ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಭಾರತದ ಮಾರುಕಟ್ಟೆಯಲ್ಲಿ ಅಕ್ಟೋಬರ್ ನಲ್ಲಿ ಇಲ್ಲಿಯವರೆಗೆ ನಿವ್ವಳವಾಗಿ (ಹೂಡಿಕೆ ಮಾಡಿದ ಮೊತ್ತದಿಂದ ಹಿಂತೆಗೆದುಕೊಂಡ ಮೊತ್ತವನ್ನು ಕಳೆದ ಮೇಲೆ ಉಳಿಯುವುದು) 1,086 ಕೋಟಿ ರುಪಾಯಿಯನ್ನು ಹೂಡಿಕೆ ಮಾಡಲಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿನ ಏರಿಕೆ, ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚಳ, ಸಕಾರಾತ್ಮಕ ಜಾಗತಿಕ ಪ್ರಭಾವದ ಕಾರಣಕ್ಕೆ ಎಫ್ ಪಿಐಗೆ ಉತ್ತೇಜನ ಸಿಕ್ಕಿದೆ.
ಡೆಪಾಸಿಟರಿ ದತ್ತಾಂಶದ ಪ್ರಕಾರ, ವಿದೇಶೀ ಹೂಡಿಕೆದಾರರು ಅಕ್ಟೋಬರ್ 1ರಿಂದ 9ನೇ ತಾರೀಕಿನ ಮಧ್ಯೆ ಈಕ್ವಿಟಿಗಳಿಗೆ 5245 ಕೋಟಿ ರುಪಾಯಿ ಹೂಡಿಕೆ ಮಾಡಿದ್ದು, 4159 ಕೋಟಿ ರುಪಾಯಿ ವಿಥ್ ಡ್ರಾ ಮಾಡಿದ್ದಾರೆ. ಒಟ್ಟಾರೆಯಾಗಿ ನಿವ್ವಳ ಒಳಹರಿವು ಎಷ್ಟು ಎಂದು ಗಮನಿಸಿದರೆ, 1086 ಕೋಟಿ ರುಪಾಯಿ ಆಗುತ್ತದೆ.
ಸೆಪ್ಟೆಂಬರ್ ತಿಂಗಳಲ್ಲಿ ಎಫ್ ಪಿಐ ನಿವ್ವಳ ಮಾರಾಟ 3419 ಕೋಟಿ ರುಪಾಯು ಇತ್ತು. ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ದೇಶೀಯ ಹಾಗೂ ಅಂತರರಾಷ್ಟ್ರೀಯ ಅಂಶಗಳು ಅಕ್ಟೋಬರ್ ನಲ್ಲಿ ಇಲ್ಲಿಯ ತನಕ ನಿವ್ವಳ ಹರಿವಿಗೆ ಕೊಡುಗೆ ನೀಡಿವೆ.

ಜಾಗತಿಕ ಅಂಶ ಎಂದರೆ, ಯುಎಸ್ ಅಧ್ಯಕ್ಷೀಯ ಚುನಾವಣೆ, ಹೆಚ್ಚುತ್ತಿರುವ ಕೊರೊನಾ ಸೋಂಕಿತ ಪ್ರಕರಣ, ಯುಎಸ್ ಹಾಗೂ ಚೀನಾದ ಮಧ್ಯೆ ಉದ್ವಿಗ್ನ ಸ್ಥಿತಿ ಇವೆಲ್ಲವೂ ಸೇರಿ ಎಫ್ ಪಿಐ ಒಳಹರಿವನ್ನು ತೀರ್ಮಾನಿಸುವ ಅಂಶಗಳಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.


Click it and Unblock the Notifications