For Quick Alerts
ALLOW NOTIFICATIONS  
For Daily Alerts

ಕೊರೊನಾ ನಡುವೆಯು 2 ಲಕ್ಷ ಉದ್ಯೋಗ ಸೃಷ್ಟಿ: ಇಡೀ ದೇಶದಲ್ಲಿ ನಮ್ಮ ಬೆಂಗಳೂರು ಫಸ್ಟ್

|

ಕೊರೊನಾವೈರಸ್ ಕಾಲಿಟ್ಟಾಗಿನಿಂದ ಎಲ್ಲವೂ ಹಾಳಾಯಿತೇ ಹೊರತು ಉದ್ದಾರ ಆಗಿದ್ದು ಏನು ಇಲ್ಲ ಎಂಬುದು ಎಲ್ಲರಿಗೂ ಗೊತ್ತು. ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಬಹುತೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರೆ ಕೋಟಿ ಕೋಟಿ ಜನರ ಬದುಕು ಬೀದಿಗೆ ಬಂದಿದೆ. ಇದರ ಜೊತೆಗೆ ಕೋಟ್ಯಾಂತರ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗುತ್ತಿದೆ.

 

ಹೀಗೆ ಕೊರೊನಾ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಡಿತ, ವೇತನ ಕಡಿತದ ಸುದ್ದಿಗಳನ್ನೇ ನೀವು ಕೇಳಿದ್ದೀರಿ, ಆದರೆ ಕೆಲವು ಹೊಸ ಅಂಕಿ-ಅಂಶಗಳು ಆಶ್ಚರ್ಯವನ್ನು ಮೂಡಿಸುವ ಜೊತೆಗೆ ಭವಿಷ್ಯದ ಭರವಸೆಯನ್ನು ಹುಟ್ಟಿಸುತ್ತಿವೆ.

ಕಳೆದ 4 ವಾರಗಳಲ್ಲಿ ಸೃಷ್ಟಿಯಾಗಿವೆ 2 ಲಕ್ಷ ಉದ್ಯೋಗಗಳು

ಕಳೆದ 4 ವಾರಗಳಲ್ಲಿ ಸೃಷ್ಟಿಯಾಗಿವೆ 2 ಲಕ್ಷ ಉದ್ಯೋಗಗಳು

ದೇಶದಲ್ಲಿ ಕೊರೊನಾದಿಂದ ಲಾಕ್‌ಡೌನ್‌ ಆದ ಪರಿಣಾಮ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ನೀವು ಎಲ್ಲಾದರೂ ಓದಿರಬಹುದು ಮತ್ತು ಕೇಳಿರಬಹುದು. ಆದರೆ
ಎಕನಾಮಿಕ್‌ ಟೈಮ್ಸ್ ವಿಶ್ಲೇಷಣೆ ಮತ್ತು ಮಾಹಿತಿ ಪ್ರಕಾರ ಕೊರೊನಾ ಅವಧಿಯಲ್ಲಿ ಅಂದರೆ ಕಳೆದ ನಾಲ್ಕು ವಾರಗಳಲ್ಲಿ 2 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಅದರಲ್ಲೂ ಕಳೆದ ಒಂದು ವಾರದಲ್ಲಿಯೇ 2 ಲಕ್ಷದಲ್ಲಿ 25 ಪರ್ಸೆಂಟ್‌ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ.

ವಿಶ್ವದ ಬೃಹತ್ ಕಂಪನಿಗಳಿಂದ ಭಾರತದಲ್ಲಿ ಉದ್ಯೋಗವಕಾಶ

ವಿಶ್ವದ ಬೃಹತ್ ಕಂಪನಿಗಳಿಂದ ಭಾರತದಲ್ಲಿ ಉದ್ಯೋಗವಕಾಶ

ಜಗತ್ತಿನ ದೈತ್ಯ ಕಂಪನಿಗಳು ಇತ್ತೀಚೆಗೆ ತಮ್ಮ ಅಧಿಕೃತ ಅಕೌಂಟ್‌ಗಳಲ್ಲಿ ಪ್ರಕಟಿಸಿದ ಅನ್ವಯ ಸುಮಾರು 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಅಮೆಜಾನ್‌, ಗೂಗಲ್‌, ಐಬಿಎಂ, ಕ್ಯಾಪ್‌ಜೆಮಿನಿ, ವಾಲ್‌ ಮಾರ್ಟ್‌, ಟೆಕ್‌ ಮಹೀಂದ್ರಾ, ಗ್ರೋಫರ್ಸ್‌, ಬೈಜೂಸ್‌, ಫ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮೊದಲಾದ ಕಂಪನಿಗಳು ಉದ್ಯೋಗಾವಕಾಶಗಳನ್ನು ಸೃಷಿಸಿವೆ. ಈ ಕುರಿತ ಜಾಹೀರಾತುಗಳನ್ನು ಲಿಂಕ್ಡ್ಇನ್‌ನಲ್ಲಿನ ತಮ್ಮ ಅಧಿಕೃತ ಪೇಜ್‌ಗಳಲ್ಲಿ ಪ್ರಕಟಿಸಿವೆ.

ಬೆಂಗಳೂರಿನಲ್ಲಿ 20 ಪರ್ಸೆಂಟ್ ಉದ್ಯೋಗ ಸೃಷ್ಟಿ
 

ಬೆಂಗಳೂರಿನಲ್ಲಿ 20 ಪರ್ಸೆಂಟ್ ಉದ್ಯೋಗ ಸೃಷ್ಟಿ

ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲೇ ಫೇಮಸ್. ಹೀಗಿರುವಾಗ ದೇಶದಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಸೃಷ್ಟಿಯಾಗಿರುವ ಹೊಸ 2 ಲಕ್ಷ ಉದ್ಯೋಗಾವಕಾಶಗಳ ಪೈಕಿ ಬೆಂಗಳೂರಿನಲ್ಲಿಯೇ 20 ಪರ್ಸೆಂಟ್‌ರಷ್ಟು ಉದ್ಯೋಗ ಸೃಷ್ಟಿಯಾಗಿವೆ.

ಬೆಂಗಳೂರು ಹೊರತುಪಡಿಸಿ ದೆಹಲಿಯಲ್ಲಿ 8 ಪರ್ಸೆಂಟ್ ಮತ್ತು ಚೆನ್ನೈನಲ್ಲಿ 7 ಪರ್ಸೆಂಟ್‌ರಷ್ಟು ಅವಕಾಶಗಳಿವೆ ಎಂದು ಕ್ಸಿಫಿನೊ ಅಧ್ಯಯನದಲ್ಲಿ ಹೇಳಲಾಗಿದೆ. ಸೀನಿಯರ್‌ ಸಾಫ್ಟ್‌ವೇರ್ಸ್ ಎಂಜಿನಿಯರ್‌, ಪ್ರೊಗ್ರಾಮರ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ. ತಾಂತ್ರಿಕೇತರ ವಲಯದಲ್ಲಿ ಸೇಲ್ಸ್‌ ಎಕ್ಸಿಕ್ಯೂಟೀವ್ಸ್‌ಗೆ ಭಾರಿ ಬೇಡಿಕೆ ಕಂಡು ಬಂದಿದೆ.

 

ಫ್ರೆಶರ್‌ಗಳಿಗೆ ಇಲ್ಲಿದೆ ಗುಡ್‌ ನ್ಯೂಸ್

ಫ್ರೆಶರ್‌ಗಳಿಗೆ ಇಲ್ಲಿದೆ ಗುಡ್‌ ನ್ಯೂಸ್

2 ಲಕ್ಷ ಉದ್ಯೋಗ ಸೃಷ್ಟಿಗಳ ಪೈಕಿ ಸುಮಾರು 80,000 ಉದ್ಯೋಗಗಳು ಪ್ರವೇಶ ಮಟ್ಟದ ಸ್ಥಾನಗಳಾಗಿವೆ. ಇದು ಹೊಸ ಪದವೀಧರರಿಗೆ ಗುಡ್ ನ್ಯೂಸ್ ಆಗಿದೆ. ಜ್ಯೂನಿಯರ್ ಮತ್ತು ಮಿಡ್ ಸೀನಿಯರ್ ಹಂತದ ಉದ್ಯೋಗಗಳೇ 40 ಪರ್ಸೆಂಟ್‌ನಷ್ಟಿದೆ ಎಂದು ಅಂಕಿ-ಅಂಶಗಳು ತೋರಿಸಿವೆ.

91 ಪರ್ಸೆಂಟ್‌ನಷ್ಟು ಫುಲ್ ಟೈಮ್ ಜಾಬ್ಸ್‌

91 ಪರ್ಸೆಂಟ್‌ನಷ್ಟು ಫುಲ್ ಟೈಮ್ ಜಾಬ್ಸ್‌

ಕ್ಸಿಫಿನೊ ವಿಶ್ಲೇಷಣೆಯ ಪ್ರಕಾರ ಒಟ್ಟಾರೆ ಸೃಷ್ಟಿಯಾದ ಉದ್ಯೋಗಳ ಪೈಕಿ 91 ಪರ್ಸೆಂಟ್‌ಕ್ಕಿಂತಲೂ ಹೆಚ್ಚಿನ ಉದ್ಯೋಗಗಳು ಫುಲ್ ಟೈಮ್ ಜಾಬ್‌ಗಳಾಗಿವೆ. ಮತ್ತು ಉಳಿದವು ಒಪ್ಪಂದ ಮತ್ತು ಪಾರ್ಟ್‌ ಟೈಮ್‌ನಿಂದ ಇವೆ ಎಂದು ತೋರಿಸುತ್ತದೆ. ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಐಟಿ ಮತ್ತು ಐಟಿಇಎಸ್ 79 ಪರ್ಸೆಂಟ್‌ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದರೆ, ಇಕಾಮರ್ಸ್ ಮತ್ತು ಬಿಎಫ್‌ಎಸ್‌ಐ ಸುಮಾರು 15 ಪರ್ಸೆಂಟ್‌ನಷ್ಟಿದೆ.

English summary

In Corona Times 2 Lakh Jobs Created Bengaluru First In Country

Here’s some good news on jobs in times of Covid-19 , over 200,000 jobs have been advertised by a range of employers in the past four weeks
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X