For Quick Alerts
ALLOW NOTIFICATIONS  
For Daily Alerts

Job Alert: 1.6 ಲಕ್ಷ ಭಾರತೀಯ ರೈಲ್ವೆ ಹುದ್ದೆಗಳಿಗೆ ಶೀಘ್ರ ನೇಮಕಾತಿ

|

ವಿಶ್ವದ ಬಹುದೊಡ್ಡ ರೈಲ್ವೆ ಇಲಾಖೆಗಳಲ್ಲಿ ಒಂದಾದ ಭಾರತೀಯ ರೈಲ್ವೆ ಸದ್ಯದಲ್ಲೇ ಮೆಗಾ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. ಡಿಸೆಂಬರ್ 15 ರಿಂದ ಪ್ರಾರಂಭವಾಗುವ ತನ್ನ ಮೆಗಾ ನೇಮಕಾತಿ ಚಾಲನೆಯಲ್ಲಿ 1.4 ಲಕ್ಷ ಖಾಲಿ ಹುದ್ದೆಗಳಿಗೆ 2.4 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ವಿವಿಧ ನಗರಗಳಿಂದ ಭಾಗವಹಿಸಲಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಡುವೆ ನೇಮಕಾತಿ ಪ್ರಕ್ರಿಯೆಯು ಸವಾಲಾಗಿದ್ದು, ಮೂರು ಹಂತಗಳಲ್ಲಿ ನಡೆಸಲಾಗುವುದು. ಈ ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ನಡೆಸಲು ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ವ್ಯಾಪಕ ಸಿದ್ಧತೆಗಳನ್ನು ಮಾಡಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ದಿನಕ್ಕೆ ಕೇವಲ ಎರಡು ಪಾಳಿಗಳಿಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದು, ಸಾಮಾಜಿಕ ದೂರ, ಮಾಸ್ಕ್‌ ಕಡ್ಡಾಯ ಬಳಕೆ, ಸ್ಯಾನಿಟೈಸರ್ ಮತ್ತು ಶಿಫ್ಟ್‌ಗಳನ್ನು ಕಡಿತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನಿಗದಿಪಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಆರ್‌ಆರ್‌ಬಿಗಳು ಅನುಸರಿಸಲಿವೆ.

 Job Alert: 1.6 ಲಕ್ಷ ಭಾರತೀಯ ರೈಲ್ವೆ ಹುದ್ದೆಗಳಿಗೆ ಶೀಘ್ರ ನೇಮಕಾತಿ

ಸಾಂಕ್ರಾಮಿಕ ರೋಗದಿಂದಾಗಿ ನಿರ್ಬಂಧಗಳು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಆರ್‌ಬಿಗಳು ಸಾಧ್ಯವಾದಷ್ಟು ಮಟ್ಟಿಗೆ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಅವರ ರಾಜ್ಯದಲ್ಲಿಯೇ ಅವಕಾಶ ಕಲ್ಪಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಮಹಿಳೆಯರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ತಮ್ಮ ರಾಜ್ಯಗಳಲ್ಲೇ ಅವಕಾಶ ಕಲ್ಪಿಸಲಾಗುತ್ತಿದೆ.

English summary

Indian Railways To Begin Recruitment Process For 1.6 Lakh Vacancies

The Indian Railways is starting its hiring process. In its mega recruitment drive, starting December 15, more than 2.4 crore candidates are appearing from different cities
Story first published: Saturday, December 12, 2020, 18:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X