ಪ್ರಸ್ತುತ ಎಲ್ಲವೂ ಕೂಡಾ ದುಬಾರಿಯಾಗಿದೆ. ಹೀಗಿರುವಾಗ ಭಾರತೀಯ ರೈಲ್ವೆಯು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ಬಾಟಲಿ ನೀರು ನೀಡಲು ನಿರ್ಧಾರ ಮಾಡಿದೆ. ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಸಾಮಾನ್ಯ ಕೋಚ್ ಪ್ರಯಾಣಿಕರಿಗೆ ವಿಶೇಷವಾಗಿ ಕಡಿಮೆ ದರದಲ್ಲಿ ಊಟ ಹಾಗೂ ನೀರನ್ನು ರೈಲ್ವೆ ನೀಡುತ್ತದೆ. ಅದು ಕೂಡಾ ಬರಿ 20 ರೂಪಾಯಿ ಎಂದರೆ ನೀವು ನಂಬುವಿರಾ?
ಹೌದು, ಭಾರತೀಯ ರೈಲ್ವೆಯು ಕಡಿಮೆ ದರದಲ್ಲಿ ಆಹಾರವನ್ನು ನೀಡಲಿದೆ. ರೈಲ್ವೆ ಮಂಡಳಿಯು ಹೊರಡಿಸಿದ ಆದೇಶದ ಪ್ರಕಾರ, ಈ ಊಟಗಳನ್ನು ಪೂರೈಸುವ ಕೌಂಟರ್‌ಗಳನ್ನು ಜನರಲ್ ಕೋಚ್‌ಗಳಿಗೆ ಹೊಂದಿಕೆಯಾಗುವ ಪ್ಲಾಟ್‌ಫಾರ್ಮ್‌ಗಳಲ್ಲಿ ಇರಿಸಲಾಗುತ್ತದೆ. ಆಹಾರವನ್ನು ಎರಡು ವರ್ಗವಾಗಿ ವಿಂಗಡನೆ ಮಾಡಲಾಗಿದೆ. ರೈಲಿನಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುವ ಆಹಾರದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ.....

ಎರಡು ವರ್ಗದಲ್ಲಿ ಆಹಾರ ಲಭ್ಯ
ಮೊದಲ ವಿಧದಲ್ಲಿ ಏಳು ಪೂರಿಗಳು, ಆಲೂಗಡ್ಡೆ ಪಲ್ಯ, ಉಪ್ಪಿನಕಾಯಿಯು ಬರೀ ಇಪ್ಪತ್ತು ರೂಪಾಯಿಗೆ ಲಭ್ಯವಾಗುತ್ತದೆ. ಇನ್ನು ಎರಡನೇ ವಿಧದಲ್ಲಿ 50 ರೂಪಾಯಿಗೆ ಪ್ರಯಾಣಿಕರಿಗೆ ಅನ್ನ, ರಾಜ್ಮಾ, ಚೋಲೆ, ಭಟೂರೆ, ಖಿಚಡಿ ಕುಲ್ಚೆ, ಪಾವೊ-ಭಾಜಿ, ಮಸಾಲೆ ದೋಸೆಯಂತಹ ದಕ್ಷಿಣ ಭಾರತದ ಆಹಾರಗಳು ಲಭ್ಯವಾಗುತ್ತದೆ. ಜಿಎಸ್ ಕೋಚ್‌ಗಳ ಬಳಿ ಇರುವ ಪ್ಲಾಟ್‌ಫಾರ್ಮ್‌ನಲ್ಲಿ ಇರುವ ಕೌಂಟರ್‌ಗಳ ಮೂಲಕ ಊಟ ಮತ್ತು ಕಡಿಮೆ ದರದಲ್ಲಿ ನೀರಿನ ಬಾಟಲಿ ಒದಗಿಸುವಂತೆ ರೈಲ್ವೆ ಮಂಡಳಿಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ.
ಜಿಎಸ್ ಕೋಚ್ ಎಂದರೆ ಜನರಲ್ ಸೀಟಿಂಗ್ ಕೋಚ್‌ಗಳು ಆಗಿದೆ. ಇದು ದ್ವಿತೀಯ ದರ್ಜೆಯ ರಿಸರ್ವ್ ಮಾಡಿರದ ಕೋಚ್ ಆಗಿದೆ. ಸಾಮಾನ್ಯವಾಗಿ ಎಲ್ಲ ರೈಲಿನಲ್ಲಿ ಮೇಲ್/ ಎಕ್ಸ್‌ಪ್ರೆಸ್ ರೈಲುಗಳು ಇರುತ್ತದೆ, ಕಡಿಮೆ ಎಂದರೆ ಎರಡು ಕೋಚ್‌ಗಳಾದರೂ ಇರುತ್ತದೆ. ಒಂದು ಮುಂಭಾಗದಲ್ಲಿ ಒಂದು ಕೊನೆಯಲ್ಲಿ ಇರುತ್ತದೆ. ಕೌಂಟರ್‌ನಿಂದ ಖರೀದಿಸಿದ ಜನರಲ್/ಅನ್ ರಿಸರ್ವ್ ಟಿಕೆಟ್ ಹೊಂದಿರುವ ಯಾರಾದರೂ ಆ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು. ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ ಊಟವನ್ನು ಪೂರೈಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಐಆರ್‌ಸಿಟಿಸಿಯ ಆಹಾರ ಮೆನ್ಯೂ ದರ
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಎಲ್ಲಾ ಸ್ಟಾಲ್‌ಗಳು ಮತ್ತು ಪ್ಯಾಂಟ್ರಿ ಕಾರುಗಳು ಒಂದು ಲೀಟರ್‌ನ ರೇಲ್ ನೀರ್ ನೀರಿನ ಬಾಟಲಿಗಳನ್ನು 20 ರೂಪಾಯಿ ಬದಲಾಗಿ 15 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಅದಕ್ಕಿಂತ ಹೆಚ್ಚುವರಿ ಶುಲ್ಕವನ್ನು ವಿಧಿಸಿದರೆ, ಯಾವುದೇ ನಿಲ್ಧಾನದಲ್ಲಿ ಅಥವಾ ಆನ್‌ಲೈನ್‌ನಲ್ಲಿ ದೂರು ದಾಖಲು ಮಾಡಬಹುದಾಗಿದೆ.
ಕಡಿಮೆ ಬೆಲೆಯಲ್ಲಿ ಬಿರಿಯಾನಿ ಲಭ್ಯ
ಇನ್ನು ನಾವು ರೈಲಿನಲ್ಲಿ ಪ್ರಯಾಣ ಮಾಡುವಾಗ ಬಿರಿಯಾನಿ ಖರೀದಿಸಿ ಸೇವಿಸುವುದು ಸಾಮಾನ್ಯವಾಗಿರುಯತ್ತದೆ. ರೈಲಿನಲ್ಲಿ ಬಿರಿಯಾನಿ ಜನಪ್ರಿಯವಾಗಿರುವ ಕಾರಣದಿಂದಾಗಿ ಬಿರಿಯಾನಿಯನ್ನು ಕೂಡಾ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಬಿರಿಯಾನಿಯ ದರ ಹಾಗೂ ತೂಕದ ಬಗ್ಗೆ ಈ ಕೆಳಗಿದೆ ವಿವರ.....
ಬಿರಿಯಾನಿಗೆ ಇರುವ ದರ ಎಷ್ಟಿದೆ?
* ವೆಜ್ ಬಿರಿಯಾನಿ 350 ಗ್ರಾಂ 70 ರೂಪಾಯಿ
* ಮೊಟ್ಟೆ ಬಿರಿಯಾನಿ 350 ಗ್ರಾಂ 80 ರೂಪಾಯಿ
* ಕೋಳಿ ಬಿರಿಯಾನಿ 350 ಗ್ರಾಂ 100 ರೂಪಾಯಿ
ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರಿಗೆ, ಜನತಾ ಊಟದ ಪ್ರಸ್ತುತ ವೆಚ್ಚ (7 ಪೂರಿಗಳು- 175 ಗ್ರಾಂ, ಒಣ ಆಲೂಗಡ್ಡೆ ಪದಾರ್ಥ - 150 ಗ್ರಾಂ, ಉಪ್ಪಿನಕಾಯಿಯೊಂದಿಗೆ) 20 ರೂಪಾಯಿ ಆಗಿರುತ್ತದೆ. ಐಆರ್‌ಸಿಟಿಸಿ ಕೂಡಾ ರೈಲುಗಳಲ್ಲಿ ಜನತಾ ಊಟ ಲಭ್ಯವಾಗುವಂತೆ ಮಾಡುತ್ತದೆ. ಸ್ನ್ಯಾಕ್ ಮೀಲ್ ಕೂಡಾ ಪರಿಚಯಿಸಲು ರೈಲ್ವೆ ನಿರ್ಧಾರ ಮಾಡಿದೆ. 350 ಗ್ರಾಂ ಸ್ನ್ಯಾಕ್ ಮೀಲ್ 50 ರೂಪಾಯಿಗೆ ಲಭ್ಯವಾಗುತ್ತದೆ. ಸ್ನ್ಯಾಕ್ ಮೀಲ್‌ನ ಸೈಡ್ ಡಿಶ್‌ಗಳಾದ ರೈತಾ, ಉಪ್ಪಿನಕಾಯಿ, ಸಲಾಡ್, ಹಪ್ಪಳವನ್ನು ಐಆರ್‌ಸಿಟಿಸಿ ನಿರ್ಧಾರ ಮಾಡುತ್ತದೆ.


Click it and Unblock the Notifications