ದಕ್ಷಿಣ ಮಧ್ಯ ರೈಲ್ವೆಯ (ಎಸ್‌ಸಿಆರ್) ವಿವಿಧ ನಿಲ್ದಾಣಗಳಿಂದ ಪರಿಚಯಿಸಲಾದ ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಡಿಸೆಂಬರ್ 2023 ರಲ್ಲಿ ಯಶಸ್ವಿಯನ್ನು ಕಂಡಿದೆ. ಶೇಕಡ 100ಕ್ಕಿಂತ ಹೆಚ್ಚು ಪ್ರೋತ್ಸಾಹವನ್ನು ಪಡೆದಿವೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ದಕ್ಷಿಣ ಮಧ್ಯ ರೈಲ್ವೆಯಲ್ಲಿ (ಎಸ್‌ಸಿಆರ್) ಜಲ್ನಾದಿಂದ ಮುಂಬೈ ಸಿಎಸ್‌ಎಂಟಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಲಾಗಿದೆ. ಈ ರೈಲು ಮುಂಬೈನಿಂದ ಜನವರಿ 1, 2024 ರಂದು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಜೈನ್ ವಂದೇ ಭಾರತ್ ರೈಲುಗಳು ಪೂರ್ಣ ಆಕ್ಯುಪೆನ್ಸಿಯೊಂದಿಗೆ ಓಡುತ್ತಿರುವ ಬಗ್ಗೆ ಅತ್ಯಂತ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ. ಹಾಗಾದರೆ ಯಾವೆಲ್ಲ ರೈಲುಗಳು ಫುಲ್ ಆಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಯಾವೆಲ್ಲ ರೈಲುಗಳು ಫುಲ್?
ಡಿಸೆಂಬರ್, 2023 ರಲ್ಲಿ, ಸಿಕಂದರಾಬಾದ್ - ವಿಶಾಖಪಟ್ಟಣ ವಿಬಿ ಎಕ್ಸ್‌ಪ್ರೆಸ್ ಶೇಕಡ 134 ಆಕ್ಯುಪೆನ್ಸಿಯನ್ನು ಪಡೆದಿದೆ. ವಿಶಾಖಪಟ್ಟಣಂ - ಸಿಕಂದರಾಬಾದ್ ಶೇಕಡ 143, ಸಿಕಂದರಾಬಾದ್ - ತಿರುಪತಿ ಶೇಕಡ 114, ತಿರುಪತಿ - ಸಿಕಂದರಾಬಾದ್ ಶೇಕಡ 105, ಕಾಚೇಗೌಡ - ಯಶವಂತಪುರ ಶೇಕಡ 107, ಯಶವಂತಪುರ - ಕಾಚೇಗೌಡ ಶೇಕಡ 110, ವಿಜಯವಾಡ - ಎಂಜಿಆರ್ ಚೆನ್ನೈ ಶೇಕಡ 126 ನೋಂದಾಯಿಸಿದ್ದರೆ, ಎಂಜಿಆರ್ ಚೆನ್ನೈ - ವಿಜಯವಾಡ ಶೇಕಡ 119 ರಷ್ಟು ಆಕ್ಯುಪೆನ್ಸಿಯನ್ನು ನೋಂದಾಯಿಸಿದೆ. ಅಂದರೆ ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರಿನ ರೈಲು ಕೂಡಾ ಸೇರಿದೆ.
ಆರು ವಂದೇ ಭಾರತ್ ರೈಲು ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್, ಜಲ್ನಾ-ಮುಂಬೈ, ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ರೈಲುಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಇದಲ್ಲದೆ, ಪ್ರಧಾನಿ ಮೋದಿ ಅವರು ಬೆಂಗಳೂರಿನ ದರ್ಭಾಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ನಡುವೆ ಎರಡು ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಹಾಗೆಯೇ ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿಗೆ ಉದ್ಘಾಟನೆ ಮಾಡಿದ್ದಾರೆ.


Click it and Unblock the Notifications