ಕೊರೊನಾವನ್ನು ನಿಯಂತ್ರಣದಲ್ಲಿ ಇಡಲು ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದು ಆರ್ಥಿಕ ಬಿಕ್ಕಟ್ಟು ಉದ್ಭವಿಸುವಂತೆ ಮಾಡಿದೆ. ಆ ಹಿನ್ನೆಲೆಯಲ್ಲೇ ಈ ವರ್ಷ ಕೇಂದ್ರ ಸರ್ಕಾರವು 12 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಿದೆ. ಈ ಹಿಂದೆ ಅಂದಾಜು ಸಾಲದ ಪ್ರಮಾಣ 7.8 ಲಕ್ಷ ಕೋಟಿ ರುಪಾಯಿ ಇತ್ತು.
ಕೊರೊನಾದ ಕಾರಣಕ್ಕೆ ಸಾಲ ಪ್ರಮಾಣವನ್ನು ಪರಿಷ್ಕರಣೆ ಮಾಡಿದ್ದು, ಸರ್ಕಾರಿ ಬಾಂಡ್ ಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಲಿದೆ. ನಗದು ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ಅಗತ್ಯಗಳನ್ನು ಗಮನಿಸಿ, ಆರ್ ಬಿಐ ಜತೆ ಮಾತುಕತೆ ನಡೆಸಿದ ನಂತರವೇ ಈ ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ.
ಸರ್ಕಾರವು ಸಾಲವನ್ನು ಪಡೆದು, ಸಾರ್ವಜನಿಕ ಸೇವೆ ಮತ್ತು ಅನುಕೂಲಕ್ಕೆ ಖರ್ಚು ಮಾಡಲಿದೆ. ಇದು ಒಂದು ಬಗೆಯ ಸಾಲ. ಬಜೆಟ್ ದಾಖಲೆಯಲ್ಲಿ ಇದು ಕ್ಯಾಪಿಟಲ್ ರಸಿಟ್ ಅಡಿಯಲ್ಲಿ ಬರುತ್ತದೆ. ಸರ್ಕಾರದ ಕಾರ್ಯಕ್ರಮಗಳ ಖರ್ಚಿಗೆ ಆದಾಯದಲ್ಲಿ ಕೊರತೆ ಬರುವುದರಿಂದ ವಾರ್ಷಿಕ ಸಾಲದ ಕಾರ್ಯಕ್ರಮವನ್ನು ಘೋಷಣೆ ಮಾಡುತ್ತದೆ. ಆ ಮೂಲಕ ಖರ್ಚು ಮತ್ತು ವಿತ್ತೀಯ ಕೊರತೆ ಗುರಿಯನ್ನು ಸಂಭಾಳಿಸಲಾಗುತ್ತದೆ.

ಇನ್ನು ಈ ಮಧ್ಯೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಆರ್ ಬಿಐನಿಂದ ವ್ಯವಸ್ಥೆಯೊಳಗೆ ನಗದು ತರುವುದಕ್ಕೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಕೇಂದ್ರ ಸರ್ಕಾರವು ದೊಡ್ಡ ಮಟ್ಟದ ಆರ್ಥಿಕ ಪರಿಹಾರ ಪ್ಯಾಕೇಜ್ ಈಗಾಗಲೇ ಘೋಷಿಸಿದೆ. ಆ ನಂತರ ರಾಜ್ಯ ಸರ್ಕಾರಗಳು ಒಂದಾದ ಮೇಲೆ ಒಂದರಂತೆ ಪರಿಹಾರ ಪ್ಯಾಕೇಜ್, ಕಾನೂನು ತಿದ್ದುಪಡಿ ಹಾಗೂ ವಿನಾಯಿತಿಗಳನ್ನು ಘೋಷಿಸುತ್ತಿವೆ.
More From GoodReturns

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Silver Price Today: ಪಾತಾಳಕ್ಕಿಳಿದ ಬೆಳ್ಳಿ ದರ; ಬರೋಬ್ಬರಿ 5000 ರೂ. ಇಳಿಕೆ

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

PPF Withdrawal: PPF ಹಣವನ್ನು ಲಾಕ್-ಇನ್ ಮುನ್ನವೇ ಹಿಂಪಡೆಯಬಹುದೇ? ಇಲ್ಲಿದೆ ಸಂಪೂರ್ಣ ನಿಯಮಗಳು

LPG-Milk: ಎಲ್ಪಿಜಿ ಪೂರೈಕೆ ಕೊರತೆ; ಹಾಲು ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

IndiGo Price Hike: ವಿಮಾನ ಪ್ರಯಾಣಿಕರಿಗೆ ಶಾಕ್! ಇಂಡಿಗೋ ಪ್ರಯಾಣ ದರ ಮತ್ತಷ್ಟು ಹೆಚ್ಚಳ

FASTag Annual Pass: ಫಾಸ್ಟ್ಯಾಗ್ ಬಳಕೆದಾರರಿಗೆ ಶಾಕ್; ವಾರ್ಷಿಕ ಪಾಸ್ ದರ ಹೆಚ್ಚಳ!

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?



Click it and Unblock the Notifications