For Quick Alerts
ALLOW NOTIFICATIONS  
For Daily Alerts

ಭಾರ್ತಿ ಏರ್ ಟೆಲ್ ನಲ್ಲಿ ಶೇ 100ರಷ್ಟು ವಿದೇಶ ನೇರ ಹೂಡಿಕೆಗೆ ಸರ್ಕಾರ ಸಮ್ಮತಿ

|

ಭಾರ್ತಿ ಏರ್ ಟೆಲ್ ನಲ್ಲಿ ವಿದೇಶ ನೇರ ಹೂಡಿಕೆಯನ್ನು 49 ಪರ್ಸೆಂಟ್ ನಿಂದ 100 ಪರ್ಸೆಂಟ್ ಗೆ ಏರಿಸಲು ಟೆಲಿಕಾಂ ಇಲಾಖೆಯು (ಡಿಒಟಿ) ಒಪ್ಪಿಗೆ ನೀಡಿದೆ. ಮಂಗಳವಾರದಂದು ಈ ಬಗ್ಗೆ ಕಂಪೆನಿ ಮಾಹಿತಿಯನ್ನು ನೀಡಿದೆ. ಇದರ ಜತೆಗೆ ಕಂಪೆನಿಯಲ್ಲಿ 74ರಷ್ಟು ಪಾಲು ಹೊಂದಲು ವಿದೇಶಿ ಹೂಡಿಕೆದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.

ಏರ್ ಟೆಲ್ ನಿಂದ 179 ರುಪಾಯಿಯ ಪ್ರೀಪೇಯ್ಡ್ ಪ್ಲಾನ್, ಜತೆಗೆ ಇನ್ಷೂರೆನ್ಸ್ಏರ್ ಟೆಲ್ ನಿಂದ 179 ರುಪಾಯಿಯ ಪ್ರೀಪೇಯ್ಡ್ ಪ್ಲಾನ್, ಜತೆಗೆ ಇನ್ಷೂರೆನ್ಸ್

"ಭಾರ್ತಿ ಏರ್ ಟೆಲ್ ಲಿಮಿಟೆಡ್ ಟೆಲಿಕಾಂ ಇಲಾಖೆಯಿಂದ (DOT) ಒಪ್ಪಿಗೆ ಪಡೆದಿದೆ. ಜನವರಿ 20,2020ಕ್ಕೆ ಬಂದ ಪತ್ರದಲ್ಲಿ, ಕಂಪೆನಿಯ ಪೇಯ್ಡ್ ಅಪ್ ಬಂಡವಾಳದಲ್ಲಿ ಶೇಕಡಾ 100ಕ್ಕೆ ವಿದೇಶ ನೇರ ಹೂಡಿಕೆ ಮಿತಿಯನ್ನು ಹೆಚ್ಚಿಸಲು ಅನುಮತಿ ನೀಡಿದೆ" ಎಂದು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ದಾಖಲಿಸಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಏರ್ ಟೆಲ್ ನಲ್ಲಿ ಶೇ 100ರಷ್ಟು ವಿದೇಶ ನೇರ ಹೂಡಿಕೆಗೆ ಸರ್ಕಾರ ಸಮ್ಮತಿ

ಭಾರ್ತಿ ಏರ್ ಟೆಲ್ ನಿಂದ ಪರವಾನಗಿ ಶುಲ್ಕ 21,682 ಕೋಟಿ ಮತ್ತು ಸ್ಪೆಕ್ಟ್ರಂ ಶುಲ್ಕ 13,904.01 ಕೋಟಿ ರುಪಾಯಿ (ಟೆಲಿನಾರ್ ಹಾಗೂ ಟಾಟಾ ಟೆಲಿ ಸರ್ವೀಸಸ್ ಬಾಕಿ ಹೊರತುಪಡಿಸಿ) ಸರ್ಕಾರಕ್ಕೆ ಪಾವತಿಸಲು ಕೆಲ ದಿನ ಬಾಕಿ ಇರುವಂತೆಯೇ ಈ ಮಾಹಿತಿ ಹೊರಬಿದ್ದಿದೆ.

English summary

Government Approves 100 Percent FDI In Bharti Airtel

Telecom department of India approves 100% FDI in Bharti Airtel. Here is the complete details.
Story first published: Tuesday, January 21, 2020, 20:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X