ಬೆಂಗಳೂರು, ಜನವರಿ 13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆರ್ಥಿಕ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ ಗ್ರಾಹಕರ ಜತೆಗಿನ ಸಭೆಯು ಸೋಮವಾರ ನಡೆದಿದ್ದು, ಆ ಸಭೆಯಲ್ಲಿ ಬ್ಯಾಂಕ್ ನ ಪರವಾಗಿ ಮ್ಯಾನೇಜರ್ ಮುರಳೀಧರ್ ಆರಿಕಾಡಿ ಗ್ರಾಹಕರಿಗೆ ಹೇಳಿದ್ದೇನು ಎಂಬ ವಿವರಗಳು ಇಲ್ಲಿವೆ.
* ನಮ್ಮ ಬ್ಯಾಂಕ್ ಈಗ ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಸಹಕಾರ ಬ್ಯಾಂಕ್ ಗಳ ವ್ಯವಹಾರ ಸುಧಾರಣೆ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮ ತೆಗೆದುಕೊಂಡಿದೆ.
* ಬ್ಯಾಂಕ್ ನಲ್ಲಿ ಜನರು ಹೂಡಿಕೆ ಮಾಡಿರುವ ಹಣದ ಪೈಕಿ ಶೇಕಡಾ ಐವತ್ತೆರಡು ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲ ನೀಡಿದ್ದೇವೆ. ಉಳಿದ ನಲವತ್ತೆಂಟು ಪರ್ಸೆಂಟ್ ನಮ್ಮ ಬಳಿಯೇ ಇದೆ.
* ಈಗಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಹೂಡಿಕೆದಾರರ ಹಣವನ್ನು ಹಿಂತಿರುಗಿಸುವುದು ನಮ್ಮ ಉದ್ದೇಶ. ಯಾವುದೇ ಹಣಕ್ಕೆ ತೊಂದರೆಯಾಗುವುದಿಲ್ಲ.
* ಮಂದಗತಿಯ ಮಾರುಕಟ್ಟೆಯಿಂದಾಗಿ (ಮಾರ್ಕೆಟ್ ಸ್ಲೋಡೌನ್) ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ್ದೇವೆ. ಕೆಲವು ಗ್ರಾಹಕರಿಗೆ ಇಪ್ಪತ್ತು ವರ್ಷದ ಅವಧಿಗೆ ಸಾಲ ನೀಡಿದ್ದೇವೆ. ಅವರು ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ.

* ಸಾವಿರದ ಇನ್ನೂರಾ ಎಂಬತ್ತು ಕೋಟಿಯಷ್ಟು ಬ್ಯಾಂಕ್ ಸೆಕ್ಯೂರಿಟಿ ಇದೆ. ಸಾವಿರದ ಆರುನೂರಾ ಎಂಬತ್ತು ಕೋಟಿ ಸಾಲ ಇದೆ.
* ಯಾವುದೇ ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೊಟ್ಟ ಸಾಲಕ್ಕೆ ಪೂರ್ಣ ಭದ್ರತೆ ಇದೆ. ಯಾರೂ ಹೆದರಬೇಡಿ.
* ಆರ್ ಬಿಐ ನೋಟಿಸ್ ನೀಡಿದ್ದು ಶುಕ್ರವಾರ. ಆ ನಂತರ ಶನಿವಾರ- ಭಾನುವಾರ ರಜಾ ಇದ್ದುದರಿಂದ ಈ ಗೊಂದಲ ಆಗಿದೆ. ಒಂದೇ ದಿನದಲ್ಲಿ ಆರು ಕೋಟಿ ಕ್ಯಾಶ್ ವಿಥ್ ಡ್ರಾ ಮಾಡಿಕೊಟ್ಟಿದ್ದೇವೆ.
* ಕೊಟ್ಟ ಸಾಲಕ್ಕೆ ಸಂಪೂರ್ಣ ಭದ್ರತೆ ಇದೆ. ಯಾವುದೇ ಅವ್ಯವಹಾರ ಆಗಿಲ್ಲ. ಹೆದರುವ ಅಗತ್ಯ ಇಲ್ಲ.
* ಹಣವನ್ನು ಯಾರೂ ಹಿಂಪಡೆಯಲು ಹೋಗಬೇಡಿ, ನವೀಕರಿಸಿ.
* ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ನಲವತ್ತೆರಡು ದಿನಗಳ ಸಮಯ ನೀಡಲಾಗಿದೆ.
* ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಸಭೆಗೆ ಬಾರದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ: ಬ್ಯಾಂಕ್ ಸಲಹೆಗಾರ ಮಯ್ಯ ಹೇಳಿಕೆ
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications