2ನೇ ವಿಮಾನ ನಿಲ್ದಾಣಕ್ಕೆ( Bengaluru 2nd Airport) ಸ್ಥಳ ಆಯ್ಕೆಯ ಪ್ರಸ್ತಾವನೆ ಈಗಾಗಲೇ ಮೋದಿ ಅಂಗಳವನ್ನು ತಲುಪಿದೆ. ಇಲ್ಲಿ ಸ್ಥಳ ಆಯ್ಕೆ ಮಾಡುವಷ್ಟರಲ್ಲೇ ಹೊಸೂರು ವಿಮಾನ ನಿಲ್ದಾಣದ (Hosur airport) ಎರಡು ಸ್ಥಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೆಂಗಳೂರು ಹಾಗೂ ಕರ್ನಾಟಕಕ್ಕೆ ಟಕ್ಕರ್ ಕೊಡುವ ರೀತಿಯಲ್ಲಿ ತಮಿಳುನಾಡು ಸರ್ಕಾರವು ತಮಿಳುನಾಡಿನ ಹೊಸೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ವಿಮಾನ ನಿಲ್ದಾಣದ ಕುರಿತು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಜಟಾಪಟಿ ಶುರುವಾಗಿದೆ.
ಹೌದು, ಈ ಹಿಂದೆ ಬೆಂಗಳೂರಿನ ಪಕ್ಕದಲ್ಲೇ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೊಸೂರಿನಲ್ಲಿ 2,000 ಎಕರೆ ವಿಸ್ತಾರ ಪ್ರದೇಶದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಣೆಯನ್ನು ಸಹ ಮಾಡಿದ್ದರು.ತದನಂತರ ವಿಮಾನ ನಿಲ್ದಾಣ ಮಾಡಲು ಸ್ಥಳ ನಿಗದಿಯನ್ನು ಶಾಟ್ಟ್ ಲಿಸ್ಟ್ ಸಹ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ವಿಮಾನ ನಿಲ್ದಾಣದ ವಿಚಾರದಲ್ಲಿ ತಮಿಳುನಾಡು ಕರ್ನಾಟಕ್ಕಿಂತ ಮುಂಚಿತವಾಗಿ ಇಂದು ಹೆಜ್ಜೆ ಮುಂದಿಟ್ಟು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2 ಸ್ಥಳ ಸೂಕ್ತ ಅಂತ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿದೆ.

ಕರ್ನಾಟಕ ಸರ್ಕಾರವು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengalur Airport) ದಟ್ಟಣೆ ತಗ್ಗಿಸಲು 2ನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿತ್ತು. ಇತ್ತ ತಮಿಳುನಾಡು ಸರ್ಕಾರ ಕೂಡ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಮುಂದಾಗಿತ್ತು.ಸದ್ಯ ಕರ್ನಾಟಕ ಸರ್ಕಾರವು ಸ್ಥಳ ಹುಡುಕಾಟ ನಡೆಸಿ ಮೂರು ಸ್ಥಳಗಳನ್ನು ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದು ಆದ ನಂತರ ತಮಿಳು ನಾಡು ಕರ್ನಾಟ ಸರ್ಕಾರಕ್ಕಿಂತ ಮೊದಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಹೊಸೂರು ಬಳಿಯ 2 ಸ್ಥಳ ಸೂಕ್ತ ಎಂಬ ವರದಿಯನ್ನು ಪಡೆದುಕೊಂಡಿದೆ ಎಲ್ಲಿ ಮೊದಲು ವಿಮಾಣ ನಿಲ್ದಾಣವಾಗಬಹುದು ಎಂಬುವುದನ್ನು ಕಾದುನೋಡಬೇಕಿದೆ.
ಹೊಸೂರು ವಿಮಾನ ನಿಲ್ದಾಣಕ್ಕೆ ಆಯ್ಕೆಯಾದ ಸ್ಥಳಗಳ ವಿವರ
ಹೊಸೂರು ವಿಮಾನ ನಿಲ್ದಾಣಕ್ಕೆ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಮಾಡಿದ ಮನವಿಯ ಆಧಾರದ ಮೇಲೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಸಮೀಕ್ಷೆ ನಡೆಸಿದ ಐದು ಸ್ಥಳಗಳಿಂದ ಈ ಸೈಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಎರಡು ಶಾಟ್ ಲಿಸ್ಟ್ ಮಾಡಿದ ಸ್ಥಳಗಳ ವಿವರವಾದ ಅಧ್ಯಯನವನ್ನು ಮಾಡಿ ಎರಡು ಸ್ಥಳಗಳನ್ನು ಅಂತಿಮ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಿತ್ತು.ಅದರಲ್ಲಿ ಒಂದು ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (TAAL) ವಿಮಾನ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಮತ್ತೊಂದು ಉಲಗಂ ಬಳಿ (ಹೊಸೂರಿನ ಪೂರ್ವ ಮತ್ತು ಶೂಲಗಿರಿಯ ಉತ್ತರ) ಹೊಸೂರಿನಿಂದ ಸುಮಾರು 15.5 ಕಿ.ಮೀ ದೂರದಲ್ಲಿದೆ. ಇನ್ನೋಂದು ಎಲೆಕ್ಟ್ರಾನಿಕ್ ಸಿಟಿ ಹಾಗೂ ಸರ್ಜಾಪುರ ಎರಡಕ್ಕೂ ಉಲಗಂ ಸಮೀಪದಲ್ಲಿಯೇ ಇದೆ. ಎರಡರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ತಮಿಳುನಾಡಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ಬಿಐಎಎಲ್ ವಿಮಾನ ನಿಲ್ದಾಣ 2030 ರವರೆಗೆ 150 ಕಿ.ಮೀ ಒಳಗೆ ಯಾವುದೇ ವಿಮಾನ ನಿಲ್ದಾಣದ ಯಾವುದೇ ಸೌಲಭ್ಯ ಬರಬಾರದು ಎಂಬ ರಿಯಾಯಿತಿ ಒಪ್ಪಂದಕ್ಕೆ ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿರುವುದರಿಂದ ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಿಐಎಎಲ್‌ನಿಂದ ಹಸಿರು ನಿಶಾನೆ ಅಗತ್ಯವಾಗಿದೆ. ಸದ್ಯಕ್ಕೆ ಒಂದೇ ರನ್ ಹೊಂದಿರುವ ಹೊಸ ವಿಮಾನ ನಿಲ್ದಾಣವು 2,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಫೆಬ್ರವರಿಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು, ತಮಿಳುನಾಡು ಸರ್ಕಾರ, ಬಿಐಎಎಲ್ ಮತ್ತು ಕೇಂದ್ರ ಸರ್ಕಾರವು ಹೊಸೂರು ವಿಮಾನ ನಿಲ್ದಾಣದ ವಿಷಯದ ಬಗ್ಗೆ ಕುಳಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಪ್ರಸ್ತಾಪ ಕೂಡ ಮಾಡಿದ್ದರು.
ತಮಿಳುನಾಡು ಸರ್ಕಾರವು 2024ರ ಅಕ್ಟೋಬರ್‌ನಲ್ಲಿ ಅಧ್ಯಯನಕ್ಕಾಗಿ ಐದು ಸ್ಥಳಗಳನ್ನು ಆಯ್ಕೆ ಮಾಡಿತ್ತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಸಾಧ್ಯಾಸಾಧ್ಯತಾ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಎರಡೂ ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿವೆ ಎಂದು ತಿಳಿದುಬಂದಿದೆ.


Click it and Unblock the Notifications