ಕೇಂದ್ರ ಹಣಕಾಸು ಸಚಿವಾಲಯವು ಜಿಪಿಎಫ್ ಅಥವಾ ಜನರಲ್ ಪ್ರಾವಿಡೆಂಟ್ ಫಂಡ್ ಬಡ್ಡಿದರವನ್ನು ಘೋಷಿಸಿದೆ. 2023ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಜಿಪಿಎಫ್ ಬಡ್ಡಿದರದಲ್ಲಿ ಕೇಂದ್ರ ಸರ್ಕಾರವು ಸ್ಥಿರತೆ ಕಾಯ್ದುಕೊಂಡಿದ್ದು ಪ್ರಸ್ತುತ ಬಡ್ಡಿದರ ಶೇಕಡ 7.1ರಷ್ಟಿದೆ.
ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಬಡ್ಡಿದರವು ಶೇಕಡ 7.1ರಷ್ಟೇ ಇರಲಿದೆ. ಜನವರಿ 1ರಿಂದ ಮಾರ್ಚ್ 31ರವರೆಗೆ ಈ ಬಡ್ಡಿದರವು ಅನ್ವಯವಾಗಲಿದೆ.
ಜಿಆರ್‌ಎಫ್ ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಲಭ್ಯವಿರುವ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಉದ್ಯೋಗಿಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು. ನಿವೃತ್ತಿ ಅವಧಿಯಲ್ಲಿ ಹೂಡಿಕೆಯ ಮೊತ್ತವನ್ನು ಬಡ್ಡಿದರದೊಂದಿಗೆ ನೀಡಲಾಗುತ್ತದೆ.

ಪ್ರತಿ ತ್ರೈಮಾಸಿಕವು ಸರ್ಕಾರವು ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತದೆ. 2022ರ ಡಿಸೆಂಬರ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ಜಿಪಿಎಫ್ ಬಡ್ಡಿದರವು ಶೇಕಡ 7.1ರಷ್ಟಿತ್ತು. ಪ್ರಸ್ತುತ ಅದೇ ಬಡ್ಡಿದರವು ಮುಂದುವರಿದಿದೆ. ಇನ್ನು ಈ ಬಡ್ಡಿದರವು ಸರ್ಕಾರದ ಬೇರೆ ಯೋಜನೆಗಳಿಗೂ ಅನ್ವಯವಾಗಲಿದೆ. ಆ ಯೋಜನೆಗಳ ಪಟ್ಟಿಯನ್ನು ನಾವು ಈ ಕೆಳಗೆ ನೀಡಿದ್ದೇವೆ.
ಶೇಕಡ 7.1ರಷ್ಟು ಬಡ್ಡಿದರವಿರುವ ಯೋಜನೆಗಳು
1. ಜನರಲ್ ಪ್ರಾವಿಡೆಂಟ್ ಫಂಡ್ (ಕೇಂದ್ರದ ಯೋಜನೆ)
2. ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್
3. ಆಲ್ ಇಂಡಿಯಾ ಸರ್ವಿಸ್ ಪ್ರಾವಿಡೆಂಟ್ ಫಂಡ್
4. ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್
5. ಜನರಲ್ ಪ್ರಾವಿಡೆಂಟ್ ಫಂಡ್ (ರಕ್ಷಣಾ ಸೇವೆ)
6. ಇಂಡಿಯನ್ ಆರ್ಡನಾನ್ಸ್ ಡಿಪಾರ್ಟ್‌ಮೆಂಟ್ ಪ್ರಾವಿಡೆಂಟ್ ಫಂಡ್
7. ಇಂಡಿಯನ್ ಆರ್ಡನಾನ್ಸ್ ಫಾಕ್ಟರೀಸ್ ವರ್ಕ್‌ಮೆನ್ಸ್ ಪ್ರಾವಿಡೆಂಟ್ ಫಂಡ್
8. ಇಂಡಿಯನ್ ನವಲ್ ಡಾಕೀಯಾರ್ಡ್ ವರ್ಕ್‌ಮೆನ್ಸ್ ಪ್ರಾವಿಡೆಂಟ್ ಫಂಡ್
9. ಡಿಫೆನ್ಸ್ ಸರ್ವಿಸ್ ಆಫಿಸರ್ಸ್ ಪ್ರಾವಿಡೆಂಟ್ ಫಂಡ್
10. ಆರ್ಮ್‌ಡ್ ಫೋರ್ಸಸ್ ಪರ್ಸನಲ್ ಪ್ರಾವಿಡೆಂಟ್
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications