Bank Holiday Friday 18 April 2025: ನೀವು ನಾಳೆ ಬ್ಯಾಂಕ್ ಗೆ ಹೋಗೋಕೆ ಪ್ಲಾನ್ ಮಾಡಿದ್ದೀರಾ....? ಹಾಗಿದ್ರೆ ಈಗಲೇ ನಿಮ್ಮ ಪ್ಲಾನ್ ಕ್ಯಾನ್ಸಲ್ ಮಾಡಿಕೊಳ್ಳಿ.. ಯಾಕೆಂದರೆ ಏಪ್ರಿಲ್ (April) ತಿಂಗಳು ಬಂತೆಂದರೆ ಸಾಕು ಸಾಲು ಸಾಲು ರಜೆಗಳು ಸಿಗುತ್ತವೆ. ಅದರಲ್ಲೂ ಬ್ಯಾಂಕ್ ಉದ್ಯೋಗಿಗಳಿಗಂತೂ(Bank Employees)ರಜೆಗಳ ಸುರಿಮಳೆಯೇ ಈ ತಿಂಗಳಲ್ಲಿ ಸಿಗುತ್ತದೆ. ಅದರಲ್ಲಿ ಶುಭ ಶುಕ್ರವಾರವಿದೆ ಈ ದಿನದಂದು ಬ್ಯಾಂಕ್‌ಗೆ ರಜೆ ಇರುತೋ ಅಥವಾ ಇಲ್ಲವೋ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳೀಯೋಣ ಬನ್ನಿ...
ಹೌದು, ಶುಭ ಶುಕ್ರವಾರವು ಕ್ರಿಶ್ಚಿಯನ್ ಧರ್ಮದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ, ಇದು ಯೇಸು ಕ್ರಿಸ್ತನ ಶಿಲುಬೆಗೇರಿಸುವಿಕೆಯ ದಿನವನ್ನು ಸ್ಮರಿಸುವಂತಹ ದಿನವಾಗಿದೆ. ಇದನ್ನು ಗುಡ್ ಫ್ರೈಡೆ, ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಮಹಾ ಶುಕ್ರವಾರ ಎಂದೂ ಕರೆಯಲಾಗುತ್ತದೆ.ಈ ದಿನದಂದು ಲಾರ್ಡ್ ಜೀಸಸ್ ಕ್ರೈಸ್ಟ್ ಅನೇಕ ಚಿತ್ರಹಿಂಸೆಗಳ ನಂತರ ಶಿಲುಬೆಗೇರಿಸಲಾಯಿತು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕ್ರಿಶ್ಚಿಯನ್ ಧರ್ಮದ ಜನರು ಗುಡ್ ಫ್ರೈಡೆಯ ದಿನವನ್ನು ಲಾರ್ಡ್ ಜೀಸಸ್ನ ತ್ಯಾಗದ ದಿನವೆಂದು ನೆನಪಿಸಿಕೊಳ್ಳುತ್ತಾರೆ. ಈ ದಿನ ಜನರು ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಉಪವಾಸ ಆಚರಣೆಯನ್ನು ಮಾಡಿ ಸಿಹಿ ತಿನಿಸು ತಯಾರಿಸುತ್ತಾರೆ ಮತ್ತು ಹಂಚುತ್ತಾರೆ.. ಈ ದಿನವು ಪ್ರಪಂಚದಾದ್ಯಂತದ ಎಲ್ಲಾ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿದೆ. ಆದರೆ ಬ್ಯಾಂಕ್‌ಗಳಿಗೆ ರಜೆ ಇರುತ್ತೋ ಇಲ್ಲವೂ ಎಂಬುವುದನ್ನು ತಿಳಿಯಲು ಮುಂದ ಓದಿ..

2025 ರ ಶುಭ ಶುಕ್ರವಾರ ಯಾವಾಗ..?
ಈ ವರ್ಷ ಏಪ್ರಿಲ್ 18 ರಂದು ಶುಭ ಶುಕ್ರವಾರವನ್ನು ಆಚರಿಸಲಾಗುವುದು. ಆದರೆ ಈಸ್ಟರ್ ಭಾನುವಾರವನ್ನು ಎರಡು ದಿನಗಳ ನಂತರ ಅಂದರೆ ಏಪ್ರಿಲ್ 20 ರಂದು ಆಚರಿಸಲಾಗುವುದು.
ಶುಭ ಶುಕ್ರವಾರವನ್ನು ಏಕೆ ಆಚರಿಸಲಾಗುತ್ತದೆ?
ಗುಡ್ ಫ್ರೈಡೆ ಕ್ರಿಶ್ಚಿಯನ್ ಧರ್ಮದ ವಿಶೇಷ ಹಬ್ಬವಾಗಿದೆ. ಏಕೆಂದರೆ ಈ ದಿನದಂದು ಯೇಸುವನ್ನು ಶಿಲುಬೆಗೇರಿಸಲಾಯಿತು. ಧರ್ಮವನ್ನು ರಕ್ಷಿಸಲು ಯೇಸು ಈ ದಿನದಂದು ತನ್ನನ್ನು ತ್ಯಾಗ ಮಾಡಿದರು. ಇವರನ್ನು ಸ್ಮರಿಸುವುದಕ್ಕಾಗಿ ಶುಭ ಶುಕ್ರವಾರವನ್ನು ಆಚರಣೆ ಮಾಡುತ್ತಾರೆ. ಈ ದಿನವನ್ನು ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರುವವರು ಗುಡ್ ಫ್ರೈಡೆಯನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ. ಆದರೆ ಈ ಘಟನೆಯ ಮೂರು ದಿನಗಳ ನಂತರ ಅಂದರೆ ಈಸ್ಟರ್ ಭಾನುವಾರದಂದು ಜೀಸಸ್ ಪುನರುತ್ಥಾನಗೊಂಡರು ಎಂದು ಈಸ್ಟರ್ ಭಾನುವಾರ ಸಹ ಆಚರಣೆ ಮಾಡುತ್ತಾರೆ.
ಏಪ್ರಿಲ್ 18, ಶುಕ್ರವಾರ ಬ್ಯಾಂಕ್‌ಗೆ ರಜೆ ಇದ್ದೀಯಾ..?
ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿರುವ 2025ರ ಬ್ಯಾಂಕ್ ರಜಾ ಪಟ್ಟಿಯ ಪ್ರಕಾರ, ಏಪ್ರಿಲ್ 18, ಶುಕ್ರವಾರ ಅನ್ನು ಗುಡ್ ಫ್ರೈಡೇ ಪ್ರಯಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಈ ದಿನ ನಿಮಗೆ ಯಾವುದಾದರೂ ಬ್ಯಾಂಕ್ ಕೆಲಸ ಇದ್ದರೆ ಇದೇ (ಗುರುವಾರ) ಮುಗಿಸಿಕೊಳ್ಳಿ ನಾಳೆ ಯಾವುದೇ ಬ್ಯಾಂಕ್ ಓಪನ್ ಇರುವುದಿಲ್ಲ.
ಯಾವೆಲ್ಲಾ ರಾಜ್ಯಗಳಿಗೆ ಗುಡ್ ಫ್ರೈಡೇಗೆ ಬ್ಯಾಂಕ್ ರಜೆ ಇರುತ್ತೆ..?
ಗುಡ್ ಫ್ರೈಡೇ (ಏಪ್ರಿಲ್ 18) ಪ್ರಯುಕ್ತ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತೇವೆ. ಅವುಗಳು ಯಾವುವುವೆಂದರೆ ಕರ್ನಾಟಕ, ರಾಜಸ್ಥಾನ, ಅಸ್ಸಾಂ, ತ್ರಿಪುರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಬ್ಯಾಂಕ್ ಸೇವೆ ನಾಳೆ ಇರುವುದಿಲ್ಲ.
ಇನ್ನೂ ಆರ್‌ಬಿಐ ರಜಾ ದಿನಗಳ ಪಟ್ಟಿಯಲ್ಲಿ ಇಲ್ಲಿದ ರಾಜ್ಯಗಳಲ್ಲಿ ಬ್ಯಾಂಕುಗಳು ಓಪನ್ ಇರುರುತ್ತಾವೆ.
ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ,ಪ್ರಿಲ್ ನಲ್ಲಿ ಒಟ್ಟು 15 ಬ್ಯಾಂಕ್ ರಜಾದಿನಗಳಿವೆ. ಈ ಪೈಕಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳು ಕೂಡ ಸೇರಿಗೊಂಡಿವೆ.
2025ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ (ಒಟ್ಟು 15 ದಿನ):
ದಿನಾಂಕ ವಾರ ರಜೆ ಯಾವೆಲ್ಲ ರಾಜ್ಯಗಳಲ್ಲಿ ರಜೆ..?
ಏಪ್ರಿಲ್ 6 ಭಾನುವಾರ ಸಾಪ್ತಾಹಿಕ ರಜೆ ದೇಶಾದ್ಯಂತ
ಏಪ್ರಿಲ್ 12 ಶನಿವಾರ ಎರಡನೇ ಶನಿವಾರ ದೇಶಾದ್ಯಂತ
ಏಪ್ರಿಲ್ 13 ಭಾನುವಾರ ಸಾಪ್ತಾಹಿಕ ರಜೆ ದೇಶಾದ್ಯಂತ
ಏಪ್ರಿಲ್ 14 ಸೋಮವಾರ ಅಂಬೇಡ್ಕರ್ ಜಯಂತಿ ಬಹುತೇಕ ರಾಜ್ಯಗಳಲ್ಲಿ
ಏಪ್ರಿಲ್ 15 ಮಂಗಳವಾರ ಹಿಮಾಚಲದ ಭೈಷಾಜ್ಯ ಯಾತ್ರೆ ಕೆಲವೊಂದಿಷ್ಟು ರಾಜ್ಯಗಳಲ್ಲಿ
ಏಪ್ರಿಲ್ 18 ಶುಕ್ರವಾರ ಗುಡ್ ಫ್ರೈಡೇ ಬಹುತೇಕ ರಾಜ್ಯಗಳಲ್ಲಿ
ಏಪ್ರಿಲ್ 20 ಭಾನುವಾರ ಸಾಪ್ತಾಹಿಕ ರಜೆ ದೇಶಾದ್ಯಂತ
ಏಪ್ರಿಲ್ 21 ಸೋಮವಾರ ಗರಿಯಾ ಪೂಜೆ ಮಿಜೋರಾಂ,ಅಗರ್ತಲಾ ಬಹುತೇಕ ರಾಜ್ಯಗಳಲ್ಲಿ
ಏಪ್ರಿಲ್ 26 ಶನಿವಾರ ನಾಲ್ಕನೇ ಶನಿವಾರ ದೇಶಾದ್ಯಂತ
ಏಪ್ರಿಲ್ 27 ಭಾನುವಾರ ಸಾಪ್ತಾಹಿಕ ರಜೆ ದೇಶಾದ್ಯಂತ
ಏಪ್ರಿಲ್ 29 ಮಂಗಳವಾರ ಪರಶುರಾಮ ಜಯಂತಿ ಹಿಮಾಚಲ ಪ್ರದೇಶ
ಏಪ್ರಿಲ್ 30 ಬುಧವಾರ ಬಸವ ಜಯಂತಿ / ಅಕ್ಷಯ ತೃತೀಯ ಬೆಂಗಳೂರಿನಲ್ಲಿ ಬ್ಯಾಂಕುಗಳು
ಯಾವೆಲ್ಲಾ ಸೇವೆಗಳು ಲಭ್ಯ?
ನೀವು ಬ್ಯಾಂಕುಗಳಿಗೆ ರಜೆ ಇದ್ದರೂ ಕೂಡ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂನಂತಹ ಸೇವೆಗಳ ಮೂಲಕ ಬ್ಯಾಂಕಿಗೆ ಹೋಗದೆಯೇ ಅನೇಕ ಹಣಕಾಸು ಕೆಲಸಗಳನ್ನು ಮಾಡಬಹುದು.


Click it and Unblock the Notifications