ಡಿಸೆಂಬರ್ 1ರಿಂದ 18ರ ಮಧ್ಯೆ ಎಫ್ ಪಿಐ ಒಳಹರಿವು 54,980 ಕೋಟಿ ರು.

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ಡಿಸೆಂಬರ್ ನಲ್ಲಿ ಈ ತನಕ ಭಾರತದ ಮಾರುಕಟ್ಟೆಗೆ ರು. 54,980 ಕೋಟಿ ಬಂಡವಾಳ ಹರಿಸಿದ್ದಾರೆ. ಡೆಪಾಸಿಟರಿ ದತ್ತಾಂಶದ ಪ್ರಕಾರ, ನಿವ್ವಳವಾಗಿ 48,858 ಕೋಟಿ ರುಪಾಯಿ ಈಕ್ವಿಟಿಗಳಲ್ಲಿ ಮತ್ತು 6122 ಕೋಟಿ ರುಪಾಯಿ ಡೆಟ್ ಸೆಗ್ಮೆಂಟ್ ನಲ್ಲಿ ಡಿಸೆಂಬರ್ 1ರಿಂದ 18ನೇ ತಾರೀಕಿನ ಮಧ್ಯೆ ಆಗಿದೆ.

ನವೆಂಬರ್ ತಿಂಗಳಲ್ಲಿ ಎಫ್ ಪಿಐ ಒಟ್ಟಾರೆ ನಿವ್ವಳ ಹೂಡಿಕೆ 62,951 ಕೋಟಿ ರುಪಾಯಿ ಆಗಿತ್ತು. ಮಾರ್ನಿಂಗ್ ಸ್ಟಾರ್ ಇಂಡಿಯಾದ ರೀಸರ್ಚ್ ಮ್ಯಾನೇಜರ್- ಸಹ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿನ ಹೆಚ್ಚುವರಿ ಹಣ ಮತ್ತು ಕಡಿಮೆ ಬಡ್ಡಿ ದರವು ಭಾರತದಂಥ ಉದಯೋನ್ಮುಖ ಮಾರುಕಟ್ಟೆಗೆ ವಿದೇಶಿ ಹರಿವು ಬರುವಂತೆ ಮಾಡಿದೆ ಎಂದಿದ್ದಾರೆ.

ಡಿಸೆಂಬರ್ 1ರಿಂದ 18ರ ಮಧ್ಯೆ ಎಫ್ ಪಿಐ ಒಳಹರಿವು 54,980 ಕೋಟಿ ರು.

ಆರ್ಥಿಕ ಪುನಶ್ಚೇತನಕ್ಕಾಗಿ ವಿವಿಧ ಕೇಂದ್ರ ಬ್ಯಾಂಕ್ ಗಳಿಂದ ಉತ್ತೇಜನಾ ಪ್ಯಾಕೇಜ್ ಗಳ ನಿರೀಕ್ಷೆಯಿಂದ ಹೂಡಿಕೆದಾರರಲ್ಲಿ ಅಪಾಯದ ಆತಂಕ ದೂರ ಮಾಡಿದೆ ಹಾಗೂ ಡಾಲರ್ ದುರ್ಬಲತೆಯು ಉದಯೋನ್ಮುಖ ಮಾರುಕಟ್ಟೆಯತ್ತ ಬಂಡವಾಳ ಹರಿದುಬರುವಂತೆ ಮಾಡಿದೆ. ಸ್ಥೂಲ ಆರ್ಥಿಕ ಪರಿಸರದಲ್ಲಿ ಪ್ರಗತಿ ಕಂಡುಬಂದಿದ್ದು, ಆ ಪರಿಣಾಮ ಎಫ್ ಪಿಐ ಹರಿವಿನ ಮೇಲೆ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+