For Quick Alerts
ALLOW NOTIFICATIONS  
For Daily Alerts

ಗೋ ಏರ್ ನಿಂದ ಒಂದೇ PNRನಲ್ಲಿ ಹಲವು ಸಾಲಿನ ಸೀಟ್ ಬುಕ್ ಮಾಡಿ

|

ಗೋ ಏರ್ ವಿಮಾನ ಯಾನ ಸಂಸ್ಥೆಯು ಶುಕ್ರವಾರ "ಗೋ ಫ್ಲೈ ಪ್ರೈವೇಟ್" ಎಂಬ ಯೋಜನೆ ಘೋಷಣೆ ಮಾಡಿದೆ. ಇದರಲ್ಲಿ ಪ್ರಯಾಣಿಕರಿಗೆ ವಿಮಾನದೊಳಗೆ "ಖಾಸಗಿ ವಲಯ" ಸಿಗಲಿದೆ. ಒಂದೇ ಪಿಎನ್ ಆರ್ ನಲ್ಲಿ ಹಲವು ಸಾಲುಗಳನ್ನು ಬುಕ್ ಮಾಡಬಹುದಾಗಿದೆ. ಪ್ರಯಾಣಿಕರು ಪಾವತಿಸುವ ವೆಚ್ಚಕ್ಕೆ ಪೂರ್ಣ ಪ್ರಮಾಣದಲ್ಲಿ "ಖಾಸಗಿ ಬಾಡಿಗೆ ವಿಮಾನ"ದಲ್ಲಿ ಪ್ರಯಾಣಿಸಿದಂಥ ಅನುಭವ ನೀಡುತ್ತದೆ.

ಇಂಡಿಗೊ ಆಯ್ತು, ಇದೀಗ 'ಗೋ ಏರ್' ಕೂಡ ಉದ್ಯೋಗಿಗಳ ವೇತನ ಕಡಿತಕ್ಕೆ ನಿರ್ಧಾರಇಂಡಿಗೊ ಆಯ್ತು, ಇದೀಗ 'ಗೋ ಏರ್' ಕೂಡ ಉದ್ಯೋಗಿಗಳ ವೇತನ ಕಡಿತಕ್ಕೆ ನಿರ್ಧಾರ

ಪ್ರಯಾಣಿಕರು ಎಷ್ಟು ಸಾಲು ಬೇಕು ಎಂದು ಬುಕ್ ಮಾಡಿಕೊಳ್ಳಬಹುದು. ಇದರಿಂದ ವಿಮಾನದಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವೇ ಎಂಬ ಆತಂಕದಲ್ಲಿ ಇರುವವರಿಗೆ ವಿಶ್ವಾಸ ಮೂಡಿದಂತಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು ಪ್ರಯಾಣ ಮಾಡಿದಂಥ ಭಾವನೆಯೇ ಪ್ರಯಾಣಿಕರಿಗೆ ನೀಡಬೇಕು ಎಂಬುದು ಈಗ ಘೋಷಣೆ ಮಾಡಿರುವ ಯೋಜನೆಯ ಮುಖ್ಯ ಉದ್ದೇಶ.

ಗೋ ಏರ್ ನಿಂದ ಒಂದೇ PNRನಲ್ಲಿ ಹಲವು ಸಾಲಿನ ಸೀಟ್ ಬುಕ್ ಮಾಡಿ

ಅಂದ ಹಾಗೆ ಇಂಥದ್ದೊಂದು ಯೋಜನೆಯನ್ನು ಜಾರಿಗೆ ತರುತ್ತಿರುವ ಮೊದಲ ವಿಮಾನ ಯಾನ ಸಂಸ್ಥೆ ಗೋ ಏರ್. ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ವಿಮಾನ ಯಾನ ಸೇವೆಗೆ ಬೇಡಿಕೆ ಹೆಚ್ಚಿದೆ. ದೇಶೀಯ ವಿಮಾನ ಹಾರಾಟದಲ್ಲಿ ಇದನ್ನು ಜಾರಿಗೆ ತರುತ್ತಿರುವುದು ಸಂತೋಷ ತಂದಿದೆ ಎಂದು ಗೋ ಏರ್ ಕಾರ್ಯನಿರ್ವಾಹಕ ನಿರ್ದೇಶಕ ಜೆಹ್ ವಾಡಿಯಾ ತಿಳಿಸಿದ್ದಾರೆ.

English summary

GoFlyPrivate Launched By GoAir To Allow Passengers To Book Multiple Rows

Airline company GoAir on Friday launched a scheme, 'GoFlyPrivate', to offer passengers 'private zone' in the aircraft by allowing them to book multiple rows on a one PNR.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X