For Quick Alerts
ALLOW NOTIFICATIONS  
For Daily Alerts

ನಾನು ಕೂಡಾ ಮಧ್ಯಮ ವರ್ಗದಿಂದ ಬಂದವಳು: ನಿರ್ಮಲಾ ಸೀತಾರಾಮನ್

"ನಾನು ಕೂಡಾ ಮಧ್ಯಮ ವರ್ಗದಿಂದ ಬಂದವಳು, ಹಾಗಾಗಿ ಆ ವರ್ಗದ ಜನರ ಕಷ್ಟ, ಒತ್ತಡವನ್ನು ನಾನು ಅರಿಯಬಲ್ಲೆ"ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಹಾಗಾಗಿ, ಕೇಂದ್ರ ವಿತ್ತ ಸಚಿವೆ ಮಂಡಿಸಲಿರುವ ಬಜೆಟ್ ಮೇಲೆ ಆ ವರ್ಗದ ಜನರಿಗೆ ಬಹಳಷ್ಟು ನಿರೀಕ್ಷೆಯಿದೆ.

|

ನವದೆಹಲಿ, ಫೆ 1: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಕೇಂದ್ರ ಸಚಿವ ಸಂಪುಟ ಬಜೆಟ್ ಮಂಡನೆಗೆ ಅನುಮೋದನೆ ನೀಡಿದ್ದಾಗಿದೆ.

"ನಾನು ಕೂಡಾ ಮಧ್ಯಮ ವರ್ಗದಿಂದ ಬಂದವಳು, ಹಾಗಾಗಿ ಆ ವರ್ಗದ ಜನರ ಕಷ್ಟ, ಒತ್ತಡವನ್ನು ನಾನು ಅರಿಯಬಲ್ಲೆ"ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಹಾಗಾಗಿ, ಕೇಂದ್ರ ವಿತ್ತ ಸಚಿವೆ ಮಂಡಿಸಲಿರುವ ಬಜೆಟ್ ಮೇಲೆ ಆ ವರ್ಗದ ಜನರಿಗೆ ಬಹಳಷ್ಟು ನಿರೀಕ್ಷೆಯಿದೆ.

Budget 2023 Live: ಕೇಂದ್ರ ಬಜೆಟ್‌ಗೂ ಮುನ್ನ ಷೇರುಪೇಟೆ ಶುಭಾರಂಭBudget 2023 Live: ಕೇಂದ್ರ ಬಜೆಟ್‌ಗೂ ಮುನ್ನ ಷೇರುಪೇಟೆ ಶುಭಾರಂಭ

ಕೇಂದ್ರ ಸರಕಾರದ ಅಧೀನದ ಹಲವು ಸಂಸ್ಥೆಗಳು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಗಣಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರುವ ಯಾವುದೇ ಹೆಚ್ಚುವರಿ ತೆರಿಗೆಯನ್ನು ಹೇರುವುದಿಲ್ಲ ಎಂದು ಹಣಕಾಸು ಸಚಿವೆ ಸಂದರ್ಶನವೊಂದರಲ್ಲಿ ಹೇಳಿದ್ದರು.

 ನಾನು ಕೂಡಾ ಮಧ್ಯಮ ವರ್ಗದವಳು:  ನಿರ್ಮಲಾ ಸೀತಾರಾಮನ್

ವೈಯಕ್ತಿಕ ತೆರಿಗೆ ಮಿತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಏರಿಸಲಾಗುತ್ತದೆಯೇ ಎನ್ನುವ ಕುತೂಹಲ ಮಧ್ಯಮ ವರ್ಗ ಮತ್ತು ಸಂಬಳದಾರರಲ್ಲಿ ಮನೆ ಮಾಡಿದೆ. ಜೊತೆಗೆ. ಗೃಹಸಾಲದ ಮೇಲಿನ ಬಡ್ಡಿಯನ್ನು ಇಳಿಸಲಾಗುತ್ತದೆಯೇ ಎಂದು ಕಾತರದಿಂದ ಕಾಯಲಾಗುತ್ತಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಆಯವ್ಯಯವನ್ನು ಮಂಡಿಸುತ್ತಿದ್ದಾರೆ. 2014ರಲ್ಲಿ ಇದ್ದ ವೈಯಕ್ತಿಕ ತೆರಿಗೆ ಮಿತಿಯಾದ ಎರಡೂವರೆ ಲಕ್ಷ ರೂಪಾಯಿಯನ್ನು ಆ ನಂತರ ಪರಿಷ್ಕರಿಸಲೇ ಇಲ್ಲ.

"ಇದು ಅತ್ಯುತ್ತಮ ಬಜೆಟ್ ಆಗಿರುತ್ತದೆ. ಇದು ಬಡವರು, ಮಧ್ಯಮ ವರ್ಗದ ಪರವಾದ ಬಜೆಟ್ ಆಗಿರುತ್ತದೆ" ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

English summary

I Too Came From Middle Class family Said, Union Finance Minister Nirmala Sitharaman

I Too Came From Middle Class family Said, Union Finance Minister Nirmala Sitharaman. Know More
Story first published: Wednesday, February 1, 2023, 11:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X