ಭಾರತದ ಆಡಿಯೋ ಬ್ರ್ಯಾಂಡ್ boAt ಬುಧವಾರ (ಜನವರಿ 6, 2021) ಘೋಷಣೆ ಮಾಡಿರುವ ಪ್ರಕಾರ, ವಾರ್ ಬರ್ಗ್ ಪಿನ್ ಕಸ್ ಕಂಪೆನಿಯ ಸಹವರ್ತಿ ಸಂಸ್ಥೆಯಿಂದ 10 ಕೋಟಿ ಯುಎಸ್ ಡಿ (731 ಕೋಟಿ ರುಪಾಯಿಗೂ ಹೆಚ್ಚು) ಸಂಗ್ರಹಿಸಿದೆ. ಜಾಗತಿಕ ಮಟ್ಟದಲ್ಲಿ ವಿಸ್ತರಣೆಗೆ ಹಾಗೂ ಉತ್ಪಾದನೆ ಹೆಚ್ಚು ಮಾಡುವುದಕ್ಕೆ ಈ ಹಣವನ್ನು ಬಳಸಲಾಗುತ್ತದೆ.
ಈ ಮಹತ್ವದ ಹೂಡಿಕೆ ಮೂಲಕ boAt ಭಾರತದ ಟ್ರೂ ವೈಯರ್ ಲೆಸ್ ಸ್ಟೀರಿಯೋ (TWS) ಮುಂಚೂಣಿ ಬ್ರ್ಯಾಂಡ್ ಆಗಲಿದೆ. ಮಾರ್ಕೆಟ್ ಪಾಲು Q3, 2020ರಲ್ಲಿ 18 ಪರ್ಸೆಂಟ್ ಆಗಲಿದೆ. ಇದರ ಜತೆಗೆ ಆರ್ ಅಂಡ್ ಡಿ ಸಾಮರ್ಥ್ಯ ಮತ್ತು ಪ್ರಾಡಕ್ಟ್ ಪೋರ್ಟ್ ಫೋಲಿಯೋ ವಿಸ್ತರಣೆಗೆ ಯೋಜನೆ ರೂಪಿಸಿದೆ.
"ಈ ಹೂಡಿಕೆ ಕಂಪೆನಿಗೆ ಮಾತ್ರ ಅದ್ಭುತ ಸುದ್ದಿಯಷ್ಟೇ ಅಲ್ಲ, ಆದರೆ D2C (ಡೈರೆಕ್ಟ್- ಟು- ಕನ್ಸ್ಯೂಮರ್) ವಲಯಕ್ಕೆ ಒಳ್ಳೆ ಸುದ್ದಿ. ನಮ್ಮ ಉತ್ಪಾದನೆ ಮತ್ತು ಜಾಗತಿಕ ಪೂರೈಕೆ ಜಾಲ ವಿಸ್ತರಣೆಗೆ ಪ್ರಯತ್ನಿಸುತ್ತಿರುವಾಗ ಹೂಡಿಕೆ ಬಂದಿರುವುದು ಸರಿಯಾದ ಸಮಯ ಆಗಿದೆ," ಎಂದು boAt ಸಹ- ಸಂಸ್ಥಾಪಕ ಅಮನ್ ಗುಪ್ತಾ ಹೇಳಿದ್ದಾರೆ.

boAt ಬ್ರ್ಯಾಂಡ್ ಅನ್ನು 2016ರಲ್ಲಿ ಗುಪ್ತಾ ಮತ್ತು ಸಮೀರ್ ಮೆಹ್ತಾ ಆರಂಭಿಸಿದರು. ಸದ್ಯಕ್ಕೆ ಹೆಡ್ ಫೋನ್ ಗಳು, ಇಯರ್ ಫೋನ್ ಗಳು ಮತ್ತು ಇತರ ಆಕ್ಸೆಸರಿಗಳನ್ನು ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ Q3, 2020ರಲ್ಲಿ TWS ಮಾರುಕಟ್ಟೆ 723 ಪರ್ಸೆಂಟ್ ಬೆಳವಣಿಗೆ ದಾಖಲಾಗಿದೆ ಎಂದು ಈಚಿನ ರೀಸರ್ಚ್ ನಿಂದ ಗೊತ್ತಾಗಿದೆ. ಇಂಥ ಸನ್ನಿವೇಶದಲ್ಲಿ ಹೂಡಿಕೆ ಬಂದಿದೆ.
ಐಡಿಸಿ ದತ್ತಾಂಶದ ಪ್ರಕಾರ, ಜಾಗತಿಕವಾಗಿ boAt ಐದನೇ ವೇರಬಲ್ ಬ್ರ್ಯಾಂಡ್ ಆಗಿದೆ. ಸದ್ಯಕ್ಕೆ ಕಂಪೆನಿಗೆ ದೆಹಲಿ ಮತ್ತು ಮುಂಬೈನಲ್ಲಿ 150ರಷ್ಟು ಸಿಬ್ಬಂದಿ ಇದ್ದಾರೆ.


Click it and Unblock the Notifications