ಬೆಲೆ ಏರಿಕೆ ತಡೆಯಲು ಬಡ್ಡಿ ದರ ಏರಿಸಬೇಕೇ? ಆರ್‌ಬಿಐ ಸಮಿತಿ ಸದಸ್ಯೆ ಹೇಳುವುದಿದು

ನವದೆಹಲಿ, ಅ. 20: ಬೆಲೆ ಏರಿಕೆಯಾಗುವುದನ್ನು ತಡೆಯಲು ಸತತವಾಗಿ ಬಡ್ಡಿ ದರಗಳನ್ನು ಏರಿಸುವುದು ಅಗತ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸದಸ್ಯೆ ಆಶಿಮಾ ಗೋಯಲ್ ಹೇಳಿದ್ದಾರೆ. ಅವರ ಪ್ರಕಾರ ಹಣ ಹಣದುಬ್ಬರ ಮುಂದಿನ ವರ್ಷದಲ್ಲಿ ಶೇ. 6ಕ್ಕಿಂತ ಕಡಿಮೆಗೆ ಇಳಿಯುವ ಸಾಧ್ಯತೆ ಇದೆ.

ಸದ್ಯ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧಾರಿತ ಹಣದುಬ್ಬರದ ವಾರ್ಷಿಕ ದರ ಶೇ. 10.7 ಇದೆ. ಇನ್ನು, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರ ಶೇ. 7.41 ಇದೆ.

ಆಶಿಮಾ ಗೋಯಲ್ ಅವರು ಸಿಪಿಐ ಆಧಾರಿತ ಹಣದುಬ್ಬರದ ಬಗ್ಗೆ ಮಾತನಾಡಿದ್ದು. ಈ ದರ ಶೇ. 6 ಅನ್ನು ದಾಟಿ ಹೋಗಬಾರದು ಎಂಬುದು ಆರ್‌ಬಿಐ ಇಟ್ಟಿದ್ದ ಗುರಿ. ಆದರೆ, ಹಲವು ತಿಂಗಳ ಕಾಲ ಸತತವಾಗಿ ಭಾರತದಲ್ಲಿ ಹಣದುಬ್ಬರ ಈ ಮಿತಿಯನ್ನು ಮೀರಿ ಹೋಗಿದೆ. ಆಹಾರ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ಬಹು ಕಾರಣಗಳಿಂದ ಹಣದುಬ್ಬರ ಹೆಚ್ಚಾಗಿದೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇಡೀ ದೇಶ ಸ್ತಬ್ಧಗೊಂಡು, ಆರ್ಥಿಕವಾಗಿ ಜರ್ಝರಿತವಾದಾಗ, ಪುಷ್ಟಿ ನೀಡಲು ಆರ್‌ಬಿಐ ಸತತವಾಗಿ ಬಡ್ಡಿದರಗಳನ್ನು ಇಳಿಸುತ್ತಾ ಬಂದಿತ್ತು. ಆರ್ಥಿಕ ಚೇತರಿಕೆ ಆಗುತ್ತಿರುವಂತೆಯೇ ಆರ್‌ಬಿಐ ಮತ್ತೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ಮಾಡಿತು. ಹಣದುಬ್ಬರ ಏರುತ್ತಿರುವಂತೆಯೇ ಆರ್‌ಬಿಐ ಸತತವಾಗಿ ಬಡ್ಡಿ ದರ ಹೆಚ್ಚಿಸುತ್ತಾ ಬಂದಿದೆ. ಈಗ ಸತತ ಮೂರು ಬಾರಿ ದರ ಹೆಚ್ಚಿಸಿದೆ.

ಬಡ್ಡಿ ದರ ಸಮರ್ಥನೆ

ಬಡ್ಡಿ ದರ ಸಮರ್ಥನೆ

ಮಾನಿಟರಿ ಪಾಲಿಸಿ ಕಮಿಟಿ ಸದಸ್ಯೆ ಆಶಿಮಾ ಗೋಯಲ್ ಅವರು ಆರ್‌ಬಿಐನಿಂದ ಸತತವಾಗಿ ಬಡ್ಡಿ ದರ ಏರಿಕೆ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆರ್ಥಿಕ ಪ್ರಗತಿಗೆ ಧಕ್ಕೆ ತರುವ ಮಟ್ಟಕ್ಕೆ ನೈಜ ಬಡ್ಡಿ ದರ (ರಿಯಲ್ ಇಂಟರೆಸ್ಟ್ ರೇಟ್) ಹೆಚ್ಚಿಲ್ಲ ಎಂದು ಅವರು ಹೇಳಿದ್ದಾರೆ. ಅಂದರೆ ಆರ್‌ಬಿಐ ಬಡ್ಡಿ ದರಗಳನ್ನು ಇನ್ನಷ್ಟು ಏರಿಸಲು ಅವಕಾಶ ಇದೆ ಎಂಬುದು ಅವರ ವಾದ.

ರಿಯಲ್ ಇಂಟರೆಸ್ಟ್ ರೇಟ್ ಎಂಬುದು ಹಣದುಬ್ಬರದ ಅಂಶವನ್ನೂ ಸೇರಿಸಿ ಲೆಕ್ಕ ಮಾಡುವ ಬಡ್ಡಿ ದರ. ಒಂದು ಸರಕನ್ನು ಕೊಳ್ಳುವವ ತೆರವು ನಿಜವಾದ ಬೆಲೆ ಹಾಗೂ ಅದನ್ನು ಮಾರುವವನಿಗೆ ಸಿಗುವ ನಿಜವಾದ ಲಾಭ, ಇದರ ಆಧಾರದ ಮೇಲೆ ನೈಜ ಬಡ್ಡಿ ದರ ಇದೆ.

"ನೈಜ ದರಗಳು ಹೆಚ್ಚಿದಾಗ ಆರ್ಥಿಕತೆಯಲ್ಲಿ ಬೇಡಿಕೆ ಕಡಿಮೆ ಆಗುತ್ತದೆ" ಎನ್ನುವ ಆಶಿಮಾ ಗೋಯಲ್, "ಅಂತಾರಾಷ್ಟ್ರೀಯ ವಸ್ತುಗಳ ಬೆಲೆ ಕಡಿಮೆ ಆಗುತ್ತದೆ. ಸರಬರಾಜು ಸರಪಳಿಯ ಅಡಚಣೆಗಳು ಕಡಿಮೆ ಆಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನಾ ವೆಚ್ಚ

ಉತ್ಪಾದನಾ ವೆಚ್ಚ

"ಭಾರತ ಸರ್ಕಾರ ಸಪ್ಲೈ ಸೈಡ್ ಹಣದುಬ್ಬರವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುತ್ತಿದೆ. ಸದ್ಯದ ಅಂದಾಜುಗಳ ಪ್ರಕಾರ ಮುಂದಿನ ವರ್ಷ ಹಣದುಬ್ಬರ ಶೇ. 6ಕ್ಕಿಂತ ಕಡಿಮೆಗೆ ಇಳಿಯುವ ಸಾಧ್ಯತೆ ಇದೆ" ಎಂದು ಆಶಿಮಾ ಗೋಯಲ್ ಹೇಳಿದ್ದಾರೆ.

ಇಲ್ಲಿ ಸಪ್ಲೈ ಸೈಡ್ ಇನ್‌ಫ್ಲೇಷನ್ ಎಂದರೆ ಸರಬರಾಜು ಹಂತದ ಹಣದುಬ್ಬರ. ಅಂದರೆ, ಒಂದು ಉತ್ಪನ್ನದ ತಯಾರಿಕೆಯ ವೆಚ್ಚ ಹೆಚ್ಚಾಗಿ ಅದರ ಬೆಲೆ ಏರಿಕೆ ಆಗುವುದಕ್ಕೆ ಸಬ್ಲೈ ಸೈಡ್ ಹಣದುಬ್ಬರವೆನ್ನುತ್ತಾರೆ.

ಈಗ ಉತ್ಪಾದನಾ ವೆಚ್ಚದಿಂದ ಆಗುವ ಹಣದುಬ್ಬರವನ್ನು ಕಡಿಮೆ ಮಾಡಲು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಈ ಸಮಯದಲ್ಲಿ ನೈಜ ಬಡ್ಡಿದರದಲ್ಲಿ ತುಸು ಹೆಚ್ಚಳ ಮಾಡಿದರೆ, ಆರ್ಥಿಕ ಪ್ರಗತಿ ಸ್ವಲ್ಪಮಟ್ಟಿಗೆ ಕುಂಠಿತಗೊಳ್ಳಬಹುದು. ಆದರೆ ಹಣದುಬ್ಬರವನ್ನು ತಗ್ಗಿಸಲು ಸಾಧ್ಯವಿದೆ ಎಂದು ಆರ್‌ಬಿಐನ ಎಂಪಿಸಿ ಸದಸ್ಯೆ ಹೇಳಿದ್ದಾರೆ.

 

ರುಪಾಯಿ ಕುಸಿತದ ಬಗ್ಗೆ

ರುಪಾಯಿ ಕುಸಿತದ ಬಗ್ಗೆ

ಡಾಲರ್ ಎದುರು ರೂಪಾಯಿ ಮೌಲ್ಯ 83 ಮಟ್ಟಕ್ಕಿಂತ ಆಚೆ ಕುಸಿದಿದೆ. ಇದು ಸಾರ್ವಕಾಲಿಕ ಕಳಪೆ ರೂಪಾಯಿ ಮೌಲ್ಯ ಎನಿಸಿದೆ. ರೂಪಾಯಿ ಈ ಮಟ್ಟಕ್ಕೆ ಮೌಲ್ಯ ಕಳೆದುಕೊಳ್ಳುತ್ತಿರುವುದರ ಬಗ್ಗೆ ಆಶಿಮಾ ಗೋಯಲ್ ಪ್ರತಿಕ್ರಿಯಿಸಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಿಸಿಕೆಯನ್ನೇ ಪುನರುಚ್ಚರಿಸಿದ್ದಾರೆ.

ರೂಪಾಯಿ ಮೌಲ್ಯ ಕಡಿಮೆ ಆದರೆ ಸರಕುಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ರೂಪಾಯಿ ಮೌಲ್ಯ ಮಾರುಕಟ್ಟೆ ನಿರ್ಧಾರಿತವಾಗಿರುತ್ತದೆ. ಬೇರೆ ದೇಶಗಳ ಕರೆನ್ಸಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಕುಸಿತ ತೀರಾ ಹೆಚ್ಚು ಎನಿಸುವುದಿಲ್ಲ. ಅಂದರೆ ಭಾರತದ ಬಗ್ಗೆ ಸಕಾರಾತ್ಮಕ ಧೋರಣೆಗಳಿವೆ ಎಂದಾಯಿತು. ಇನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈಕ್ವಿಟಿ ಬೆಲೆಗಳ ಕುಸಿತ ತೀರಾ ಹೆಚ್ಚಿಲ್ಲ. ಇವೆಲ್ಲವೂ ಭಾರತದ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಭಾವನೆಗಳಿರುವುದನ್ನು ತೋರಿಸುತ್ತದೆ ಎಂದು ಆಶಿಮಾ ಗೋಯಲ್ ತಿಳಿಸಿದ್ಧಾರೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+