ಇನ್ನೂ ಟ್ರಾಫಿಕ್ ಸಿಗ್ನಲ್ ಕೆಂಪು ಬಣ್ಣವೇ ತೋರಿಸುತ್ತಿರುತ್ತದೆ ಆಗಲೇ 'ಹಾರ್ನ್' ಕೇಳಲು ಆರಂಭವಾಗುತ್ತದೆ. ಅದ್ಯಾವ ಪರಿ ರೇಜಿಗೆ ಆಗುತ್ತದೆ ಅಂದರೆ, ಅದೇ ಕಾರಣಕ್ಕೆ ಜಗಳ ಆಗುವುದನ್ನೂ ನೀವು ನೋಡಿರಬಹುದು. ಮುಂಬೈ ಪೊಲೀಸರು ಈ 'ಹಾರ್ನ್' ಮಾರಿಗೆ ಒಂದು ಔಷಧ ಕಂಡುಹಿಡಿದಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಡಿಯೋ ಕೂಡ ಬಿಡುಗಡೆ ಆಗಿದೆ.
ಅಂದ ಹಾಗೆ ವಿಶ್ವದ ಅತ್ಯಂತ ಸಂಚಾರ ದಟ್ಟಣೆ ನಗರದಲ್ಲಿ ಮುಂಬೈ ಕೂಡ ಒಂದು. ವಿಪರೀತ ಹಾರ್ನ್ ಮಾಡುವ ಪ್ರವೃತ್ತಿಯಿಂದ ಅಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಕಾರಣಕ್ಕೆ ಒಂದು ಕಡೆ ಟ್ರಾಫಿಕ್ ಸಿಗ್ನಲ್ ನಲ್ಲಿ ಡೆಸಿಬಲ್ ಮೀಟರ್ ಅಳವಡಿಸಿದ್ದಾರೆ (ಶಬ್ದದ ಪ್ರಮಾಣವನ್ನು ಅಳೆಯುವ ಸಾಧನ).

ವಿಡಿಯೋದಲ್ಲಿ ತೋರಿಸುವ ಪ್ರಕಾರ, 85dbಗಿಂತ ಡೆಸಿಬಲ್ ಮಟ್ಟ ಹೆಚ್ಚಾದರೆ, ಅಂದರೆ ಹಾರ್ನ್ ಮಾಡುವ ಮೂಲಕ ಆ ಪ್ರಮಾಣದ ಶಬ್ದಕ್ಕೆ ಕಾರಣರಾದರೆ ಸಿಗ್ನಲ್ ಮತ್ತೆ ಮೊದಲಿಂದ ಆರಂಭವಾಗುತ್ತದೆ. ಮೊದಲ ಸೆಕೆಂಡ್ ನಿಂದ ಶುರುವಾಗುತ್ತದೆ. ರೆಡ್ ಸಿಗ್ನಲ್ ನೋಡುತ್ತಾ ಮತ್ತೂ ಕೆಲ ಸಮಯ ನಿಲ್ಲಬೇಕಾಗುತ್ತದೆ.
"ನೀವು ಇನ್ನಷ್ಟು ಸಮಯ ಕಾಯುತ್ತೀರಿ ಅನ್ನೋದಾದರೆ ಆರಾಮವಾಗಿ ಹಾರ್ನ್ ಮಾಡಿ" ಎಂಬ ಸಂದೇಶದೊಂದಿಗೆ ವಿಡಿಯೋ ಮುಗಿಯುತ್ತದೆ. ಈ ವಿಡಿಯೋಗೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದು, ಡೆಸಿಬಲ್ ಮೀಟರ್ ಅಳವಡಿಸುವುದು ಅತ್ಯುತ್ತಮ ಆಲೋಚನೆ. ನಾವು ಪ್ರಯತ್ನಿಸುತ್ತೇವೆ" ಎಂದಿದ್ದಾರೆ. ತೆಲಂಗಾಣದ ಸಚಿವರಿಂದಲೂ ಮುಂಬೈ ಪೊಲೀಸರ ಹೊಸ ಆಲೋಚನೆ ಮೆಚ್ಚುಗೆ ವ್ಯಕ್ತವಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications