For Quick Alerts
ALLOW NOTIFICATIONS  
For Daily Alerts

ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

|

ಸದ್ಯ ಭಾರತದಲ್ಲಿ ಎಲ್ಲಿ ನೋಡಿದ್ರೂ ಯುಪಿಐ, ಡಿಜಿಟಲ್ ಪೇಮೆಂಟ್‌ ಮೂಲಕ ವಹಿವಾಟು ಜೋರಾಗಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದ ಬಳಿಕ ಜನರು ಹಣದ ವಹಿವಾಟು ಬಳಸುವುದಕ್ಕಿಂತ ಯುಪಿಐ ಆಧಾರಿತ ಪೇಮೆಂಟ್ಸ್‌ ಬಳಕೆ ಹೆಚ್ಚಾಗಿದೆ. ಗೂಗಲ್ ಪೇ, ಫೋನ್ ಪೇ, ಭೀಮ್ , ಪೇಟಿಎಂ, ಅಮೆಜಾನ್ ಪೇ ಹೀಗೆ ನಾನಾ ರೀತಿಯ ಯುಪಿಐ ಆ್ಯಪ್‌ಗಳಿವೆ.

 

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜೂನ್ ತಿಂಗಳಿನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಮೇ 2021 ರಲ್ಲಿ ಯುಪಿಐ ವಹಿವಾಟು 4.91 ಲಕ್ಷ ಕೋಟಿ ರೂ. ನಷ್ಟಿದ್ದು, ಜೂನ್‌ನಲ್ಲಿ ಶೇಕಡಾ 11.6ರಷ್ಟು ಏರಿಕೆಯಾಗಿ 5.47 ಲಕ್ಷ ಕೋಟಿಗೆ ಮುಟ್ಟಿದೆ.

 

ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.

ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

ಸದ್ಯ ಸಾಕಷ್ಟು ಪ್ರಚಾರದಲ್ಲಿರುವ ಗೂಗಲ್ ಪೇ ಎನ್ನುವುದು ಸುರಕ್ಷಿತ ಪಾವತಿ ಅಪ್ಲಿಕೇಶನ್ ಆಗಿದೆ. ಇದರೊಂದಿಗೆ ನಾವು ಯಾರಿಗಾದರೂ ಹಣವನ್ನು ಕಳುಹಿಸಬಹುದು ಅಥವಾ ಹಣವನ್ನು ತೆಗೆದುಕೊಳ್ಳಬಹುದು. ಇದರಲ್ಲಿರುವ ವಿಶೇಷವೆಂದರೆ ನಾವು ಯಾರಿಗಾದರೂ ಹಣವನ್ನು ಕಳುಹಿಸಿದಾಗ, ಆ ಹಣವನ್ನು ನಮ್ಮ ನೇರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ ಮತ್ತು ಯಾರು ಹಣವನ್ನು ಕಳುಹಿಸಿದರೂ ನೇರವಾಗಿ ಬ್ಯಾಂಕಿನಲ್ಲಿ ಅಕೌಂಟ್‌ಗೆ ಡೆಪಾಸಿಟ್ ಆಗುತ್ತದೆ.

ಇದರಲ್ಲಿ ಕೇವಲ ಹಣ ವಹಿವಾಟು ಅಷ್ಟೇ ಅಲ್ಲದೆ ಹಲವು ವೈಶಿಷ್ಟ್ಯಗಳಿವೆ. ನಾವು ಯಾವುದೇ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಮಾಡಬಹುದು, ಬೇರೆ ಬೇರೆ ಬಿಲ್‌ಗಳನ್ನು ಪಾವತಿಸಬಹುದು ಮತ್ತು ಎಲ್‌ಐಸಿ ಅಥವಾ ಇತರರ ಪಾಲಿಸಿಯನ್ನು ಕೂಡ ಪಾವತಿಸಬಹುದು.

ಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿ

ಅದೇ ಸಮಯದಲ್ಲಿ, ಅನೇಕ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು Google Pay (GPay) ನಲ್ಲಿ ಬದಲಾಯಿಸಲು ಬಯಸುತ್ತಾರೆ. ಏಕೆಂದರೆ ಆ ಸಂಖ್ಯೆ ಬಳಸದೆ ಇರಬಹುದು ಅಥವಾ ಎಲ್ಲೋ ಸಿಮ್ ಕಳೆದುಹೋದಾಗ ನಂತರ ಅವರು ಇನ್ನೊಂದು ಸಂಖ್ಯೆಯನ್ನು ಬಳಸಬಹುದು.

ಇಂತಹ ಸಂದರ್ಭದಲ್ಲಿ ಗೂಗಲ್‌ಪೇನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಹಂತ 1: ಮೊದಲಿಗೆ, ನಿಮ್ಮ ಮೊಬೈಲ್ ಫೋನ್‌ನಲ್ಲಿ Google Pay ಅಂದರೆ GPay ಆ್ಯಪ್ ತೆರೆಯಿರಿ.

ಹಂತ 2: ಇದರ ನಂತರ ನೀವು ನಿಮ್ಮ ಪ್ರೊಫೈಲ್ ಫೋಟೋವನ್ನು ಮೇಲಿನ ಬಲಭಾಗದಲ್ಲಿ ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ನೀವು ಕ್ಲಿಕ್ ಮಾಡಿದ ತಕ್ಷಣ, ನೀವು ಸೆಟ್ಟಿಂಗ್‌ನ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4: ಸೆಟ್ಟಿಂಗ್‌ಗೆ ಹೋದ ನಂತರ, ನೀವು ಹಲವು ಆಯ್ಕೆಗಳನ್ನು ನೋಡುತ್ತೀರಿ, ಅಲ್ಲಿ ನೀವು ವೈಯಕ್ತಿಕ ಮಾಹಿತಿಯನ್ನು ಕ್ಲಿಕ್ ಮಾಡಬೇಕು.

ಹಂತ 5: ಈ ರೀತಿಯಾಗಿ ಈಗ ನೀವು ನಿಮ್ಮ ಮೊಬೈಲ್ ಸಂಖ್ಯೆ ಇರುವ ಆಯ್ಕೆಯನ್ನು ನೋಡಬಹುದು ಮತ್ತು ಅಲ್ಲಿ ನಿಮ್ಮ ಪ್ರಸ್ತುತ ಸಂಖ್ಯೆ ಇರುತ್ತದೆ ಮತ್ತು ಅದರ ಹಿಂದೆ ಎಡಿಟ್ ಆಯ್ಕೆ ಕಾಣಿಸುತ್ತದೆ.

ಹಂತ 6: ಈಗ ನೀವು ಎಡಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ನಿಮಗೆ ಬೇಕಾದ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 7: ನಂತರ ನೀವು OTP ಸ್ವೀಕರಿಸುತ್ತೀರಿ. ಅದನ್ನು ನಮೂದಿಸಿದ ನಂತರ, ಮುಂದೆ ಕ್ಲಿಕ್ ಮಾಡಿ.

ಹೀಗೆ ಈ ಪ್ರಕ್ರಿಯೆಯಿಂದ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು Google Pay ಗೆ ಪರಿವರ್ತಿಸಲಾಗುತ್ತದೆ. ಮತ್ತು ಯಾರಾದರೂ ನಂತರ ಪಾವತಿಸಿಬೇಕಾದರೆ, ನೀವು ಈಗ ಈ ಹೊಸ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.

English summary

How To Change Phone Number In Google Pay

Here the details of how to change your google pay number. explained In Kannada
Story first published: Saturday, July 31, 2021, 19:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X