ಬೆಂಗಳೂರು, ಜುಲೈ 9: ಎರಡು ಆಧುನಿಕ ನಾನ್-ಎಸಿ ಅಮೃತ್ ಭಾರತ್ ರೈಲುಗಳನ್ನು ಚಾಲನೆಗೊಂಡ ನಂತರ ಭಾರತೀಯ ರೈಲ್ವೇಯು ಈ ವಿಭಾಗದಲ್ಲಿ ಪ್ರಯಾಣಿಕರ ಅಗತ್ಯತೆಯನ್ನು ಮನಗಂಡು ಇನ್ನೂ 200 ಅಂತಹ ರೈಲುಗಳ ಉತ್ಪಾದನೆಯನ್ನು ಪ್ರಾರಂಭಿಸಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, 50 ರೈಲುಗಳ ಉತ್ಪಾದನೆ ಈಗಾಗಲೇ ಮುಂಗಡ ಹಂತದಲ್ಲಿದ್ದು, ಇನ್ನೂ 150 ರೈಲುಗಳು ಉತ್ಪಾದನೆ ಹಂತದಲ್ಲಿವೆ ಎಂದು ಹೇಳಿದರು.

22-ಬೋಗಿಗಳ ಅಮೃತ್ ಭಾರತ್ ರೈಲು 11 ಸ್ಲೀಪರ್ ಮತ್ತು 11 ಕಾಯ್ದಿರಿಸದ ಕೋಚ್‌ಗಳನ್ನು ಒಳಗೊಂಡಿದೆ, ಇದು ಭಾರತೀಯ ರೈಲ್ವೆಯ 95% ಕ್ಕಿಂತ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಬಡ, ಮಧ್ಯಮ ವರ್ಗದ ಜನರ ಬೇಡಿಕೆಯನ್ನು ಪೂರೈಸಲು ತಯಾರಾಗುತ್ತಿದೆ. ಎಸಿ ವಿಭಾಗದ ಪ್ರಯಾಣಿಕರ ದಟ್ಟಣೆಯು ಸುಮಾರು 5% ಆಗಿದೆ. ಸಾಮಾನ್ಯ ಜನರಲ್ಲಿ ನಾನ್-ಎಸಿ ವಿಭಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ.
"ನಮ್ಮ ಆದ್ಯತೆಯು ಬಡ, ಮಧ್ಯಮ ವರ್ಗದ ಜನರು ನಮ್ಮ ಪ್ರಯಾಣಿಕರ ವಿಭಾಗದ ಪ್ರಮುಖ ಭಾಗವಾಗಿದೆ. ಅವರಿಗಾಗಿ ಮತ್ತು ಅವರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಗಮನಹರಿಸಿದ್ದೇವೆ ಎಂದು ಸಚಿವರು ಹೇಳಿದರು.
ಡಿಸೆಂಬರ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡಾ ಮತ್ತು ದರ್ಭಾಂಗಾದಿಂದ ಎರಡು ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. LHB (Linke-Hofmann-Busch) ಪುಶ್-ಪುಲ್ ತಂತ್ರಜ್ಞಾನವನ್ನು ಒಳಗೊಂಡಿರುವ ಅಮೃತ್ ಭಾರತ್ ರೈಲುಗಳು, ಸುಧಾರಿತ ವೇಗವರ್ಧನೆಗಾಗಿ ಎರಡೂ ತುದಿಗಳಲ್ಲಿ ಇಂಜಿನ್‌ಗಳನ್ನು ಹೊಂದಿವೆ.
ಸುಮಾರು 2,500 ಹೊಸ ಸಾಮಾನ್ಯ ಪ್ರಯಾಣಿಕ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 2025 ರ ವೇಳೆಗೆ ಇನ್ನೂ 10,000 ಕೋಚ್‌ಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದ್ದಾರೆ. ವಂದೇ ಭಾರತ್ ಎಸಿ ರೈಲುಗಳ ಉತ್ಪಾದನೆಯನ್ನು ಹೆಚ್ಚಿಸುವ ವೆಚ್ಚದಲ್ಲಿ ಸಾಮಾನ್ಯ ಕೋಚ್‌ಗಳ ಉತ್ಪಾದನೆಯನ್ನು ಸರ್ಕಾರ ಕಡಿಮೆ ಮಾಡುವ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ರೈಲ್ವೆ ಸಚಿವಾಲಯದ ಯೋಜನೆಯ ಪ್ರಕಾರ, 2025 ರಲ್ಲಿ 4,485 ನಾನ್-ಎಸಿ ಕೋಚ್‌ಗಳನ್ನು ಮತ್ತು 2026 ರಲ್ಲಿ ಹೆಚ್ಚುವರಿ 5,444 ಕೋಚ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ರೈಲ್ವೆಯು 5,300 ಸಾಮಾನ್ಯ ಬೋಗಿಗಳನ್ನು ಹೊರತರಲು ಯೋಜಿಸಿದೆ.


Click it and Unblock the Notifications