For Quick Alerts
ALLOW NOTIFICATIONS  
For Daily Alerts

ಹಂದಿಜ್ವರದ ಭೀತಿ; ಮನೆಯಿಂದಲೇ ಕೆಲಸ ಮಾಡುವಂತೆ SAP ಸೂಚನೆ

|

ಜರ್ಮನ್ ತಂತ್ರಜ್ಞಾನ ಕಂಪೆನಿ SAP ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ಫೆಬ್ರವರಿ 20ರಿಂದ 28ನೇ ತಾರೀಕು ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿದೆ. ಉತ್ತರ ಬೆಂಗಳೂರಿನ ಎಕೋವರ್ಲ್ಡ್ ಕಚೇರಿಯಲ್ಲಿ H1N1 (ಹಂದಿಜ್ವರ) ಪ್ರಕರಣಗಳು ಕೆಲವು ಕಂಡುಬಂದಿದ್ದರಿಂದ ಈ ಸಲಹೆ ನೀಡಲಾಗಿದೆ.

"ನಮ್ಮ ಸಿಬ್ಬಂದಿಯ ಆರೋಗ್ಯ ನಮಗೆ ಆದ್ಯತೆ. ಇದು ತುಂಬ ಗಂಭೀರ ವಿಚಾರವಾದ್ದರಿಂದ H1N1 ವೈರಾಣು ಹರಡದಂತೆ ತಡೆಯಲು ಏನು ಮಾಡಬೇಕು ಎಂದು ಮಾಹಿತಿ ಒದಗಿಸುತ್ತಿದ್ದೇವೆ" ಎಂದು SAP ತನ್ನ ಸಿಬ್ಬಂದಿಗೆ ಕಳುಹಿಸಿರುವ ಆಂತರಿಕ ಮೇಲ್ ನಲ್ಲಿ ತಿಳಿಸಿದೆ. ಇನ್ನು ಮುಂದಿನ ಸೂಚನೆ ನೀಡುವ ತನಕ ಬೆಂಗಳೂರು, ಮುಂಬೈ ಹಾಗೂ ಗುರುಗ್ರಾಮದಲ್ಲಿ ಇರುವ ಕಂಪೆನಿಯ ಕಚೇರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿದೆ.

ಒಂದು ವೇಳೆ ನೀವು ಅಥವಾ ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಾದರೂ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ಲಕ್ಷಣ ಕಂಡುಬರುತ್ತಿದ್ದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ" ಎಂದು ಕಂಪೆನಿ ಹೇಳಿದೆ.

ಹಂದಿಜ್ವರದ ಭೀತಿ; ಮನೆಯಿಂದಲೇ ಕೆಲಸ ಮಾಡುವಂತೆ SAP ಸೂಚನೆ

ಅಂದ ಹಾಗೆ ಕೊರೊನಾ ವೈರಾಣು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಈ ವೇಳೆಯಲ್ಲಿ ವ್ಯಾಪಾರ- ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಫೆಬ್ರವರಿ 24ರಿಂದ 28ರ ತನಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಬೇಕಿದ್ದ ಜಾಗತಿಕ ಸಮಾವೇಶವನ್ನು ಈಚೆಗೆ ಐಬಿಎಂನಿಂದ ರದ್ದುಪಡಿಸಲಾಗಿದೆ.

English summary

H1N1 Positive; SAP Advised To Work From Home To Employees

After few cases of H1N1 positive, SAP advised employees to work from home in Bengaluru.
Story first published: Friday, February 21, 2020, 10:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X