For Quick Alerts
ALLOW NOTIFICATIONS  
For Daily Alerts

ಆರ್‌ಬಿಐನ AAFಗೆ ಒಳಪಟ್ಟ ಮೊಟ್ಟ ಮೊದಲ ಬ್ಯಾಂಕ್ ಯಾವ್ದು?

|

ಭಾರತೀಯ ರಿಸರ್ವ್ ಬ್ಯಾಂಕ್(RBI) ಹೊಚ್ಚ ಹೊಸ ವಿಧಾನವನ್ನು ಪರಿಚಯಿಸುತ್ತಿದ್ದು, ಇದನ್ನು Account Aggregator Framework ಎಂದು ಕರೆಯಲಾಗುತ್ತಿದೆ. ಈ ವಿಧಾನಕ್ಕೆ ಒಳಪಡುತ್ತಿರುವ ಮೊಟ್ಟ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಇಂಡಸ್ಇಂಡ್ ಬ್ಯಾಂಕ್ ಪಾತ್ರವಾಗಿದೆ.

ಈ ವಿಧಾನದ ಮೂಲಕ ವಿತ್ತೀಯ ಮಾಹಿತಿದಾರ(FIP) ಎಂದು ಇಂಡಸ್ಇಂಡ್ ಬ್ಯಾಂಕ್ ಗುರುತಿಸಿಕೊಳ್ಳಲಿದೆ. ಈ ಮೂಲಕ ಗ್ರಾಹಕರು ತಮ್ಮ ಖಾತೆ ವಿವರ, ಜಮಾಬಂದಿ, ಹೂಡಿಕೆ ಯೋಜನೆ(ಷೇರು, ವಿಮೆ, ಪಿಪಿಎಫ್, ಇಪಿಎಫ್, ಮ್ಯೂಚುವಲ್ ಫಂಡ್), ಕ್ರೆಡಿಟ್ ಕಾರ್ಡ್ ..ಇತ್ಯಾದಿ ಬಗ್ಗೆ ಒಂದೇ ವೇದಿಕೆಯಲ್ಲಿ ಪಡೆದುಕೊಳ್ಳಬಹುದು. ಆರ್ಥಿಕ ವ್ಯವಹಾರಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಸುಲಭ, ಸರಳವಾಗಿ ತೆಗೆದುಕೊಳ್ಳಲು ಸಹಕಾರಿಯಾಗಲಿದೆ.

''ಈ ವೇದಿಕೆಯು ವೈಯಕ್ತಿಕ, ಸಣ್ಣ ಹಾಗೂ ಮಧ್ಯಮ ವ್ಯವಹಾರಿಕ ಸೇವೆಗಳಿಗೂ ಲಭ್ಯವಾಗಲಿದೆ. ಗ್ರಾಹಕರಿಗೆ ಹೆಚ್ಚಿನ ಮಾಹಿತಿ ಹಾಗೂ ಸಂವಹನ ಸಾಧ್ಯತೆಯನ್ನು ತಂತ್ರಜ್ಞಾನದ ಮೂಲಕ ಒದಗಿಸಲು ಈ ವೇದಿಕೆ ಸಹಕಾರಿಯಾಗಿದೆ'' ಎಂದು ಇಂಡಸ್ಇಂಡ್ ಬ್ಯಾಂಕಿನ ಗ್ರಾಹಕ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥ ಸೌಮಿತ್ರಾ ಸೇನ್ ಹೇಳಿದ್ದಾರೆ.

ಆರ್‌ಬಿಐನ AAFಗೆ ಒಳಪಟ್ಟ ಮೊಟ್ಟ ಮೊದಲ ಬ್ಯಾಂಕ್ ಯಾವ್ದು?

Account Aggregator ಪ್ರಯೋಜನವೇನು?
ಕಾಗದ ರಹಿತ ಕಚೇರಿ ಸಾಧ್ಯತೆ ಹೆಚ್ಚಿಸಲಿದೆ, ಡಿಜಿಟಲ್ ವ್ಯವಹಾರ, ನಿಗದಿತ ಸಮಯದಲ್ಲಿ ವಹಿವಾಟು ಸಾಧ್ಯ
ಡಿಜಿಟಲ್ ಮಾದರಿಯಲ್ಲಿ ವಿತ್ತೀಯ ಮಾಹಿತಿ ಲಭ್ಯವಾಗಲಿದ್ದು, ಬ್ಯಾಂಕ್ ,ಎನ್ ಬಿ ಎಫ್ ಸಿ ಇತ್ಯಾದಿ ಜೊತೆ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಆರ್ಥಿಕ ಮಾಹಿತಿಯನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗಲಿದೆ

1994ರಿಂದ ಕಾರ್ಯ ನಿರ್ವಹಿಸುತ್ತಿರುವ ಇಂಡಸ್ಇಂಡ್ ಬ್ಯಾಂಕ್ ಜೂನ್ 30, 2020ರಂತೆ ಒಟ್ಟು 1911 ಬ್ರ್ಯಾಂಚ್/ ಬ್ಯಾಂಕಿಂಗ್ ಔಟ್ ಲೇಟ್ ಹೊಂದಿದೆ. 2721 ಎಟಿಎಂಗಳನ್ನು ದೇಶದ 751 ತಾಣಗಳಲ್ಲಿ ಹೊಂದಿದೆ.

"ಇಂಡಸ್ ಇಂಡ್ ಬ್ಯಾಂಕ್ ಈ ವೇದಿಕೆ ಒಗ್ಗಿಕೊಳ್ಳುತ್ತಿರುವ ಮೊದಲ ಬ್ಯಾಂಕ್ ಆಗಿರುವುದರಲ್ಲಿ ಆಶ್ಚರ್ಯ ಎಂದೆನಿಸುತ್ತಿಲ್ಲ. ಮುಂದುವರೆದ ತಂತ್ರಜ್ಞಾನಕ್ಕೆ ತಕ್ಕಂತೆ ಭಾರತದ ಆರ್ಥಿಕ ಮಾರುಕಟ್ಟೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿನ ವೈವಿಧ್ಯತೆ ಹಾಗೂ ಅತ್ಯಾಧುನಿಕ ಉತ್ಪನ್ನಗಳ ಬಗ್ಗೆ ತಿಳಿದು ಅಳವಡಿಸಿಕೊಳ್ಳುವ ಮೊದಲ ಅವಕಾಶ ಪಡೆದುಕೊಳ್ಳುತ್ತಿದ್ದಾರೆ'' ಎಂದು ಡಿಜಿ ಸಹಮತಿ(https://sahamati.org.in/ ) ಸಂಸ್ಥೆಯ ಸಹ ಸ್ಥಾಪಕ ಬಿ.ಜಿ ಮಹೇಶ್ ಪ್ರತಿಕ್ರಿಯಿಸಿದ್ದಾರೆ.

English summary

IndusInd Bank first bank to go live on RBI’s 'Account Aggregator Framework'

IndusInd Bank has become first bank in the country to gone live as a ‘Financial Information Provider’ (FIP) under the new ‘Account Aggregator Framework’ of the Reserve Bank of India (RBI).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X