ವರ್ಕ್ ಫ್ರಮ್ ಹೋಮ್ ನೀಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಗುರುಗ್ರಾಮದ ಮಹಿಳೆಗೆ ವರ್ಕ್ ಫ್ರಮ್ ಹೋಮ್ ಉದ್ಯೋಗಗಿಟ್ಟಿಸಿಕೊಡುವ ನೆಪದಲ್ಲಿ ಈ ವಂಚನೆಯನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ವಂಚನೆಗೆ ಒಳಗಾಗಿರುವ ಬಗ್ಗೆ ಮಹಿಳೆಯು ದೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೂಜಾ ವರ್ಮಾ ಎಂಬ ಆಗ್ರಾ ಮೂಲದ ಮಹಿಳೆಗೆ ವಾಟ್ಸಾಪ್ ಮೂಲಕ ಪಾರ್ಟ್ ಟೈಮ್ ವರ್ಕ್ ಫ್ರಮ್ ಹೋಮ್ ಉದ್ಯೋಗ ನೀಡುವುದಾಗಿ, ಇದರಿಂದ ಆಕೆ ಹಣ ಸಂಪಾದನೆ ಮಾಡುವುದಾಗಿ ಮೆಸೇಜ್ ಒಂದು ಬಂದಿತ್ತು, ಈ ಉದ್ಯೋಗ ನಿಜವೆಂದು ನಂಬಿ 11 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ಮಹಿಳೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವರ್ಮಾನಿಗೆ ಯೂಟ್ಯೂಬ್ ಚಾನೆಲ್‌ಗಳನ್ನು ಚಂದಾದಾರಿಕೆ (subscribing) ಮಾಡುವ ಕೆಲಸವನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ. ಹಾಗೆಯೇ ತನಗೆ ಲಿಂಕ್ ಒಂದನ್ನು ಕಳುಹಿಸಿ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗುವಂತೆ ತಿಳಿಸಲಾಗಿದೆ. ಟೆಲಿಗ್ರಾಂ ಚಾನೆಲ್‌ಗೆ ಈ ಮಹಿಳೆ ಜಾಯಿನ್ ಆದ ಬಳಿಕ ವರ್ಮಾಗೆ ಯೂಟ್ಯೂಬ್ ಚಾನೆಲ್ ಅನ್ನು ಚಂದಾದಾರಿಕೆ ಮಾಡುವ ಕೆಲಸವನ್ನು ನೀಡಲಾಗಿದೆ.
ಇನ್ನು ಈ ಕೆಲಸ ಲಭ್ಯವಾಗುವಾಗ 5000 ರೂಪಾಯಿ ಡೆಪಾಸಿಟ್ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಈ 5000 ರೂಪಾಯಿ ಹೂಡಿಕೆಗೆ ವರ್ಮಾಗೆ 6,440 ರೂಪಾಯಿ ಲಭ್ಯವಾಗಿದೆ. ಉತ್ತಮ ರಿಟರ್ನ್ ಬಂದಾಗ ಇದು ನಕಲಿ ಅಲ್ಲ, ವಂಚನೆ ಅಲ್ಲ ಎಂಬ ನಂಬಿಕೆ ವರ್ಮಾಗೆ ಬಂದಿದೆ. ಅದಾದ ಬಳಿಕ ವಂಚಕರು ತಮ್ಮ ಜಾಲಕ್ಕೆ ವರ್ಮಾರನ್ನು ಸಿಲುಕಿಸಿದ್ದಾರೆ.
ಇನ್ನು ತನ್ನನ್ನು ತಾನು ಕಂಗನಾ ಎಂದು ಹೇಳಿಕೊಂಡ ಮಹಿಳೆಯೊಬ್ಬರು, ಕರೆ ಮಾಡಿ 10 ಸಾವಿರ ರೂಪಾಯಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಬಳಿಕ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಪಡೆಯಬಹುದು ಎಂದು ಪೂಜಾ ವರ್ಮಾಗೆ ತನ್ನನ್ನು ತಾನು ಕಂಗನಾ ಎಂದು ಹೇಳಿಕೊಂಡ ಮಹಿಳೆ ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಒಟ್ಟಾಗಿ 11.45 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಪೂಜಾ ವರ್ಮಾ ಹೇಳಿದ್ದಾರೆ.
ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ನೋಡಿ
1. ಮೊಬೈಲ್ ಸಂಖ್ಯೆ, ಅಕೌಂಟ್ ನಂಬರ್, ಒಟಿಪಿ, ಪಿನ್ ಮೊದಲಾದ ವೈಯಕ್ತಿಕ ಮಾಹಿತಿಗಳನ್ನು ಎಂದಿಗೂ ಕೂಡಾ ಹಂಚಿಕೊಳ್ಳಲು ಹೋಗಬೇಡಿ.
2. ಹಣವನ್ನು ನೀವು ಪಡೆಯಬೇಕಾದರೆ ಪಿನ್ ಅನ್ನು ಹಾಕಬೇಕಾಗಿಲ್ಲ. ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಮಾತ್ರ ಪಿನ್ ಬೇಕಾಗುತ್ತದೆ ಎಂಬುವುದು ನೆನಪಿರಲಿ.
3. ಬೇರೆ ಯಾವುದೇ ವ್ಯಕ್ತಿಯ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಆ ಖಾತೆಯನ್ನು ವೆರಿಫೈ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
4. ಯುಪಿಐ ಬಳಕೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ನೆಟ್‌ವರ್ಕ್ ಅನ್ನು ಬಳಕೆ ಮಾಡುವುದನ್ನು ತಪ್ಪಿಸಿಕೊಳ್ಳಿ.
5. ಯಾವುದೇ ಅಧಿಕೃತ ಸಂಸ್ಥೆಗಳಲ್ಲದೆ ಬೇರೆಡೆ ಹೂಡಿಕೆ ಮಾಡುವಾಗ ಸರಿಯಾದ ಪರಿಶೀಲನೆಯನ್ನು ನಡೆಸಿ.
6. ಹೂಡಿಕೆ ಮಾಡಿದ ಮೊತ್ತದ ಡಬಲ್, ಟ್ರಿಪಲ್ ಮೊತ್ತ ನಿಮಗೆ ಲಭ್ಯವಾಗುತ್ತದೆ ಎಂದಾದರೆ ಅದನ್ನು ಎಂದಿಗೂ ಕೂಡಾ ನಂಬದಿರಿ.
7. ಯಾವುದೇ ವ್ಯಕ್ತಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಿದಾಗ ನೀವು ನೀಡದಿರಿ.
8. ವಾಟ್ಸಾಪ್‌ನಲ್ಲಿ ಬರುವ ಎಲ್ಲ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಮೊದಲು ಅದು ಅಧಿಕೃತ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ.
9. ಪರಿಚಯವಿಲ್ಲದ ವ್ಯಕ್ತಿ ಹೂಡಿಕೆ ಡಬಲ್ ನೆಪದಲ್ಲಿ ಹಣ ಕೇಳಿದಾಗ ಮೊತ್ತ ನೀಡದಿರಿ. ಪರಿಚಯವಿದ್ದರೂ ಕೂಡಾ ಹೂಡಿಕೆ ಡಬಲ್ ಟ್ರ್ಯಾಪ್‌ಗೆ ಬಲಿಯಾಗದಿರಿ.


Click it and Unblock the Notifications