ಫಾಕ್ಸ್‌ಕಾನ್ ಎಂದೇ ಪ್ರಸಿದ್ಧವಾದ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್, ಆಪಲ್ ಪೂರೈಕೆದಾರ ಸಂಸ್ಥೆ ಕರ್ನಾಟಕದಲ್ಲಿ ಹೆಚ್ಚುವರಿ ಹೂಡಿಕೆ ಮಾಡಲು ಈಗ ಮುಂದಾಗಿದೆ. ಫಾಕ್ಸ್‌ಕಾನ್ ಹೆಚ್ಚುವರಿಯಾಗಿ 139.11 ಬಿಲಿಯನ್ ರೂಪಾಯಿಗಳನ್ನು ಅಥವಾ (1.67 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಯೋಜಿಸಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ತೈವಾನ್ ಮೂಲದ ಕಂಪನಿಯು ಸುಮಾರು ಶೇಕಡ 70 ರಷ್ಟು ಐಫೋನ್‌ಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರದಲ್ಲಿ ತಯಾರಿ ಮಾಡುವ ಸಂಸ್ಥೆ ಇದಾಗಿದೆ. ಹಾಗೆಯೇ ಕೋವಿಡ್ ಅಡೆತಡೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಂತರ ಚೀನಾದಿಂದ ಉತ್ಪಾದನೆಯನ್ನು ವೈವಿಧ್ಯಗೊಳಿಸುತ್ತಿದೆ.

ಫಾಕ್ಸ್‌ಕಾನ್ ದಕ್ಷಿಣ ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳಲ್ಲಿ ಹೆಚ್ಚು ಹೂಡಿಕೆ ಮಾಡುವ ಮೂಲಕ ಕಳೆದ ವರ್ಷದಲ್ಲಿ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸಿದೆ. ಕರ್ನಾಟಕದಲ್ಲಿಯೇ, ಕಂಪನಿಯು ಆಗಸ್ಟ್‌ನಲ್ಲಿ ಐಫೋನ್‌ಗಳು ಮತ್ತು ಚಿಪ್ ತಯಾರಿಕೆಗಾಗಿ ಕೇಸಿಂಗ್ ಘಟಕಗಳನ್ನು ತಯಾರಿಸಲು ಎರಡು ಯೋಜನೆಗಳಲ್ಲಿ ಒಟ್ಟಾಗಿ 600 ಮಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ.
ಫಾಕ್ಸ್‌ಕಾನ್ ಏಪ್ರಿಲ್ 2024 ರ ವೇಳೆಗೆ ಕರ್ನಾಟಕದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಯೋಜನೆಯು ಸುಮಾರು 50,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಹೆಚ್ಚುವರಿ ಹೂಡಿಕೆಯ ಯೋಜನೆಗಳನ್ನು ಸರ್ಕಾರವು ವಿವರಿಸಲಿಲ್ಲ.
ತಮಿಳುನಾಡಿನಲ್ಲೂ ಹೂಡಿಕೆ
ಈ ಹಿಂದೆ ಆಗಸ್ಟ್‌ನಲ್ಲಿ ಫಾಕ್ಸ್‌ಕಾನ್ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಘೋಷಣೆಯನ್ನು ಮಾಡಲಾಗಿದೆ. ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಹೂಡಿಕೆ ಮಾಡಿದ ಸುದ್ದಿಯ ಒಂದು ದಿನದ ಬಳಿಕ ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಹೂಡಿಕೆ ಮಾಡುವ ಸುದ್ದಿ ಬಂದಿದೆ. ಈಗ ಮತ್ತೆ ಕರ್ನಾಟಕದಲ್ಲಿ ಹೂಡಿಕೆಗೆ ಫಾಕ್ಸ್‌ಕಾನ್ ಮುಂದಾಗಿದೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಫಾಕ್ಸ್‌ಕಾನ್ 1600 ಕೋಟಿ ರೂಪಾಯಿ ವೆಚ್ಚದಲ್ಲಿ ಮೊಬೈಲ್ ಘಟಕಗಳ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲಿದೆ ಎಂದು ತಮಿಳುನಾಡು ಸರ್ಕಾರ ಸೋಮವಾರ ಘೋಷಿಸಿದೆ. ಈ ಸ್ಥಾವರವು 6,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.


Click it and Unblock the Notifications