IBM: ಸಾಫ್ಟ್‌ವೇರ್ ಕೋ ಆಪ್ಟಿಯೊವನ್ನು 4.6 ಬಿಲಿಯನ್ ಡಾಲರ್‌ಗೆ ಖರೀದಿಸಲಿದೆ ಐಬಿಎಂ

ಐಬಿಎಂ (ಐಬಿಎಂ.ಎನ್‌) ಸೋಮವಾರ ಕ್ಲೌಡ್ ಸಾಫ್ಟ್‌ವೇರ್ ಕಂಪನಿ ಆಪ್ಟಿಯೊವನ್ನು ಖರೀದಿ ಮಾಡುವುದಾಗಿ ಹೇಳಿದೆ. ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್‌ನಿಂದ 4.6 ಬಿಲಿಯನ್ ಡಾಲರ್‌ಗೆ ಆಪ್ಟಿಯೊವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಐಬಿಎಂ ಹೇಳಿದೆ. ಕ್ಲೌಡ್ ಮತ್ತು ಆಟೊಮೇಷನ್‌ನಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಈ ಡೀಲ್ ಅನ್ನು ಮಾಡಲಾಗಿದೆ. ಪ್ರಿಮಾರ್ಕೆಟ್ ವಹಿವಾಟಿನಲ್ಲಿ ಐಬಿಎಂ ಷೇರುಗಳು ಕೊಂಚ ಇಳಿಕೆ ಕಂಡಿದೆ.

ಇನ್ನು ನಗದು ವಹಿವಾಟಿನೊಂದಿಗೆ ಹಣಕಾಸು ವಹಿವಾಟು ನಡೆಸಿ ಈ ಸಾಫ್ಟ್‌ವೇರ್ ಕಂಪನಿ ಆಪ್ಟಿಯೊವನ್ನು ಖರೀದಿ ಮಾಡುವುದಾಗಿ ಐಬಿಎಂ ಹೇಳಿದೆ. 2023 ರ ಉತ್ತರಾರ್ಧದಲ್ಲಿ ಒಪ್ಪಂದವು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಸವಾಲಿನ ಪರಿಸ್ಥಿತಿ ಇರುವಾಗ ಕಂಪನಿಗಳು ತಮ್ಮಲ್ಲಿನ ವೆಚ್ಚ ಕಡಿತಗೊಳಿಸುತ್ತಿದೆ. ಈ ಸಮಯದಲ್ಲಿ ಈ ಒಪ್ಪಂದವು ನಡೆದಿದೆ. ಐಬಿಎಂ ಈ ವರ್ಷದ ಆರಂಭದಲ್ಲಿ ಸುಮಾರು 3,900 ಉದ್ಯೋಗಗಳನ್ನು ಕಡಿತಗೊಳಿಸಿದೆ.

 ಕೋ ಆಪ್ಟಿಯೊವನ್ನು 4.6 ಬಿಲಿಯನ್ ಡಾಲರ್‌ಗೆ ಖರೀದಿಸಲಿದೆ ಐಬಿಎಂ

ಐಬಿಎಂ ಮಾರ್ಚ್ ತ್ರೈಮಾಸಿಕದಲ್ಲಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 1ರಷ್ಟು ಹೆಚ್ಚಳವನ್ನು ವರದಿ ಮಾಡಿದೆ. 1,500 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಆಪ್ಟಿಯೊವನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಮೆಜಾನ್.ಕಾಮ್‌ನ ಎಡಬ್ಲ್ಯೂಎಸ್‌ನಿಂದ ಸೇಲ್ಸ್‌ಫೋರ್ಸ್ ಕ್ಲೌಡ್ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಹೊಸ ಎಐ ಮತ್ತು ಕ್ಲೌಡ್-ಆಧಾರಿತ ಕೊಡುಗೆಗಳ ಮೇಲೆ ಕೇಂದ್ರೀಕರಿಸಲು ಶತಮಾನದ ಹಳೆಯ ಐಟಿ ತಂತ್ರಜ್ಞಾನವು ಬದಲಾಯಿಸಿ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಐಬಿಎಂ ಈ ತಂತ್ರಜ್ಞಾನವನ್ನು ಮಾಡಿದೆ.

2019 ರಲ್ಲಿ, ಐಬಿಎಂ ತನ್ನ ಅತಿದೊಡ್ಡ ಸ್ವಾಧೀನವನ್ನು ಮಾಡಿದೆ. ಸುಮಾರು 34 ಬಿಲಿಯನ್‌ ಡಾಲರ್‌ಗೆ ಸಾಫ್ಟ್‌ವೇರ್ ಪೂರೈಕೆದಾರ ಸಂಸ್ಥೆಯಾದ ರೆಡ್ ಹ್ಯಾಟ್‌ ಅನ್ನು ಖರೀದಿ ಮಾಡಿದೆ. ಎರಡು ವರ್ಷಗಳ ನಂತರ ಅದರ ಐಟಿ ಮೂಲಸೌಕರ್ಯ ಮತ್ತು ಡೇಟಾ-ಸೆಂಟರ್ ವ್ಯವಹಾರವಾದ ಕಿಂಡ್ರಿಲ್ ಹೋಲ್ಡಿಂಗ್ಸ್ ಅನ್ನು ಹೊರಹಾಕಿದೆ. ಕಳೆದ ವರ್ಷ, ಕಂಪನಿಯು ತನ್ನ ಕೆಲವು ಹೆಲ್ತ್‌ಕೇರ್-ಡೇಟಾ ಮತ್ತು ಅನಾಲಿಟಿಕ್ಸ್ ಸ್ವತ್ತುಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

2007 ರಲ್ಲಿ ಸ್ಥಾಪಿತವಾದ ಸಿಯಾಟಲ್-ಆಧಾರಿತ ಆಪ್ಟಿಯೊ ಕಂಪನಿಗಳು ಕ್ಲೌಡ್ ಸೇವೆಗಳಲ್ಲಿ ತಮ್ಮ ಖರ್ಚುಗಳನ್ನು ನಿರ್ವಹಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಐಟಿ ಬಜೆಟ್, ಮುನ್ಸೂಚನೆ ಮತ್ತು ಆರ್ಥಿಕ ವಿಶ್ಲೇಷಣೆಗಳಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ. ಖಾಸಗಿ ಇಕ್ವಿಟಿ ಸಂಸ್ಥೆಯಾದ ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್ 2018 ರಲ್ಲಿ ಆಪ್ಟಿಯೊಗೆ ಸುಮಾರು 2 ಬಿಲಿಯನ್‌ಗೆ ಖರೀದಿಸಲು ಒಪ್ಪಿಕೊಂಡಿದೆ. ಆಪ್ಟಿಯೊ ಸೆಪ್ಟೆಂಬರ್ 2016 ರಲ್ಲಿ ಪ್ರತಿ ಷೇರಿಗೆ 16 ಡಾಲರ್‌ನಂತೆ ವಹಿವಾಟು ಆರಂಭ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+