25 ದೊಡ್ಡ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಸರಕಾರದ ಮಾತುಕತೆ

ಟಾಟಾ , ರಿಲಯನ್ಸ್, ಬಿರ್ಲಾ, ಮಹೀಂದ್ರ, ಅದಾನೀಸ್, ಇನ್ಫೋಸಿಸ್ ಮತ್ತು ವಿಪ್ರೋಗಳಂತಹ ದೇಶದ 25 ದೊಡ್ಡ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ, ಸರಕಾರ, ಹೂಡಿಕೆ ಯೋಜನೆಯ ಬಗ್ಗೆ ಸಮಾಲೋಚನೆಗಳನ್ನು ಪ್ರಾರಂಭಿಸಿದೆ. ಬಿಡ್‌ನಲ್ಲಿ ಎದುರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸೆಲ್ (ಪಿಎಮ್‌ಸಿ) ಭಾಗವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಮಾರುತಿ ಸುಜುಕಿ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ಕಂಪನಿಗಳೊಂದಿಗೆ ಸಮಾಲೋಚನೆಗಳನ್ನು ಸಚಿವರು ನಡೆಸಿದ್ದಾರೆ. ಈ ವಿಚಾರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ತೀವ್ರ ಮುತುವರ್ಜಿ ವಹಿಸಿದ್ದಾರೆ.

25 ದೊಡ್ಡ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಸರಕಾರದ ಮಾತುಕತೆ

ಕಾರ್ಪೋರೇಟ್ ಕಂಪನಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು ಕೆಲವು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇದನ್ನು ಸಂಬಂಧಪಟ್ಟ ಸಚಿವಾಲಯಗಳು ಮತ್ತು ರಾಜ್ಯ ಸರಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಸಮಾಲೋಚನೆ ಪ್ರಕ್ರಿಯೆ ಕೆಲವು ವಾರಗಳ ಹಿಂದೆಯಷ್ಟೇ ಪ್ರಾರಂಭವಾಗಿದ್ದು, ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಸರಕಾರವು ಕೈಗೊಂಡಿದೆ. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಘೋಷಣೆಯಾಗಿರುವ ಹೂಡಿಕೆಗಳು ಕಾರಣಾಂತರದಿಂದ ಕೈಗೆತ್ತಿಕೊಂಡಿಲ್ಲ.

ವಿವಿಧ ಕಂಪೆನಿಗಳ ಹೂಡಿಕೆಯಿಂದ ಕಾರ್ಪೋರೇಟ್ ತೆರಿಗೆಯನ್ನು ಕಡಿಮೆ ಮಾಡಬಹುದೆಂಬ ಉದ್ದೇಶವನ್ನು ಸರಕಾರವು ಹೊಂದಿದೆ. ಇದರಲ್ಲಿ, ವಿಶೇಷವಾಗಿ ಹೊಸ ಉತ್ಪಾದನಾ ಘಟಕಗಳು ಈಗಿನಿಂದ ಮೂರು ವರ್ಷಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಲ್ಲಿ ಕೇವಲ 15% ತೆರಿಗೆಯನ್ನು ಪಾವತಿ ಮಾಡಿದರೆ ಸಾಕು.

ಇದಲ್ಲದೇ, ಅಲ್ಪಾವಧಿಯ ವಿಸ್ತರಣೆ ಯೋಜನೆಗಳೊಂದಿಗೆ ಐದು ವರ್ಷಗಳ ಹೂಡಿಕೆ ಯೋಜನೆಯನ್ನು ಹಂಚಿಕೊಳ್ಳಲು ವ್ಯಾಪಾರ ಸಂಸ್ಥೆಗಳನ್ನು ಕೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಂಬರುವ ವಾರಗಳಲ್ಲಿ ಗೋಯಲ್ ಅವರು ವೇದಾಂತ ಗ್ರೂಪ್‌ನ ಅನಿಲ್ ಅಗರ್ವಾಲ್, ಭಾರ್ತಿ ಗ್ರೂಪ್‌ನ ಸುನಿಲ್ ಮಿತ್ತಲ್, ಜೆಎಸ್‌ಡಬ್ಲ್ಯೂನ ಸಜ್ಜನ್ ಜಿಂದಾಲ್, ಸನ್ ಫಾರ್ಮಾದ ದಿಲೀಪ್ ಸಂಘ್ವಿ, ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪರೇಖ್, ಐಸಿಐಸಿಐ ಬ್ಯಾಂಕಿನ ಸಂದೀಪ್ ಬಕ್ಷಿ, ಬ್ಯಾಂಕರ್ ಉದಯ್ ಕೊಟಾಕ್, ಬಜಾಜ್ ಗುಂಪಿನ ಪ್ರತಿನಿಧಿಗಳು ಮತ್ತು ಎಲ್ & ಟಿ ಎಸ್ ಎಸ್ ಸುಬ್ರಹ್ಮಣ್ಯನ್. ಇವರುಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಇದಲ್ಲದೆ, ಚಿಲ್ಲರೆ ವ್ಯಾಪಾರ, ವಾಯುಯಾನ, ಜವಳಿ, ರಸ್ತೆಗಳು ಮತ್ತು ರೈಲ್ವೆಯಂತಹ ಉದ್ಯಮ ಗುಂಪುಗಳೊಂದಿಗೆ ಕೆಲವು ಸಂವಾದಗಳನ್ನು ಸಹ ಆಯೋಜಿಸಲಾಗಿದೆ. ತಮ್ಮ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ದೇಶದ ಉನ್ನತ ವಕೀಲರೊಂದಿಗೆ ಪ್ರತ್ಯೇಕ ಸಮಾಲೋಚನೆಗಳನ್ನು ಕೂಡಾ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+