ಗೋಕುಲ್ ದಾಸ್ ಎಕ್ಸ್ ಪೋರ್ಟ್ಸ್ 1400ಕ್ಕೂ ಹೆಚ್ಚು ಗಾರ್ಮೆಂಟ್ ಕಾರ್ಮಿಕರ ಮೇಲೆ ಕೆಲಸ ಹೋಗುವ ತೂಗುಗತ್ತಿ ಅಲುಗಾಡುತ್ತಿದೆ. ಶ್ರೀರಂಗಪಟ್ಟಣದಲ್ಲಿ ಇರುವ ಅದರ ಘಟಕವನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ನಾಂದಿ ಹಾಡಿರುವುದು ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಅಂದ ಹಾಗೆ ಅಮೆರಿಕ ಹಾಗೂ ಯುರೋಪ್ ನ ಹಲವು ಬ್ರ್ಯಾಂಡ್ ಗಳಿಗೆ ಬಟ್ಟೆಗಳನ್ನು ಉತ್ಪಾದಿಸುವ ಮತ್ತು ಪೂರೈಸುತ್ತದೆ ಗೋಕುಲ್ ದಾಸ್ ಎಕ್ಸ್ ಪೋರ್ಟ್ಸ್.
ಯುರೋ ಕ್ಲಾಥಿಂಗ್ ಕಂಪೆನಿ- II (ECG) ಸಹಿ ಹಾಕಿರುವ ನೋಟಿಸ್ ನಲ್ಲಿ, ಕೆಲಸದಿಂದ ಉದ್ಯೋಗಿಗಳನ್ನು ತೆಗೆಯುವ ಬಗ್ಗೆ ಮಾಹಿತಿ ಇದೆ. ಉಳಿದಂತೆ ಬೇರೆ ಯಾವುದೇ ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಯುರೋ ಕ್ಲಾಥಿಂಗ್ ಕಂಪೆನಿ- II ಅನ್ನು ಜುಲೈ 1, 2010ರಲ್ಲಿ ಆರಂಭ ಮಾಡಲಾಗಿತ್ತು. ದೇಶದಲ್ಲೇ ಅತಿ ದೊಡ್ಡ ಬಟ್ಟೆ ತಯಾರಿಕೆ ಸಂಸ್ಥೆ ಇದು. ಉದ್ಯೋಗ ಕಡಿತದ ನಿರ್ಧಾರವು ಕಾರ್ಮಿಕರಲ್ಲಿ, ಕಾರ್ಮಿಕ ಒಕ್ಕೂಟಗಳಲ್ಲಿ ಸಿಟ್ಟನ್ನು ತರಿಸಿವೆ.
ಫ್ಯಾಕ್ಟರಿ ಮ್ಯಾನೇಜರ್ ಎಸ್. ಮಂಜುನಾಥ್ ಸಹಿ ಮಾಡಿರುವ ಪತ್ರದಲ್ಲಿ, ಜೂನ್ 8, 2020ರಿಂದ ಅನ್ವಯ ಆಗುವಂತೆ ಶ್ರೀರಂಗಪಟ್ಟಣ ಘಟಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಕೊರೊನಾದಿಂದ ಕಂಪೆನಿಯ ವ್ಯವಹಾರ ಮತ್ತು ರಫ್ತಿನ ಮೇಲೆ ಪರಿಣಾಮ ಬೀರಿದೆ. ಆರ್ಡರ್ ಗಳು ಬಂದಿಲ್ಲ. ರೀಟೇಲ್ ಮಳಿಗೆ, ಮಾಲ್ ಗಳು ಹಾಗೂ ಇತರ ವ್ಯಾಪಾರ- ವ್ಯವಹಾರಗಳು ಮುಚ್ಚಿರುವುದರಿಂದ ಹೀಗೆ ಆಗಿದೆ ಎಂದು ತಿಳಿಸಿದೆ.

ಇನ್ನು ಭಾರತದಲ್ಲಿನ ಚಿಲ್ಲರೆ ಮಾರಾಟಗಾರರು ಕನಿಷ್ಠ ಈ ವರ್ಷದ ಕೊನೆ ತನಕ ಆರ್ಡರ್ ಗಳನ್ನು ರದ್ದು ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಕೆಲಸದಿಂದ ತೆಗೆಯಲಾಗುತ್ತಿದೆ ಎಂಬ ಸುದ್ದಿ ಕೇಳಿ ನೂರಾರು ಉದ್ಯೋಗಿಗಳು ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ಭಾರತದಲ್ಲಿ ಹಲವು ಕೈಗಾರಿಕೆಗಳು ಕೊರೊನಾದ ಕಾರಣಕ್ಕೆ ಸಮಸ್ಯೆ ಎದುರಿಸುತ್ತಿವೆ. ಭವಿಷ್ಯದ ಬಗ್ಗೆ ಚಿಂತೆಗೆ ಈಡಾಗಿವೆ. ಕೊರೊನಾ ಲಾಕ್ ಡೌನ್ ದಿಂದಾಗಿ ಹತ್ತಿರಹತ್ತಿರ ಮೂರು ತಿಂಗಳ್ಯ್ ವ್ಯಾಪಾರಗಳು ಬಂದ್ ಆಗಿವೆ.


Click it and Unblock the Notifications