1 ಲಕ್ಷ ಕೋಟಿ ರು. ದಾಟಿದ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ಹೂಡಿಕೆ

ಇನ್ನೇನು 2020ನೇ ಇಸವಿ ಮುಗಿಯುತ್ತಾ ಬಂದಿದೆ. ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ನಿವ್ವಳ ಒಳಹರಿವು 1.42 ಲಕ್ಷ ಕೋಟಿ ರುಪಾಯಿ ಬಂದಿದೆ. 2002ನೇ ಇಸವಿಯ ನಂತರ ಬಂದ ಅತಿ ದೊಡ್ಡ ಹೂಡಿಕೆ ಇದು. ಹೆಚ್ಚಿನ ನಗದು, ಆಕರ್ಷಕ ಮೌಲ್ಯಮಾಪನ ಮತ್ತು ಯು.ಎಸ್. ಡಾಲರ್ ನಲ್ಲಿನ ದುರ್ಬಲತೆ ಕಾರಣಕ್ಕೆ ಭಾರತದ ಷೇರು ಮಾರುಕಟ್ಟೆಯು ದೊಡ್ಡ ಮಟ್ಟದಲ್ಲಿ ಬಂಡವಾಳವನ್ನು ಆಕರ್ಷಿಸಿದೆ.

ಆದರೆ, ಕೊರೊನಾ ಬಿಕ್ಕಟ್ಟಿನ ಮಧ್ಯೆ ಎಫ್ ಪಿಐನಿಂದ ಡೆಟ್ ಸೆಕ್ಯೂರಿಟಿಗಳನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಲಾಗಿದೆ. ಇತಿಹಾಸದಲ್ಲಿ ಇದು ಐದನೇ ಬಾರಿಗೆ ವಿದೇಶಿ ಹೂಡಿಕೆದಾರರ ಈಕ್ವಿಟಿಯಲ್ಲಿನ ಹೂಡಿಕೆ ವರ್ಷವೊಂದರಲ್ಲಿ 1 ಲಕ್ಷ ಕೋಟಿ ರುಪಾಯಿ ದಾಟಿದೆ. ಇದಕ್ಕೂ ಮುನ್ನ 2019, 2013, 2012 ಮತ್ತು 2010ರಲ್ಲಿ 1 ಲಕ್ಷ ಕೋಟಿ ರುಪಾಯಿಯ ಬಂಡವಾಳ ಹರಿವು ದಾಟಿತ್ತು.

1 ಲಕ್ಷ ಕೋಟಿ ದಾಟಿದ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ಹೂಡಿಕೆ

ಕ್ರಮವಾಗಿ 1.01 ಲಕ್ಷ ಕೋಟಿ ರು., 1.13 ಲಕ್ಷ ಕೋಟಿ ರು., 1.28 ಲಕ್ಷ ಕೋಟಿ ರು., ಹಾಗೂ 1.33 ಲಕ್ಷ ಕೋಟಿ ರುಪಾಯಿ ಮುಟ್ಟಿತ್ತು. 2020ನೇ ಇಸವಿಯಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟ್ ಮೆಂಟ್ ಇಲ್ಲಿಯ ತನಕ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚಿದೆ. ಇನ್ನು ಎಫ್ ಪಿಐನಿಂದ 1.07 ಲಕ್ಷ ಕೋಟಿ ರುಪಾಯಿ ಡೆಟ್ ಅನ್ನು ವಾಪಸ್ ಪಡೆಯಲಾಗಿದೆ. ಅದೇ ರೀತಿ 2002ರ ನಂತರ 2020ನೇ ಇಸವಿಯಲ್ಲೇ ಡೆಟ್ ಮಾರ್ಕೆಟ್ ನಿಂದ ಅತಿ ದೊಡ್ಡ ಮೊತ್ತವನ್ನು ಹಿಂಪಡೆಯಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+