ಇನ್ಫೋಸಿಸ್‌ಗೆ 5.6 ಕೋಟಿ ರುಪಾಯಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾ

ಭಾರತದ ಬೃಹತ್ ಐಟಿ ಉದ್ಯಮಗಳಲ್ಲಿ ಒಂದಾದ ಇನ್ಫೋಸಿಸ್‌ಗೆ, ಕ್ಯಾಲಿಫೋರ್ನಿಯಾ ಸರ್ಕಾರ ತೆರಿಗೆ ವಂಚಿಸಿದ ಆರೋಪದ ಮೇಲೆ ಭಾರೀ ಪ್ರಮಾಣದ ದಂಡ ವಿಧಿಸಿದೆ.

ವೀಸಾ ನಿಯಮ ಉಲ್ಲಂಘನೆ ಮತ್ತು ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಇನ್ಫೋಸಿಸ್‌ಗೆ 8 ಲಕ್ಷ ಅಮೆರಿಕನ್ ಡಾಲರ್ (ಸುಮಾರು 5.6 ಕೋಟಿ ರುಪಾಯಿ) ದಂಡ ವಿಧಿಸಿದ್ದು, ಇಷ್ಟು ದೊಡ್ಡ ಮೊತ್ತದ ದಂಡವನ್ನು ಕಟ್ಟಿಕೊಡಬೇಕಿದೆ.

ಇನ್ಫೋಸಿಸ್‌ಗೆ 5.6 ಕೋಟಿ ರುಪಾಯಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾ

ಇನ್ಫೋಸಿಸ್ 2006 ರಿಂದ 2017ರ ನಡುವೆ ಸುಳ್ಳು ವೀಸಾದಡಿ ಸುಮಾರು 500 ಉದ್ಯೋಗಿಗಳನ್ನು ಕ್ಯಾಲಿಫೋರ್ನಿಯಾಗೆ ಕರೆದುಕೊಂಡು ಬರುವುದರ ಜೊತೆಗೆ ಕ್ಯಾಲಿಫೋರ್ನಿಯಾದ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ ಎಂದು ಅಟರ್ನಿ ಜನರಲ್ ಕಚೇರಿ ಆರೋಪಿಸಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಸುಮಾರು 500 ಕೆಲಸಗಾರರಿದ್ದು ಎಚ್‌-1 ವೀಸಾ ಬದಲು ಬಿ-1 ವೀಸಾ ಕೊಟ್ಟಿದೆ. ಈ ಮೂಲಕ ಕಂಪನಿ ತೆರಿಗೆ ವಂಚನೆ ಮಾಡಿದ್ದು ಇದೀಗ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಿದೆ. ಕಂಪನಿಯು ಎಚ್‌-1 ವೀಸಾ ನೀಡಿದರೆ ರಾಜ್ಯ ತೆರಿಗೆ ಅಲ್ಲದೆಯು ಸ್ಥಳೀಯ ವೇತನ ನೀಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+