For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿ ಅತಿ ಕಡಿಮೆ ಬೆಲೆಗೆ ಮೊಬೈಲ್ ಡೇಟಾ ಸಿಗುವುದು ಭಾರತದಲ್ಲೇ

|

ಈಗಾಗಲೇ ಭಾರತೀ ಏರ್‌ಟೆಲ್, ವೊಡಾಫೋನ್-ಐಡಿಯಾ ಕಂಪನಿಗಳು ಡಿಸೆಂಬರ್ 3ರಿಂದ ಹೊಸ ಕರೆ ಹಾಗೂ ಡೇಟಾ ದರವನ್ನು ಪ್ರಕಟಿಸಿವೆ. ಈ ಮೂಲಕ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 30 ರಿಂದ 75 ರುಪಾಯಿ ತನಕ ಬೆಲೆ ಏರಿಕೆಗೊಂಡಿದೆ. ಜಿಯೋ ಕೂಡ ಡಿಸೆಂಬರ್ 6ರಿಂದ ಬೆಲೆ ಏರಿಕೆಗೆ ಮುಂದಾಗಿದೆ.

ಜಿಯೊ ಅಡ್ವಾನ್ಸ್ ರೀಚಾರ್ಜ್ ಮಾಡಿಸಿ ಹಣ ಉಳಿಸಿಜಿಯೊ ಅಡ್ವಾನ್ಸ್ ರೀಚಾರ್ಜ್ ಮಾಡಿಸಿ ಹಣ ಉಳಿಸಿ

ದೇಶದ ಬಹುತೇಕ ಪ್ರಮುಖ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಿದರೂ ಸಹ ವಿಶ್ವದಲ್ಲಿ ಅತಿ ಕಡಿಮೆ ಬೆಲೆ ಮೊಬೈಲ್ ಡೇಟಾ ಸಿಗುವುದು ಭಾರತದಲ್ಲೇ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮೊಬೈಲ್ ಸೇವಾ ದರಗಳು ಅಗ್ಗದಲ್ಲಿ ಗ್ರಾಹಕರಿಗೆ ಲಭಿಸುತ್ತಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ವಿಶ್ವದಲ್ಲಿ ಅತಿ ಕಡಿಮೆ ಬೆಲೆಗೆ ಮೊಬೈಲ್ ಡೇಟಾ ಸಿಗುವುದು ಭಾರತದಲ್ಲೇ

ಖಾಸಗಿ ಕಂಪನಿಗಳು ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಟ್ವೀಟ್ ಮೂಲಕ ಖಂಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಚಿವ ರವಿಶಂಕರ್ ಪ್ರಸಾದ್ ಯುಪಿಎ ಅವಧಿಗಿಂತ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ದೇಶದ ಇಂಟರ್ನೆಟ್ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ ಎಂದು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.

2014ರಲ್ಲಿ ಪ್ರತಿ 1 ಜಿಬಿ ಇಂಟರ್ನೆಟ್‌ಗೆ 268.97 ರುಪಾಯಿಗಳಿದ್ದರೆ ಇದೀಗ 11.78 ರುಪಾಯಿಗಳಿಗೆ ಒಂದು ಜಿಬಿ ಡೇಟಾ ಸಿಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ವಿಶ್ವದಲ್ಲಿ ಮೊಬೈಲ್ ಡೇಟಾ ದರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಮೂಲದ ಕೇಬಲ್.ಕೋ.ಯುಕೆ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆ ಪ್ರಕಾರ ಭಾರತದಲ್ಲಿ 0.26 ಡಾಲರ್ (18.60 ರುಪಾಯಿ) , ರಷ್ಯಾದಲ್ಲಿ 0.91 ಡಾಲರ್‌ (65 ರುಪಾಯಿ)ಗೆ ಒಂದು ಜಿಬಿ ಡೇಟಾ ಸಿಕ್ಕರೆ, ಇಟಲಿಯಲ್ಲಿ 1.37 ಡಾಲರ್ (97.99 ರುಪಾಯಿ) , ಆಸ್ಟ್ರೇಲಿಯಾದಲ್ಲಿ 2.47 ಡಾಲರ್ (176.67 ರುಪಾಯಿ) , ಇಂಗ್ಲೆಂಡ್‌ನಲ್ಲಿ 6.6 ಡಾಲರ್ (472 ರುಪಾಯಿ), ಅಮೆರಿಕಾದಲ್ಲಿ 12.37 ಡಾಲರ್ (884.70 ರುಪಾಯಿ)ಗಳಲ್ಲಿ ಒಂದು ಜಿಬಿ ಡೇಟಾ ಸಿಗುತ್ತದೆ ಎಂದು ಯುಕೆ ಸಂಸ್ಥೆ ಸಮೀಕ್ಷೆಯಲ್ಲಿ ತಿಳಿಸಿದೆ.

English summary

India Data Rate Lowest In The World

After india's top mobile phone service providers announced an increase in call and data charges, india still have lowest data price in the world said minister ravishankar prasad
Story first published: Wednesday, December 4, 2019, 19:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X