ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶಾದ್ಯಂತ 4,500 ವಂದೇ ಭಾರತ್ ರೈಲುಗಳು ಇರಲಿದೆ ಎಂದು ಡಿಸೆಂಬರ್ 8 ರಂದು ತಿಳಿಸಿದರು. "2023 ರಲ್ಲಿ, ದೇಶದಲ್ಲಿ 23 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದೆ. 2047 ರ ವೇಳೆಗೆ 4,500 ವಂದೇ ಭಾರತ್ ರೈಲುಗಳು ಸಂಚರಿಸುವಂತೆ ಮಾಡುವುದು ನಮ್ಮ ಉದ್ದೇಶ," ಎಂದರು.
2026 ಮತ್ತು 27 ರ ನಡುವೆ ಭಾರತವು ತನ್ನ ಮೊದಲ ಹೈಸ್ಪೀಡ್ ಬುಲೆಟ್ ರೈಲು ಹೊಂದಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ನವಿ ಮುಂಬೈನಲ್ಲಿ ಎರಡನೇ ವಿಮಾನ ನಿಲ್ದಾಣವು 2024 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಕೂಡಾ ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಂದಿನ ವರ್ಷದ ಅಂತ್ಯದ ವೇಳೆಗೆ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜೆವಾರ್‌ನಲ್ಲಿ ತೆರೆಯಲಾಗುವುದು. ಡಿಸೆಂಬರ್ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸಿದ್ಧವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಬುಲೆಟ್ ರೈಲುಗಳ ಉತ್ತೇಜನದ ಹೊರತಾಗಿ, ಮುಂಬರುವ ವರ್ಷಗಳಲ್ಲಿ ರೈಲುಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಕೆಲಸ ಮಾಡಲಿದೆ ಎಂದು ಸಿಂಧಿಯಾ ಹೇಳಿದರು.
'ಹೊಸ ಯುಗ' ಎಂದ ಸಿಂಧಿಯಾ
2014ಕ್ಕಿಂತ ಮೊದಲು ದೇಶಕ್ಕೆ ನಾಯಕತ್ವ ಮತ್ತು ದೂರದೃಷ್ಟಿಯ ಕೊರತೆ ಇತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ 2014 ರಿಂದ ಭಾರತವು ಹೊಸ ಹಂತದ ಬೆಳವಣಿಗೆಯನ್ನು ಪ್ರಾರಂಭಿಸಿದೆ ಎಂದು ಸಚಿವರು ಹೇಳಿದರು. "ದೇಶದಲ್ಲಿ ದೂರದೃಷ್ಟಿ ಮತ್ತು ನಾಯಕತ್ವದ ಕೊರತೆ ಇತ್ತು. 2014 ರಲ್ಲಿ ಹೊಸ ಹಂತ ಪ್ರಾರಂಭವಾಯಿತು. 10 ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆ ನಡೆಯುತ್ತಿದೆ," ಎಂದರು.
ಪ್ರಯಾಣಿಕರ ಆಸಕ್ತಿಗೆ ಒತ್ತು
ಕಾರ್ಯನಿರತ ವಲಯಗಳಲ್ಲಿನ ಬೇಡಿಕೆ-ಪೂರೈಕೆ ಅಂತರವನ್ನು ಪರಿಹರಿಸಲು, ವೈಡ್‌ಬಾಡಿ ಪ್ಲೇನ್‌ಗಳು ಸೇರಿದಂತೆ ಹೆಚ್ಚಿನ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹಾರಾಟದ ಕಾರ್ಯಾಚರಣೆಯನ್ನು ಹೆಚ್ಚಿಸಲು ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರದ ಉತ್ತೇಜನವನ್ನು ಸಿಂಧಿಯಾ ವಿವರಿಸಿದರು.
ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆಯ ಸಮಯದಲ್ಲಿ, ಸಿಂಧಿಯಾ ಸ್ವಯಂ ನಿಯಂತ್ರಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ವಿಮಾನಯಾನ ದರಗಳನ್ನು ನಿಗದಿಪಡಿಸುವಾಗ ಪ್ರಯಾಣಿಕರ ಹಿತಾಸಕ್ತಿಗಳನ್ನು ಪರಿಗಣಿಸಲು ವಿಮಾನಯಾನ ಸಂಸ್ಥೆಗಳನ್ನು ಒತ್ತಾಯಿಸಿದರು.
2014ರಲ್ಲಿ 6 ಕೋಟಿ ಇದ್ದ ವಿಮಾನ ಪ್ರಯಾಣಿಕರ ಸಂಖ್ಯೆ ಸದ್ಯ 14.5 ಕೋಟಿಗೆ ಏರಿಕೆಯಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಪ್ರಸ್ತುತ ವಿಮಾನ ದರಗಳು ಭಾರತೀಯ ರೈಲ್ವೆಯ ಎಸಿ ಫಸ್ಟ್ ಕ್ಲಾಸ್‌ನೊಂದಿಗೆ ಸ್ಪರ್ಧಾತ್ಮಕವಾಗಿವೆ ಎಂದು ಸಿಂಧಿಯಾ ಉಲ್ಲೇಖಿಸಿದರು. ವಿಮಾನಯಾನ ದರ ಮತ್ತಷ್ಟು ಏರಿಕೆಯ ಊಹೆ ಮಾಡಿದರು.


Click it and Unblock the Notifications