ಭಾರತೀಯ ರೈಲ್ವೇಯು ಪಾಟ್ನಾ ಜಂಕ್ಷನ್ ಸೇರಿದಂತೆ ಪೂರ್ವ ಕೇಂದ್ರ ರೈಲ್ವೆಯ ದನಾಪುರ ವಿಭಾಗದ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಎಐ (artificial intelligence) ಚಾಲಿತ ಮುಖ ಗುರುತಿಸುವಿಕೆ ಸಿಸ್ಟಮ್ ಅನ್ನು ಅಳವಡಿಸಲು ಯೋಜಿಸಿದೆ. ಈ ವ್ಯವಸ್ಥೆಗಳು ಕ್ರಿಮಿನಲ್ ದಾಖಲೆಗಳ ಡೇಟಾಬೇಸ್‌ಗೆ ಲಿಂಕ್ ಮಾಡಲಾಗುತ್ತದೆ. ಇದರಿಂದಾಗಿ ಕ್ರಿಮಿನಲ್‌ಗಳ ಪತ್ತೆಗೆ ಸಹಕಾರಿಯಾಗಲಿದೆ ಎಂದು ವರದಿ ಹೇಳಿದೆ.
ಸಾಮಾನ್ಯ ಜನರ ಡೇಟಾವನ್ನು ಇದು ಹೊಂದಿರಲಾರದು. ಬದಲಾಗಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವಾಟೆಂಡ್ ವ್ಯಕ್ತಿಗಳ ದಾಖಲೆಗಳನ್ನು ಇದು ಹೊಂದಿರುತ್ತದೆ. ವಾಂಟೆಡ್ ವ್ಯಕ್ತಿಗಳನ್ನು ಗುರುತಿಸಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಅಪರಾಧವನ್ನು ತಡೆಯಲು ಈ ಎಐ ಆಧಾರಿತ ಮುಖ ಗುರುತಿಸುವಿಕೆ ಸಿಸ್ಟಮ್ ಸಹಾಯ ಮಾಡಲಿದೆ. ವರದಿ ಪ್ರಕಾರ ಭಾರತೀಯ ರೈಲ್ವೆಯ ಈ ಕ್ರಮವು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಭಾರತೀಯ ರೈಲ್ವೆಯ ಪ್ರಯತ್ನಗಳಲ್ಲಿ ಒಂದು ಭಾಗವಾಗಿದೆ.

ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಹೇಳುವುದೇನು?
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಇಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬೀರೇಂದ್ರ ಕುಮಾರ್ ಮಾತನಾಡಿ, "ಭಾರತೀಯ ರೈಲ್ವೆಯು ತಮ್ಮ ಪ್ರಯಾಣದ ಸಮಯದಲ್ಲಿ ಮತ್ತು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಪಾಟ್ನಾ ಜಂಕ್ಷನ್ ಪ್ರಮುಖ ರೈಲ್ವೆ ಹಬ್ ಆಗಿದ್ದು, ಪ್ರತಿದಿನ ಸುಮಾರು 3 ರಿಂದ 4 ಲಕ್ಷ ಪ್ರಯಾಣಿಕರು ಬರುತ್ತಾರೆ," ಎಂದು ತಿಳಿಸಿದ್ದಾರೆ.
"ಲಕ್ಷಾಂತರ ಜನರ ಪ್ರತಿ ದಿನ ಪ್ರಯಾಣ ಮಾಡುವ ಪಾಟ್ನಾ ಜಂಕ್ಷನ್‌ನಲ್ಲಿ ವಿಮಾನ ನಿಲ್ದಾಣಗಳಿಗೆ ಸರಿಸಮನಾಗಿ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲು ರೈಲ್ವೆ ಯೋಜಿಸಿದೆ. ರೈಲ್ವೆ ಆವರಣದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ಸಹಕಾರಿಯಾಗಿದೆ," ಎಂದು ಹೇಳಿದರು.
ಕನಿಷ್ಠ 200 ನಿಲ್ದಾಣಗಳಲ್ಲಿ ಭದ್ರತೆಯ ಕೂಲಂಕುಷ ಪರೀಕ್ಷೆ
ಈಸ್ಟ್ ಸೆಂಟ್ರಲ್ ರೈಲ್ವೇ (ಇಸಿಆರ್) ವ್ಯಾಪ್ತಿಯಲ್ಲಿರುವ ಕೆಲವನ್ನು ಒಳಗೊಂಡಂತೆ ಕನಿಷ್ಠ 200 ನಿಲ್ದಾಣಗಳ ಭದ್ರತೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಇದು ಭಯೋತ್ಪಾದಕರು, ಮಾವೋವಾದಿ ಸಂಘಟನೆಗಳು ಮತ್ತು ನಿತ್ಯದ ಅಪರಾಧಿಗಳಿಂದ ಹೆಚ್ಚುತ್ತಿರುವ ನಡುವೆ ಕೈಗೊಂಡ ಕ್ರಮವಾಗಿದೆ. ಭದ್ರತಾ ಕ್ರಮಗಳು ಮುಖ ಗುರುತಿಸುವಿಕೆ ವ್ಯವಸ್ಥೆಗಳು (ಎಫ್‌ಆರ್‌ಎಸ್), ಲಗೇಜ್ ಸ್ಕ್ಯಾನರ್‌ಗಳು, ಸ್ನಿಫರ್‌ಗಳು ಮತ್ತು ಲಗೇಜ್ ಚೆಕ್ ವೆರಿಫಿಕೇಷನ್ ಕೂಡಾ ಒಳಗೊಂಡಿರುತ್ತದೆ.
ಆರ್‌ಪಿಎಫ್ ಭಯೋತ್ಪಾದಕರು ಮತ್ತು ಮಾವೋವಾದಿಗಳಿಂದ ಬೆದರಿಕೆ
ಪ್ರಯಾಣಿಕರನ್ನು ಹಾನಿಯಿಂದ ರಕ್ಷಿಸಲು ಈ ಭದ್ರತಾ ಕ್ರಮಗಳು ತುರ್ತಾಗಿ ಅಗತ್ಯವಿದೆ ಎಂದು ಹಿರಿಯ ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶೇಷವಾಗಿ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಭಯೋತ್ಪಾದಕರು ಮತ್ತು ಮಾವೋವಾದಿಗಳಿಂದ ಬೆದರಿಕೆಗಳು ಬರುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ರೈಲ್ವೆ ಬದ್ಧವಾಗಿದೆ ಎಂದು ಅಧಿಕಾರಿ ಹೇಳಿದರು.


Click it and Unblock the Notifications