ಭಾರತೀಯ ರೈಲ್ವೆಗೆ 1490 ಕೋಟಿ ರುಪಾಯಿ ಆದಾಯ ನಷ್ಟ

ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಇಪ್ಪತ್ತೊಂದು ದಿನ ಲಾಕ್ ಡೌನ್ ಘೋಷಣೆ ಆಗಿತ್ತು. ಅದೀಗ ಮೇ ಮೂರರ ತನಕ ಮುಂದುವರಿದಿದೆ. ಲಾಕ್ ಡೌನ್ ಕಾರಣಕ್ಕೆ ಭಾರತೀಯ ರೈಲ್ವೆ ಇಲಾಖೆಯಲ್ಲಿ 94 ಲಕ್ಷ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ 1490 ಕೋಟಿ ರುಪಾಯಿ ಆದಾಯವನ್ನು ರೈಲ್ವೆ ಇಲಾಖೆ ಕಳೆದುಕೊಂಡಿದ್ದು, ಟಿಕೆಟ್ ರೀಫಂಡ್ ಮಾಡುತ್ತಿದೆ.

ಮಾರ್ಚ್ 22ರಿಂದ ಏಪ್ರಿಲ್ 14ರ ಮಧ್ಯೆ 55 ಲಕ್ಷ ಟಿಕೆಟ್ ಬುಕ್ಕಿಂಗ್ ಆಗಿದ್ದು, ಲಾಕ್ ಡೌನ್ ಕಾರಣಕ್ಕೆ ದೇಶದಾದ್ಯಂತ ರೈಲು ಸಂಚಾರ ಸ್ಥಗಿತ ಆಗಿತ್ತು. ಆ ಟಿಕೆಟ್ ಹಣವನ್ನು ಹಿಂತಿರುಗಿಸಬೇಕು.

ಜತೆಗೆ ಲಾಕ್ ಡೌನ್ ಮತ್ತೆ ಮುಂದುವರಿದಿದ್ದರಿಂದ ಏಪ್ರಿಲ್ 15ರಿಂದ ಮೇ 3ನೇ ತಾರೀಕಿನ ಮಧ್ಯೆ 39 ಲಕ್ಷ ಟಿಕೆಟ್ ರದ್ದು ಮಾಡಲಾಗಿದೆ. ಈ ಕಾರಣಕ್ಕೆ 660 ಕೋಟಿ ರುಪಾಯಿ ರೀಫಂಡ್ ಆಗಬೇಕಿದೆ. ಆನ್ ಲೈನ್ ಗ್ರಾಹಕರ ಭಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಇನ್ನು ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಜುಲೈ 31ನೇ ತಾರೀಕಿನ ತನಕ ವಾಪಸ್ ಪಡೆಯಲು ಅವಕಾಶ ಇದೆ.

ಭಾರತೀಯ ರೈಲ್ವೆಗೆ 1490 ಕೋಟಿ ರುಪಾಯಿ ಆದಾಯ ನಷ್ಟ

ಭಾರತೀಯ ರೈಲ್ವೆ ಇಲಾಖೆಯಿಂದ ದೇಶದಾದ್ಯಂತ 15 ಸಾವಿರ ಪ್ರಯಾಣಿಕರ ರೈಲುಗಳು ನಿತ್ಯ ಸಂಚರಿಸುತ್ತವೆ. ನಿತ್ಯ 2 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಮುಂದಿನ ಆದೇಶದ ತನಕ ಇ ಟಿಕೆಟ್ ಸೇರಿದಂತೆ ಯಾವುದೇ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಮಾಡದಿರಲು ರೈಲ್ವೆ ಇಲಾಖೆಯಿಂದ ನಿರ್ಧರಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+