ಸಾಲ ಮಾಡೋದು ದೊಡ್ಡ ವಿಷಯವೇನಲ್ಲ. ಈಗಂತೂ ಸಾಲ ನೀಡಲು ಬ್ಯಾಂಕ್‌ಗಳು ತುದಿಗಾಲಲ್ಲಿ ನಿಂತಿರುತ್ತವೆ. ಆದ್ರೆ ಸಾಲ ತೆಗೆದುಕೊಳ್ಳೋ ಮುನ್ನ ಹಾಗೂ ತೀರಿಸೋ ವಿಚಾರದಲ್ಲಿ ಒಂದಿಷ್ಟು ಯೋಜನೆ ರೂಪಿಸಿಕೊಳ್ಳೋದು ಅಗತ್ಯ. ಅಷ್ಟಿಲ್ಲದೆ ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು ಎಂದು ಹಿರಿಯರು ಹೇಳಿಲ್ಲ.
ಈ ಮಾತನ್ನು ಖರ್ಚು ಮಾಡೋವಾಗ ಮಾತ್ರವಲ್ಲ, ಸಾಲ ಮಾಡೋವಾಗಲೂ ನೆನಪಿಟ್ಟುಕೊಳ್ಳಬೇಕು. ಸುಖಾಸುಮ್ಮನೆ ಸಾಲ ಮಾಡಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಸಾಲ ಮಾಡಲೇಬೇಕಾಗುತ್ತೆ.ಉದಾಹರಣೆಗೆ ಮನೆ ಖರೀದಿಸೋವಾಗ,ಕಾರು ಕೊಳ್ಳೋವಾಗ.ಇಂಥ ಸಂದರ್ಭಗಳಲ್ಲಿ ಸಾಲವನ್ನು ಹೊರೆಯಾಗದಂತೆ ನಿರ್ವಹಿಸಲು ಯೋಜನೆ ಹಾಕಿಕೊಳ್ಳೋದು ಅಗತ್ಯವಾಗಿದೆ.

ಸಾಲವನ್ನು ಹೊರೆಯಾಗದಂತೆ ಯೋಚಿಸಿ ಕೈಗೊಳ್ಳಲಿದ್ದರೆ ಜನರು ಮನೆ, ಆಸ್ತಿಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗಬಹುದು. ಅನೇಕರ ಸಾವಿಗೆ ಕಾರಣವೂ ಆಗಬಹುದು.
ದುಡಿದ ಹಣದಿಂದ ಬಂದ ಲಾಭದಿಂದ ಖರೀದಿಸಿದರೆ ಅದು ನಿಮಗೆ ಒಳಿತಾಗಬಹುದು. ಆದರೆ ಅದೇ ಬ್ಯಾಂಕ್ ಸಾಲದಿಂದ ಲೆಕ್ಕಾಚಾರ ಮಾಡದೇ ಖರೀದಿಸುವುದು , ಮರುಪಾವತಿಸಲಾಗದೆ ಆಸ್ತಿ ಹರಾಜಿಗೂ ಎಡೆ ಮಾಡಿಕೊಡಬಹುದು.
ಇದು ವ್ಯಕ್ತಿಗೆ ಹೇಗೆ ಅನುಗುಣವಾಗಿದೆಯೋ , ಅದೇ ರೀತಿ ಬ್ಯಾಂಕ್, ರಾಷ್ಟ್ರಗಳಿಗೂ ಅನ್ವಯವಾಗುತ್ತದೆ. ಬ್ಯಾಂಕ್‌ಗಳು ಹೇಗೆ ಬೇಗೆ ಹಾಗೆ ಸಾಲ ನೀಡಿದರೆ ಎನ್‌ಪಿಎ ಹೆಚ್ಚಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಿಸುತ್ತವೆ. ಹಾಗೆಯೇ ರಾಷ್ಟ್ರಗಳೂ ಸಾಲ ಹೆಚ್ಚಾದರೆ ಆರ್ಥಿಕತೆ ಮೇಲೆ ಪರಿಣಾಮ ಬೀರುವುದಲ್ಲದೆ ಸಾಲ ಪಡೆದ ರಾಷ್ಟ್ರದ ಗುಲಾಮಗಿರಿಗೆ ಬಲಿಯಾಗುತ್ತದೆ.
ದೇಶದ ಸಾಲದ ಪ್ರಮಾಣವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 60ಕ್ಕಿಂತಲೂ ಕಡಿಮೆ ಇರಬೇಕು. ಆದರೆ ಅನೇಕ ರಾಷ್ಟ್ರಗಳಲ್ಲಿ ಇದರ ಪ್ರಮಾಣವು ಅಂದಾಜಿಗಿಂತ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಬಡ್ಡಿಯನ್ನು ತೆರಬೇಕಾಗುತ್ತದೆ.
ಸಾಲವು ಸಕಾರಾತ್ಮಕವಾಗಿಯು ಕಾರ್ಯ ನಿರ್ವಹಿಸುತ್ತದೆ. ರಸ್ತೆ, ಶಾಲೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಭವಿಷ್ಯದ ಯೋಜನೆಗಳ ಹೂಡಿಕೆಗೆ ಬಳಸುವುದರಿಂದ ಉದ್ಯೋಗ ಸೃಷ್ಟಿಯಾಗಿ ತಿರುಗಿ ಹಣ ಸರ್ಕಾರದ ಬೊಕ್ಕಸಕ್ಕೆ ತಲುಪುತ್ತದೆ.
ಆದರೆ ಕಳೆದು ಒಂದು ಶತಮಾತನದಲ್ಲಿ ಸಾಲದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಜಗತ್ತಿನ ಒಟ್ಟು ಜಿಡಿಪಿ ಪ್ರಮಾಣದ ಮೂರು ಪಟ್ಟು ಸಾಲವೇ ತುಂಬಿದೆ. ಹೀಗಿರುವಾಗ ಇದನ್ನು ಹಿಂದಿರುಗಿಸುವವರು ಯಾರು? ಎಂಬುದು ಪ್ರಶ್ನೆಯಾಗಿದೆ.


Click it and Unblock the Notifications