ ಕಾರ್ಯ ಚಾಲ್ತಿಗೊಂಡಿತ್ತು. ಸತತ ಒಂಬತ್ತು ತಿಂಗಳು ಇದೇ ಟ್ರೆಂಡ್ ಇದ್ದದ್ದು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಾತ್ರ ಎಫ್‌ಪಿಐಗಳು ಮಾರಾಟಕ್ಕಿಂತ ಖರೀದಿ ಹೆಚ್ಚು ಮಾಡಿದ್ದರು. ಜುಲೈನಲ್ಲಿ ಎಫ್‌ಪಿಐಗಳಿಂದ ಆದ ನಿವ್ವಳ ಹೂಡಿಕೆ 5,000 ಕೋಟಿ ಆಗಿತ್ತು. ಆಗಸ್ಟ್ ತಿಂಗಳಲ್ಲಿ ಇದು ಬರೋಬ್ಬರಿ 51,200 ಕೋಟಿ ರೂ ಆಗಿತ್ತು. ಇವೆರಡು ತಿಂಗಳು ಬಿಟ್ಟರೆ ಉಳಿದಂತೆ ಕಳೆದ 12 ತಿಂಗಳು ಎಫ್‌ಪಿಐಗಳು ಭಾರತದಿಂದ ಹೂಡಿಕೆ ಹಿಂಪಡೆಯುವ ಇರಾದೆಯನ್ನೇ ತೋರಿಸಿವೆ.
ಉಕ್ರೇನ್ ರಷ್ಯಾ ಯುದ್ಧದ ಪರಿಣಾಮವು ಜಾಗತಿಕ ಆರ್ಥಿಕತೆಯ ಬೆಳವಣಿಗೆಯನ್ನು ಹಿಂದಕ್ಕೆ ಜಗ್ಗುವಂತೆ ಮಾಡುತ್ತಿದೆ. ಇದರಿಂದ ಎಫ್‌ಪಿಐಗಳಲ್ಲಿ ಅಧೈರ್ಯ ಮುಂದುವರಿಯುವಂತಾಗಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications