ಬಡವರ ಸಹಾಯಕ್ಕೆ 65 ಸಾವಿರ ಕೋಟಿ ಅಗತ್ಯವಿದೆ : ಆರ್‌ಬಿಐ ಮಾಜಿ ಗವರ್ನರ್

ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆಗೆ ವಿಡಿಯೋ ಸಂವಾದ ನಡೆಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್, ಕೆಲವೊಂದು ಮುಖ್ಯ ಆರ್ಥಿಕ ಸಲಹೆಗಳನ್ನು ಮುಂದಿಟ್ಟಿದ್ದಾರೆ.

ಈ ಕೋವಿಡ್ ಬಿಕ್ಕಿಟ್ಟಿನ ಸಮಯದಲ್ಲಿ ಬಡ ಜನರಿಗೆ ಸಹಾಯ ಮಾಡಲು ಭಾರತಕ್ಕೆ 65 ಸಾವಿರ ಕೋಟಿ ರುಪಾಯಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಅದೇ ಹೊತ್ತಿಗೆ ಲಾಕ್‌ಡೌನ್ ಅವಧಿಯ ಬಳಿಕ ಜನ ಸಾಮಾನ್ಯರ ಜೀವನದ ಮೇಲೆ ಸರಕಾರ ಹೆಚ್ಚಿನ ಗಮನ ಕೇಂದ್ರಿಕರಿಸಬೇಕಿದೆ ಎಂದವರು ಸಲಹೆ ನೀಡಿದ್ದಾರೆ.

ಬಡವರ ಸಹಾಯಕ್ಕೆ 65 ಸಾವಿರ ಕೋಟಿ ಅಗತ್ಯವಿದೆ : ಆರ್‌ಬಿಐ ಮಾಜಿ ಗವರ್ನರ್

ಕೊರೊನಾ ವೈರಸ್ ಸಾಂಕ್ರಾಮಕ ರೋಗದ ಬಿಕ್ಕಿಟ್ಟಿನ ಸಮಯದಲ್ಲಿ ಬಡ ಜನರಿಗೆ ಆಹಾರ ಪೂರೈಕೆಗೆ ಭಾರತಕ್ಕೆ 65000 ಕೋಟಿ ರುಪಾಯಿಗಳ ಅಗತ್ಯವಿದೆ. ಭಾರತದ ಜಿಡಿಪಿ 200 ಲಕ್ಷ ಕೋಟಿ ರುಪಾಯಿಗಳಾಗಿದ್ದು, ಹಾಗಾಗಿ ಬಡ ಜನರ ರಕ್ಷಣೆಗಾಗಿ 65,000 ಕೋಟಿ ಕೋಟಿ ರುಪಾಯಿಗಳನ್ನು ವ್ಯಯ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಅನಿರೀಕ್ಷಿತವಾದುದು. ಹಾಗಾಗಿ ಈ ಬಿಕ್ಕಟ್ಟನ್ನು ಎದುರಿಸಲು ಎಲ್ಲ ಮಾನದಂಡಗಳನ್ನು ಮುರಿಯಬಹುದಾಗಿದೆ. ಅದೇ ಹೊತ್ತಿಗೆ ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂಬುದನ್ನು ನೆನಪಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+