For Quick Alerts
ALLOW NOTIFICATIONS  
For Daily Alerts

ವಿಳಂಬವಾಗಿ ಜಿಎಸ್‌ಟಿ ಕಟ್ಟುವ ವ್ಯಾಪಾರಸ್ಥರಿಗೆ ಸಿಹಿ ಸುದ್ದಿ

|

ನವದೆಹಲಿ, ಜೂನ್ 13: ವಿಳಂಬವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವ ವರ್ತಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

 

ವಿಳಂಬವಾಗಿ ಜಿಎಸ್‌ಟಿ ಪಾವತಿಸುತ್ತಿದ್ದ ವರ್ತಕರಿಗೆ ಈ ಮೊದಲು ಶೇ 18 ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಈಗ ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಅನೇಕ ವರ್ತಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಳಂಬವಾಗಿ ಜಿಎಸ್‌ಟಿ ಕಟ್ಟಿದರೆ ಶೇ 18 ರ ಬಡ್ಡಿಯನ್ನು ಅರ್ಧಕ್ಕೆ ಇಳಿಸಲಾಗಿದೆ.

 

ತಿನ್ನುವ ಪರೋಟ ಮೇಲೆ ಕೇಂದ್ರದ ಕಣ್ಣು; ಬಿತ್ತು ಶೇ 18 ರಷ್ಟು ಜಿಎಸ್‌ಟಿತಿನ್ನುವ ಪರೋಟ ಮೇಲೆ ಕೇಂದ್ರದ ಕಣ್ಣು; ಬಿತ್ತು ಶೇ 18 ರಷ್ಟು ಜಿಎಸ್‌ಟಿ

ಶುಕ್ರವಾರ ನಡೆದ ಕೇಂದ್ರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ನೆರವಿನ ಪ್ಯಾಕೇಜ್ ರೂಪದಲ್ಲಿ ಜಿಎಸ್‌ಟಿ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ. ಫೆಬ್ರವರಿ, ಮಾರ್ಚ್ ಏಪ್ರಿಲ್ ತಿಂಗಳಿನ ಜಿಎಸ್‌ಟಿ ಕಟ್ಟಲು ಆಗಸ್ಟ್‌ವರೆಗೆ ಸಮಯ ನೀಡಲಾಗಿದೆ.

ವಿಳಂಬವಾಗಿ ಜಿಎಸ್‌ಟಿ ಕಟ್ಟುವ ವ್ಯಾಪಾರಸ್ಥರಿಗೆ ಸಿಹಿ ಸುದ್ದಿ

ಇದರಿಂದ 5 ಕೋಟಿ ರುಪಾಯಿ ಒಳಗೆ ಜಿಎಸ್‌ಟಿ ಕಟ್ಟುವ ವಹಿವಾಟುದಾರರಿಗೆ ಇದು ಅನುಕೂಲ ಆಗಲಿದೆ. ಈಗಾಗಲೇ ಮೇ, ಜೂನ್ ಹಾಗೂ ಜುಲೈ ತಿಂಗಳ ಜಿಎಸ್‌ಟಿ ಯನ್ನು ಯಾವುದೇ ಬಡ್ಡಿ ಅಥವಾ ದಂಡವಿಲ್ಲದೇ ಕಟ್ಟಲು ಸೆಪ್ಟೆಂಬರ್ ವರೆಗೆ ಅವಧಿ ನೀಡಲಾಗಿದೆ.

English summary

GST Council Meeting Highlights: Govt Halves Interest Rate on Late Submission of Returns for Small Taxpayers

Central GST Council To Give Good News To Late GST Payrs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X